Asianet Suvarna News Asianet Suvarna News

ಕೊಪ್ಪಳ: ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಆರ್ಥಿಕ ಭದ್ರತೆ, ಶಾಸಕ ಹಿಟ್ನಾಳ

ಈ ಯೋಜನೆಗಳಿಂದ ಬಡವರಿಗೆ ಶಕ್ತಿ ತುಂಬುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ. ಈ ಯೋಜನೆಗಳಿಂದ ಪ್ರತಿ ಮನೆಗೆ 4 ರಿಂದ 5 ಸಾವಿರ ಹಣ ಸಂದಾಯವಾಗುತ್ತಿದೆ. ಈ ಮೂಲಕ ಬಡತನ ನಿರ್ಮೂಲನೆಯ ಕನಸು ಹೊತ್ತು ದಿಟ್ಟಹೆಜ್ಜೆಯ ಕನಸು ನನಸಾಗುತ್ತಿದೆ ಎಂದ ಶಾಸಕ ರಾಘವೇಂದ್ರ ಹಿಟ್ನಾಳ 

Financial Security for the Poor Through Guarantee Schemes Says Raghavendra Hitnal grg
Author
First Published Aug 19, 2023, 11:00 PM IST

ಕೊಪ್ಪಳ(ಆ.19):  ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಾಗುವದರ ಜತೆಗೆ ಆರ್ಥಿಕ ಭದ್ರತೆ ಒದಗುತ್ತದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ಗಿಣಗೇರಾ ಹಾಗೂ ಹಿಟ್ನಾಳ ಜಿಪಂ ವ್ಯಾಪ್ತಿಯ ಗಬ್ಬೂರು, ಗುಳದಲ್ಲಿ ಕೆರೆಹಳ್ಳಿ ಲಿಂಗದಹಳ್ಳಿ, ಶಹಾಪುರ ಹಾಗೂ ಬೇವಿನಹಳ್ಳಿ ಗ್ರಾಮಗಳಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್‌ ನುಡಿದಂತೆ ನಡೆಯುವ ಪಕ್ಷ. ಚುನಾವಣೆ ಪ್ರಣಾಳಿಕೆ ಘೋಷಣೆ ಮಾಡಿದ್ದ 5ಭರವಸೆಗಳ ಪೈಕಿ ಅನ್ನಭಾಗ್ಯ,ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆ ಎಂಬ 3 ಭರವಸೆ ಈಡೇರಿಸಿದ್ದೇವೆ. ಗೃಹಲಕ್ಷ್ಮಿ ಯೋಜನೆಗೂ ಕೂಡ ಇದೇ ತಿಂಗಳ ಬೆಳಗಾವಿಯಲ್ಲಿ ಚಾಲನೆ ನೀಡಲಿದ್ದೇವೆ. ಯುವನಿಧಿ ಯೋಜನೆಯನ್ನ ಡಿಸೆಂಬರ್‌ನಲ್ಲಿ ಜಾರಿ ಮಾಡಲಾಗುವುದು.ಕೆ ಲವೊಬ್ಬರು ಈ ಯೋಜನೆಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನುಡಿದಂತೆ ನಡೆಯುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ಯೋಜನೆಗಳಿಂದ ಬಡವರಿಗೆ ಶಕ್ತಿ ತುಂಬುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ. ಈ ಯೋಜನೆಗಳಿಂದ ಪ್ರತಿ ಮನೆಗೆ 4 ರಿಂದ 5 ಸಾವಿರ ಹಣ ಸಂದಾಯವಾಗುತ್ತಿದೆ. ಈ ಮೂಲಕ ಬಡತನ ನಿರ್ಮೂಲನೆಯ ಕನಸು ಹೊತ್ತು ದಿಟ್ಟಹೆಜ್ಜೆಯ ಕನಸು ನನಸಾಗುತ್ತಿದೆ ಎಂದರು.

ಬಾಂಬೆ ಬಾಯ್ಸ್‌ ಅಷ್ಟೇ ಅಲ್ಲ ಬಿಜೆಪಿ, ಜೆಡಿಎಸ್‌ನಲ್ಲಿ ಯಾವ ಶಾಸಕರೂ ಇರೋಲ್ಲ: ತಂಗಡಗಿ

ಮಾದರಿ ಕ್ಷೇತ್ರ:

ಕೊಪ್ಪಳ ವಿಧಾನಸಭ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿ ಹೆಚ್ಚಿನ ಅನುಧಾನ ತಂದು ಶೈಕ್ಷಣಿಕ,ಅರೋಗ್ಯ,ನೀರಾವರಿ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಪ್ರಯತ್ನ ಮಾಡಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ನಂ.1 ಕ್ಷೇತ್ರವನ್ನಾಗಿ ಮಾಡುವೆ ಎಂದರು.

ಮೊಟ್ಟೆ ವಿತರಣೆ:

ಗುಳದಲ್ಲಿ ಗ್ರಾಮದಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು,ಶೇಂಗಾಚಕ್ಕಿ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತುಂಗಭದ್ರಾ ಕಾಲುವೆಗೆ ನ.30ರವರೆಗೆ ನೀರು: ಸಚಿವ ಶಿವರಾಜ ತಂಗಡಗಿ

ಬೋರವೆಲ್‌ ಪಂಪ್‌ ಮೋಟಾರ್‌ ವಿತರಣೆ:

ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ 2022-23ನೇ ಸಾಲಿನ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಡಿಯಲ್ಲಿ ಶಾಸಕರ ಅನುದಾನದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪಂಪ್‌ ಮೋಟಾರ ಹಾಗೂ ಪೂರಕ ಸಾಮಗ್ರಿಗಳ ವಿತರಣೆ ಮಾಡಿದರು.

ಜಿಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ, ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ರಡ್ಡಿ, ತಹಸೀಲ್ದಾರ್‌ ವಿಠ್ಠಲ್‌ ಚೌಗಲೆ, ತಾಪಂ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಡುಂದೇಶ ತುರಾದಿ, ಅಲಿ ಸಾಬ…,ಗಿರೀಶ್‌ ಹಿರೇಮಠ, ನಿಂಗಜ್ಜ ಶಹಾಪುರ, ಸಿದ್ದರಾಮಪ್ಪ ಕೆರೆಹಳ್ಳಿ, ಅಣ್ಣಪ್ಪ ಗಬ್ಬುರು, ಕುಬೇರಪ್ಪ ಗಬ್ಬೂರು, ಹನಮಂತಪ್ಪ ಹುಲಿಗಿ, ಗುಡದಪ್ಪ ಗುಳದಲ್ಲಿ, ರಮೇಶ ಹೊಳೆಯಾಚಿ, ಮುರಳಿ ಲಿಂಗದಳ್ಳಿ, ಮುದ್ದಪ್ಪ ಬೇವಿನಳ್ಳಿ, ನಾಗರಾಜ ಬಹದ್ದೂರ ಬಂಡಿ, ಶಿವಮೂರ್ತಿ ಬೇವಿನಳ್ಳಿ, ನಗರಸಭ ಸದಸ್ಯ ವಕ್ತಾರ ಅಕ್ಬರ ಪಲ್ಟಾನ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow Us:
Download App:
  • android
  • ios