Asianet Suvarna News Asianet Suvarna News

Congress convention: ಬಿಜೆಪಿ ಶಕ್ತಿ ಕೇಂದ್ರ ಹುಬ್ಬಳ್ಳಿ-ಧಾರವಾಡದಲ್ಲಿ ಅಬ್ಬರಿಸಿದ ಕಾಂಗ್ರೆಸ್‌!

ಬಿಜೆಪಿ ಶಕ್ತಿ ಕೇಂದ್ರವೆನಿಸಿರುವ ಹುಬ್ಬಳ್ಳಿ- ಧಾರವಾಡದಲ್ಲಿ ನಮ್ಮ ತಾಯಿ ಮಹದಾಯಿ ಜಲ- ಜನಾಂದೋಲನ ಸಮಾವೇಶವನ್ನು ನಡೆಸುವ ಮೂಲಕ ಕಾಂಗ್ರೆಸ್‌ ಶಕ್ತಿ ಪ್ರದರ್ಶನ ಮಾಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ 2023ರ ವಿಧಾನಸಭೆ ಚುನಾವಣೆಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ ರಣಕಹಳೆ ಮೊಳಗಿಸಿತು.

Congress convention in power center Hubli-Dharwad rav
Author
First Published Jan 3, 2023, 11:31 AM IST

ಹುಬ್ಬಳ್ಳಿ (ಜ.3) : ಬಿಜೆಪಿ ಶಕ್ತಿ ಕೇಂದ್ರವೆನಿಸಿರುವ ಹುಬ್ಬಳ್ಳಿ- ಧಾರವಾಡದಲ್ಲಿ ನಮ್ಮ ತಾಯಿ ಮಹದಾಯಿ ಜಲ- ಜನಾಂದೋಲನ ಸಮಾವೇಶವನ್ನು ನಡೆಸುವ ಮೂಲಕ ಕಾಂಗ್ರೆಸ್‌ ಶಕ್ತಿ ಪ್ರದರ್ಶನ ಮಾಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ 2023ರ ವಿಧಾನಸಭೆ ಚುನಾವಣೆಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ ರಣಕಹಳೆ ಮೊಳಗಿಸಿತು.

ಇಲ್ಲಿನ ನೆಹರು ಮೈದಾನ(Neharu ground)ದಲ್ಲಿ ನಡೆದ ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದು ವಿಶೇಷ. ಕಳಸಾ- ಬಂಡೂರಿ ವ್ಯಾಪ್ತಿಯ ಹುಬ್ಬಳ್ಳಿ-ಧಾರವಾಡ(Hubballi-dharwad), ಬಾಗಲಕೋಟೆ, ಗದಗ, ಬೆಳಗಾವಿ ಜಿಲ್ಲೆಗಳಿಂದ ಜನಸ್ತೋಮ ಆಗಮಿಸಿತ್ತು. ಬಸ್‌, ಟ್ರ್ಯಾಕ್ಟರ್‌ಗಳಲ್ಲಿ ಜನ ತಂಡೋಪತಂಡವಾಗಿ ಆಗಮಿಸಿತ್ತು. ಮೈದಾನ ಕಿಕ್ಕಿರಿದು ತುಂಬಿತ್ತು. ಮೈದಾನದೊಳಗೆ ತೆರಳಲು ಸಾಧ್ಯವಾಗದವರು ಹೊರಗೆ ನಿಂತು ಮುಖಂಡರ ಭಾಷಣ ಕೇಳುವಲ್ಲಿ ತಲ್ಲೀನರಾಗಿದ್ದರು. ಮೈದಾನದೊಳಗೆ ಬರಲು ಸಾಧ್ಯವಾಗದವರಿಗಾಗಿ ಮೂರ್ನಾಲ್ಕು ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀನ್‌ ಮೂಲಕ ಭಾಷಣ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು. ಸಮಾವೇಶಕ್ಕೆ ಆಗಮಿಸಿದ್ದ ಕಾರ್ಯಕರ್ತರಿಗಾಗಿ ಮೈದಾನದ ಪಕ್ಕದಲ್ಲೇ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ರಾಷ್ಟ್ರೀಯ ಯುವಜನೋತ್ಸವದ ಯಶಸ್ಸು ಧಾರವಾಡ ಕೀರ್ತಿ ಹೆಚ್ಚಿಸುತ್ತದೆ: ಉಸ್ತುವಾರಿ ಸಚಿವ

ಕಾಂಗ್ರೆಸ್‌ ಸಮಾವೇಶ(Congress convention)ಕ್ಕಾಗಿ ಬೆಳಿಗ್ಗೆಯಿಂದಲೇ ನಗರದಲ್ಲಿ ಅಬ್ಬರತೆ ಕಾಣಿಸುತ್ತಿತ್ತು. ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಬೈಕ್‌ ರಾರ‍ಯಲಿ ನಡೆಸಿದ್ದರು. ಮಹದಾಯಿ ನಮ್ಮ ಜೀವನಾಡಿ. ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತಾ ಜನತೆ ಮಧ್ಯಾಹ್ನ 12ರಿಂದಲೇ ಮೈದಾನದತ್ತ ಹೆಜ್ಜೆ ಹಾಕಲು ಶುರು ಮಾಡಿದ್ದರು. ಎಲ್ಲೆಡೆ ಕಾಂಗ್ರೆಸ್‌ ಮುಖಂಡರ ಬ್ಯಾನರ್‌ಗಳು, ಕಟೌಟ್‌ಗಳು ರಾರಾಜಿಸುತ್ತಿದ್ದವು.

ಮಹದಾಯಿ(Mahadayi dispute issue) ವಿಷಯವಾಗಿ ಬಿಜೆಪಿ ಸರ್ಕಾರ(BJP govt) ಹೇಗೆ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಹಿಂದೆ 2018ರಲ್ಲಿ ಇದೇ ಮೈದಾನದಲ್ಲಿ ಬಿಜೆಪಿಗರು ಏನೆಲ್ಲ ಭರವಸೆ ನೀಡಿದ್ದರು. ಆದರೆ ಮಾಡಿದ್ದೇನು? ಎಂಬುದನ್ನು ಕೈ ಪಡೆಯ ಮುಖಂಡರೆಲ್ಲರೂ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡುತ್ತಿದ್ದರು. ಎಲ್ಲರ ಮಾತುಗಳು ಮಹದಾಯಿ ಸುತ್ತವೇ ಹೆಚ್ಚಿತ್ತು. ಆದರೂ ನೀರಾವರಿ ವಿಷಯವಾಗಿ ಬಿಜೆಪಿಯ ವೈಫಲ್ಯ ತಿಳಿಸುತ್ತಿದ್ದರು. ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಕಳಸಾ- ಬಂಡೂರಿಗೆ ಮುಕ್ತಿ ಎಂದೆಲ್ಲ ಸಾರಿ ಸಾರಿ ಹೇಳುತ್ತಿದ್ದ ಮುಖಂಡರು, ಸುಳ್ಳು ಹೇಳುವ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಿರಿ. ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಚುನಾವಣಾ ರಣಕಹಳೆ ಮೊಳಗಿಸಿದ ಸಮಾವೇಶ, ಕಾಂಗ್ರೆಸ್ಸಿಗರೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸಾರುವಲ್ಲಿ ಯಶಸ್ವಿಯಾಯಿತು.  ಜ.6ಕ್ಕೆ ಕಾಂಗ್ರೆಸ್‌ನಿಂದ ‘ನಾ ನಾಯಕಿ’ ಸಮಾವೇಶ

Follow Us:
Download App:
  • android
  • ios