ಒಂದೊಂದು ಪೊಸ್ಟಿಂಗ್ ಗೆ ಕೋಟ್ಯಾಂತರ ರೂಪಾಯಿ ಕೇಳ್ತಾರೆ, ಕಣ್ಣಾರೆ ನೋಡಿದ್ದೇನೆ ಎಂದು ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ರಾಜಕೀಯ ನಾಯಕರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. 

ವರದಿ: ಶರತ್ ಕಪ್ಪನಹಳ್ಳಿ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು(ಎ.6): ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ (Former Bengaluru Police commissioner Bhaskar Rao) ಈಗಾಗಲೇ ತಮ್ಮ ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ಅಮ್ ಆದ್ಮಿ ಪಕ್ಷ (AAP) ಸೇರ್ಪಡೆಯಾಗಿದ್ದಾರೆ. ಖಾಕಿ ಕಳಚಿಟ್ಟು ಅಮ್ ಆದ್ಮಿ ಪಕ್ಷಕ್ಕೆ‌ ಸೇರ್ಪಡೆಯಾಗುತ್ತಿದ್ದ ಹಾಗೇ ರಾಜಕೀಯ ನಾಯಕರ (Political Leader) ಭ್ರಷ್ಟಾಚಾರದ (corruption) ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ಬುಧವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಭಾಸ್ಕರ್ ರಾವ್, ತಾವು ಪೊಲೀಸ್ ವೃತ್ತಿಗೆ ಯಾಕೆ ರಾಜೀನಾಮೆ ನೀಡಿದ್ದು ಮತ್ತು ಅಮ್ ಆದ್ಮಿ ಪಕ್ಷಕ್ಕೆ ಯಾಕೆ ಸೇರ್ಪಡೆಯಾಗಿದ್ದು ಎಂಬುದದರ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.

ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ಗಗನಕ್ಕೆ ಏರಿದೆ. ಇದರ ವಿರುದ್ಧ ಪೊರಕೆ ಹಿಡಿದುಕೊಂಡು 
ಹೋರಾಟ ಮಾಡುತ್ತೆ ಎಂದರು. ನಾನು ಅಧಿಕಾರಿಯಾಗಿದ್ದಾಗ ಸಂದರ್ಭದಲ್ಲಿ ಎಲ್ಲ ಪಕ್ಷಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ. ರಾಜ್ಯದಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ, ಆದರೆ ನಾಯಕತ್ವದ ಕೊರತೆ ಇದೆ ಎಂಬ ಅಭಿಪ್ರಾಯಪಟ್ಟರು...ಎರಡು ಪಕ್ಷಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಯಾವುದೇ ಪಕ್ಷಕ್ಕೆ ಮತ್ತೊಬ್ಬರ ಮೇಲೆ ಆರೋಪ ಮಾಡುವ ನೈತಿಕತೆ ಇಲ್ಲ. ಎಲ್ಲ ಕಡೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು. 

ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದವರಿಂದ ವಿವಾದ ಸೃಷ್ಟಿ: ಸಿದ್ದರಾಮಯ್ಯ

ಒಂದೊಂದು ಪೊಸ್ಟಿಂಗ್ ಕೊಂಟ್ಯಾಂತರ ರೂಪಾಯಿ ಕೇಳ್ತಾರೆ: ಎಲ್ಲಾ‌ ಕಡೆ ಭ್ರಷ್ಟಾಚಾರವಿದೆ ಕೇವಲ ಭ್ರಷ್ಟಾಚಾರಕ್ಕೆ ಅಧಿಕಾರಗಳನ್ನ ಬ್ಲೇಮ್ ಮಾಡಿದ್ರೆ ಆಗೋದಿಲ್ಲ. 
ಒಂದೊಂದು ಪೊಸ್ಟಿಂಗ್ ಗೆ ಕೋಟ್ಯಾಂತರ ರೂಪಾಯಿ ಕೇಳ್ತಾರೆ, ನಾನು ಕಣ್ಣಾರೆ ನೋಡಿದ್ದೇನೆ ..ನಾನು ಪೊಲೀಸ್ ಕಮಿಷನರ್ ಆದ್ರೂ ಒಂದೇ ಒಂದು ಇನ್ಸೆಪೆಕ್ಟರ್ ಪೊಸ್ಟ್ ಹಾಕಿಸಿಕೊಳ್ಳಲು ಆಗಲಿಲ್ಲ..ಜನರ ಪರವಾಗಿ ನಾವು ಮಾತನಾಡಿದರೆ ರಾಜಕೀಯ ನಾಯಕರಿಗೆ ಕೋಪ ಬರುತ್ತದೆ. ರಾಜಕಾರಣಿಗಳು ನಮ್ಮ ನಿಮ್ಮ ಹಣದಿಂದ ಐಶಾರಾಮಿ ಕಾರು ಖರೀದಿ, ಅಪಾರ್ಟ್ಮೆಂಟ್ ಖರೀದಿ ಮಾಡುತ್ತಾರೆ ಎಂದು ಕಿಡಿಕಾರಿದರು.

ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಬೇರೆ ಮಾಡಿದ್ದಾರೆ.‌ ಪ್ರಧಾನ ಮಂತ್ರಿಗಳ ತನಕ ಪತ್ರ ಬರೆದಿದ್ದಾರೆ. ಎಲ್ಲಾ ನಮ್ಮ ದುಡ್ಡಿನಿಂದ ಲ್ಯಾಂಡ್ ರೋವ್ ತರಹ ಐಶಾರಾಮಿ ಕಾರು ಖರೀದಿ‌ ಮಾಡಿದ್ದಾರೆ. ಮುಗ್ದ ಜನರಿಗೆ ದುಡ್ಡು ಕೊಟ್ಟು ಓಟ್ ಪಡೆದುಕೊಳ್ಳುತ್ತಿದ್ದಾರೆ. ಸ್ವಚ್ಛ ಆಡಳಿತ ಎರಡು ರಾಷ್ಟ್ರೀಯ ಪಕ್ಷಗಳಿಂದ ಕೊಡಲು ಆಗಿಲ್ಲ. ಸರ್ಕಾರದಲ್ಲಿ ಹಣದ ಕೊರತೆ‌ ಇಲ್ಲ. ಪ್ರಾಮಾಣಿಕತೆ ಕೊರತೆ ಇದೆ. ಹಣ ಕೊಟ್ಟು ರಾಜಕೀಯ ಪಕ್ಷಗಳು ಓಟು ಪಡೆದುಕೊಳ್ಳುತ್ತಿವೆ. ಬೆಂಗಳೂರು ನಗರದಲ್ಲಿ ಅಪರಾಧಿಗಳ ಜೊತೆ ರಾಜಕಾರಣಿಗಳು ಶಾಮೀಲಾಗುತ್ತಿದೆ ಎಂದು ಐಎಂಎ ಹಗರಣ, ರಾಘವೇಂದ್ರ ಬ್ಯಾಂಕ್ ಹಗರಣಗಳ ಉದಾಹರಣೆ ನೀಡಿದರು.

ಮುಂದಿನ ದಿನಗಳಲ್ಲಿ ನನ್ನ ಮೇಲೆ ಕೇಸ್, ರೇಡ್ ಗಳು ನಡೆದರೂ ಅದನ್ನು ಎದುರಿಸಲು ನಾನು ತಯಾರಾಗಿದ್ದೇನೆ. ಕನ್ನಡಿಗರ ಪರವಾಗಿ ಹೋರಾಟ ಮಾಡುಲು ಸಿದ್ದನಾಗಿದ್ದೇನೆ.. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಂದಿದ್ದೇನೆ, ಬಡವರ ಪರವಾಗಿ ಕೆಲಸ ಮಾಡಲು ಬಂದಿದ್ದೇನೆ. ರಾಜಕೀಯ ಹುದ್ದೆ ಆಕಾಂಕ್ಷೆಯಿಂದ ಬೇರೆ ಪಕ್ಷಕ್ಕೆ ಹೋಗಿಲ್ಲ.‌ ನನಗೆ ಎಂಎಲ್ ಎ, ಸಂಸದ ಮಾಡಿ ಅಂತ ದೊಡ್ಡ ಪಕ್ಷಕ್ಕೆ ಹೋಗಲಿಲ್ಲ. ಬದಲಾಗಿ ಅಣ್ಣಾ ಹಜಾರೆ ಹೋರಾಟ, ಕೇಜ್ರೀವಾಲ್ ಆಡಳಿತ ನೋಡಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.

JJNAGAR CHANDRU MURDER CASE ಮನೆಗೆ ಭೇಟಿ ನೀಡಿ ಸಾಂತ್ವಾನ, ಬಿಜೆಪಿಯಿಂದ ₹5 ಲಕ್ಷ ಪರಿಹಾರ

ಕೆಲ IAS ಮತ್ತು IPS ಅಧಿಕಾರಿಗಳು AAP ಪಕ್ಷಕ್ಕೆ ಸರ್ಪಡೆಯಾಗ್ತಾರೆ..!: ಈಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ AAP ಸೇರ್ಪಡೆಯಾಗಿರುವ ಭಾಸ್ಕರ್ ರಾವ್ ಶೀಘ್ರದಲ್ಲೇ ಕೆಲ ಒಳ್ಳೆಯ ಅಧಿಕಾರಿಗಳು AAP ಪಕ್ಷಕ್ಕೆ ಸರ್ಪಡೆಯಾಗಲಿದ್ದಾರೆ ಯಾರೆಲ್ಲಾ ಸರ್ಪಡೆಯಾಗ್ತಾರೆ ಕಾದು ನೋಡಿ‌ ಎಂದರು...ಈ ಮೂಲಕ ಕೆಲ‌ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ಪಕ್ಷಕ್ಕೆ ಬರುವ ಸುಳಿವು ನೀಡಿದ್ರು...

