ಮಾಜಿ ಸಚಿವ ವರ್ತೂರು ಪ್ರಕಾಶ್ ವಿರುದ್ಧ ಕೇಸ್ ಬುಕ್: ಕಾರಣ..?

* ಮಾಜಿ ಸಚಿವ ವರ್ತೂರು ಪ್ರಕಾಶ್ ವಿರುದ್ಧ ದೂರು ದಾಖಲು
* ಕೊರೋನಾ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ
* ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಸಭೆ ಮಾಡಿದ್ದ  ವರ್ತೂರು ಪ್ರಕಾಶ್

FIR registered against Varthur Prakash By Kolar Police For Covid 19 Guidelines rbj

ಕೋಲಾರ, (ಅ.02): ಮಾಜಿ ಸಚಿವ ವರ್ತೂರು ಪ್ರಕಾಶ್ ವಿರುದ್ಧ ಕೊರೋನಾ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ. 

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಕೋಲಾರ ನಗರದ ಚೊಕ್ಕ ಕನ್ವೆನ್ಷನ್ ಹಾಲ್​ನಲ್ಲಿ ಕೊರೋನಾ ಗೈಡ್‌ಲೈನ್ಸ್ ಉಲ್ಲಂಘಿಸಿ ಸಭೆ ಮಾಡಿರುವುರಿಂದ ವರ್ತೂರು ಪ್ರಕಾಶ್ ಎಫ್‌ಐಆರ್ ದಾಖಲಾಗಿದೆ.

ಕಾಂಗ್ರೆಸ್ ಸೇರ್ಪಡೆಗೆ ಹಿರಿಯ ನಾಯಕ ಅಡ್ಡಗಾಲು: ವರ್ತೂರ್ ಪ್ರಕಾಶ್ ಕೆಂಡಾಮಂಡಲ

ಕೆಲವು ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಸಂಬಂಧ ಕಾರ್ಯಕರ್ತರ ಸಭೆಯನ್ನ ನಡೆಸಿದ್ದರು. ಕೋಲಾರ ನಗರದ ಕಲ್ಯಾಣ ಮಂಟಪ ಒಂದರಲ್ಲಿ ನಡೆದ ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಈ ವೇಳೆ ಮಾಜಿ ಸಚಿವರು ಬಿರಿಯಾನಿ ಊಟ ಹಾಕಿಸಿದ್ದರು. ಆಗ ಕಾರ್ಯಕರ್ತರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳದೇ ಭಾಗಿಯಾಗಿದ್ದರು. ಇದರಿಂದ ಕೊರೊನಾ ನಿಯಮ ಉಲ್ಲಂಘನೆ ಮಾಡಿರೋದು ಸ್ಪಷ್ಟವಾಗಿತ್ತು. 

ಇನ್ನು ಈ ಕಾರ್ಯಕ್ರಮದಲ್ಲಿ ವರ್ತೂರು ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸೇರಿದಂತೆ ಹಲವು ಮುಖಂಡರುಗಳು ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios