Karnataka Politics: ಮೊದಲಿಗೆ ಸುಮಲತಾ ಬೆಂಬಲಿಗರು ಬಿಜೆಪಿ ಸೇರ್ಪಡೆ: ಯೋಗೇಶ್ವರ್
* ಸೂಕ್ತ ಸಮಯದಲ್ಲಿ ಪಕ್ಷ ಸೇರ್ಪಡೆ ನಿರ್ಧಾರ ಕೈಗೊಳ್ಳುವ ಭರವಸೆ
* ಸುಮಲತಾರವರು ಬಿಜೆಪಿ ಸೇರ್ಪಡೆಯಾಗಲು ಕಾನೂನು ತೊಡಕು
* ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲು ಆಗಲ್ಲ
ರಾಮನಗರ(ಜೂ.04): ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಗೆ ಯಾವುದೇ ಷರತ್ತು ಅಥವಾ ಬೇಡಿಕೆಗಳನ್ನು ಈವರೆಗೆ ಮುಂದಿಟ್ಟಿಲ್ಲ. ಸೂಕ್ತ ಸಮಯದಲ್ಲಿ ಪಕ್ಷ ಸೇರ್ಪಡೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಶ್ರೀರಂಗಪಟ್ಟಣ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರದ ವಿಚಾರವಾಗಿ ಸುಮಲತಾರವರು ಯಾವ ಷರತ್ತನ್ನೂ ಹಾಕಿಲ್ಲ. ಈಗಾಗಲೇ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಅವರ ಬೆಂಬಲಿಗ ಸಚ್ಚಿದಾನಂದ ಬಿಜೆಪಿ ಸೇರ್ಪಡೆಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಮೊದಲ ಹಂತದಲ್ಲಿ ಸುಮಲತಾ ಬೆಂಬಲಿಗರು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ ಎಂದರು.
ನನಗೆ ರಾಜಕೀಯ ಅನಿವಾರ‍್ಯವಲ್ಲ, ಪಕ್ಷ ಸೇರ್ಪಡೆ ಯೋಚಿಸಿಲ್ಲ: ಸುಮಲತಾ ಅಂಬರೀಶ್
ಈಗ ಸುಮಲತಾರವರು ಬಿಜೆಪಿ ಸೇರ್ಪಡೆಯಾಗಲು ಕಾನೂನು ತೊಡಕು ಇದೆ. ಯಾವುದೇ ಸಂಸದರು, ಶಾಸಕರಾಗಲಿ ಗೆದ್ದ ಆರು ತಿಂಗಳೊಳಗೆ ಯಾವುದಾದರು ಪಕ್ಷ ಸೇರಬಹುದು. ಆರು ತಿಂಗಳ ನಂತರ ಬೆಂಬಲ ನೀಡಬಹುದು ಅಷ್ಟೆ. ಆದರೆ, ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲು ಆಗಲ್ಲ ಎಂದು ಯೋಗೇಶ್ವರ್ ಹೇಳಿದರು.