ಮುಖ್ಯವಾದ ವಿಚಾರಗಳನ್ನ ಮರೆಮಾಚಲು ಹಿಜಾಬ್ ,ಹಲಾಲ್ ಗದ್ದಲ: ಇನ್ನೂ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಹಿಜಾಬ್ ಹಲಾಲ್‌ ಚರ್ಚೆ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ ಭಾಸ್ಕರ್ ರಾವ್ ನಾವೆಲ್ಲರೂ ಭಾರತೀಯರು... ಮುಖ್ಯವಾದ ವಿಷಯಗಳಾದ ಬೆಲೆ ಏರಿಕೆ, ಜನಸಾಮಾನ್ಯರು ಸತ್ತು ಹೋಗುತ್ತಿದ್ದಾರೆ. ಅದಕ್ಕೆ ಉತ್ತರ ಕೊಡಲು ಸಾಧ್ಯವಾಗದೆ ಮರೆ ಮಾಚುವ ಉದ್ದೇಶದಿಂದ ಇದನ್ನು ಮುನ್ನಲೆಗೆ ತರಲಾಗುತ್ತದೆ. ಇವೆಲ್ಲವೂ ಬಹಳ ದಿನಗಳ ಹಿಂದಿನಿಂದ ಇದೆ. ಇದನ್ನು ಸರಿಪಡಿಸಲು ಸಾಧ್ಯ. ಸಮಾಧಾನದಿಂದ ಇದನ್ನು ಬಗೆಹರಿಸಿದರೆ ಸಮಸ್ಯೆ ಇತ್ಯರ್ಥ ಆಗುತ್ತದೆ" ಸರ್ಕಾರ ಜನರಿಗೆ ಏನು ಬೇಕು, ಸಂಘ ಸಂಸ್ಥೆಗಳಿಗೆ ಏನು ಬೇಕು ಎಂಬುವುದನ್ನು ಕೂತು ಚರ್ಚಿಸಿ ಇತ್ಯರ್ಥ ಪಡಿಸಬೇಕು. ಬದಲಾಗಿ ಮುಸುಕಿನ ಗುದ್ದಾಟ ಮಾಡಿಕೊಳ್ಳಬಾರದು. ನಾವೆಲ್ಲರೂ ಒಟ್ಟಿಗೆ ಬದುಕಿದ್ದೇವೆ. ನಮ್ಮ ದೇಶ, ರಾಜ್ಯದ ಜನರ ಡಿಎನ್ ಎ‌ ಒಂದೇ ಆಗಿದೆ.ಈ ಸಮಸ್ಯೆಗಳನ್ನು ನಾವೇ ಬಗೆಹರಿಸಲು ಸಾಧ್ಯ. ಸರ್ಕಾರದ ಮೇಲೆ ನಂಬಿಕೆ ಇಡೋಣ. ಸಮಸ್ಯೆ ಬಗೆಹರಿಯಬಹುದು ಎಂದರು...

ನಾನು‌ ಕಣ್ಣೀರು ಹಾಕಿದ್ದೆ: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಆಗ ಡಿಸಿಎಂ ಅಶ್ವಥ್ ನಾರಾಯಣ ನನ್ನ ಮೇಲೆ ಆರೋಪ ಮಾಡಿದಾಗ ಆಗ ನಾನು ಕಣ್ಣೀರು ಹಾಕಿದ್ದೆ. ನನ್ನ ಮೇಲೆ ಇಂತಹ ಆರೋಪ ಬಂತಲ್ಲ ಎಂದು. ಕೂಡಲೇ ನನ್ನ ರಾಜೀನಾಮೆ ಪಡೆದುಕೊಳ್ಳಿ ಎಂದಿದ್ದೆ. ಆದ್ರೆ ಆಗ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಗೃಹ ಸಚಿವರಾದ ಬೊಮ್ಮಾಯಿ‌ಯವರು ಸಮಾಧಾನಿಸಿದ್ರು.

ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ‌ ಮೇಲೆ ಗೌರವವಿದೆ. ನನ್ನ ಮೇಲೆ ಆರೋಪ ಬಂದಿತ್ತಲ್ಲ ಅವತ್ತೇ ಅವರು ಸಿಐಡಿ ಮತ್ತು ಸಿಬಿಐಗೆ ಕೊಡಬಹುದಿತ್ತಿಲ್ವಾ? 
ಮುಖ್ಯಮಂತ್ರಿ ಯಡಿಯೂರಪ್ಪ ಅವತ್ತು ರಾತ್ರಿ ನನ್ನನ್ನು ಮನೆಗೆ ಕರೆಸಿ ಸಮಾಧಾನಿಸಿದ್ರು. ಇದು ನಿನಗೆ ಮಾಡಿದ ಅವಮಾನ ಅಲ್ಲ ಇದು ನನಗೆಯಾದ ಅವಮಾನ ಎಂದು ಸಮಾಧಾನಿಸಿದ್ರು ಎಂದು ಆಗ ತಮ್ಮ ಮೇಲೆ ಬಂದ ಆರೋಪದ ಘಟನೆಯನ್ನ ಭಾಸ್ಕರ್ ರಾವ್ ವಿವರಿಸಿದ್ರು.