ಲಾಕ್‌ಡೌನ್ ಸಡಿಲಗೊಂಡ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೋಟೆಲ್‌ಗೆ ದೋಸೆ ಸವಿದಿದ್ದಾರೆ.

ಬೆಂಗಳೂರು, (ಜೂ.13): ಬಹುದಿನಗಳ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು (ಶನಿವಾರ) ಹೋಟೆಲ್‍ಗೆ ತೆರಳಿ ಉಪಹಾರ ಸೇವಿಸಿದ್ದಾರೆ. ಕಾರ್ಯಕ್ರಮವೊಂದಕ್ಕೆ ತೆರಳಿ ಬಳಿಕ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮಾರ್ಗಮಧ್ಯೆ ಲಾಲ್‍ಬಾಗ್‍ ಬಳಿ ಇರುವ ಎಂಟಿಆರ್ ಹೋಟೆಲ್‍ಗೆ ಹೋಗಿ ಸ್ಪೆಷಲ್ ದೋಸೆ, ಇಡ್ಲಿ ಮತ್ತು ವಡೆ ಸವಿದರು.

"

ಬಿಎಸ್‌ವೈ ಶಿಫಾರಸಿಗೆ ನಕಾರ; ಇದು 3 ನೇ ಶಾಕ್‌ ಟ್ರೀಟ್‌ಮೆಂಟ್..!

ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಾದ ನಂತರ ಸಿಎಂ ಯಡಿಯೂರಪ್ಪನವರು ಹೋಟೆಲ್‍ಗೆ ತೆರಳಿರಲಿಲ್ಲ. ಇತ್ತೀಚೆಗೆ ಹೋಟೆಲ್‍ಗಳು ಪುನರಾರಂಭವಾದ ನಂತರ ಇದೇ ಮೊದಲ ಬಾರಿಗೆ ಸಿಎಂ ಎಂಟಿಆರ್‌ಗೆ ಭೇಟಿ ನೀಡಿ ಹೋಟೆಲ್‌ನ ಸ್ಪೆಷಲ್ ದೋಸೆ ಸವಿದು ಬಾಯಿ ಚಪ್ಪರಿಸಿದರು. 

Scroll to load tweet…

 ಬಿಎಸ್‍ವೈಗೆ ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ್ ಕೂಡ ಇದ್ದರು.

"