Asianet Suvarna News Asianet Suvarna News

ರಾಜ್ಯದ ಗಮನ‌ಸೆಳೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಜಯ

ರಾಜ್ಯದ ಗಮನ ಸೆಳೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದು, ಆಡಳಿತರೂಢ ಬಿಜೆಪಿಗೆ ಭಾರೀ ಮುಖಭಗವಾಗಿದೆ. ಏನೇ ಹೈಡ್ರಾಮ ಮಾಡಿದರೂ ಬಿಜೆಪಿಯ ಪ್ಲಾನ್ ಸಕ್ಸಸ್ ಆಗಲಿಲ್ಲ.

Finally Congress Wins In gangavathi municipality President Election rbj
Author
Bengaluru, First Published Nov 2, 2020, 10:25 PM IST

ಕೊಪ್ಪಳ, (ನ.02): ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮಾಡಿದ್ದ ಪ್ಲಾನ್‌ಗಳೆಲ್ಲಾ ಉಲ್ಟಾ ಆಗಿದ್ದು, ಅಂತಿಮವಾಗಿ ಗಂಗಾವತಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆ ಕೈ ವಶವಾಗಿದೆ.

ಹೌದು..ನಗರಸಭೆ ಸದಸ್ಯನ ಅಪಹರಣದಿಂದಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದೀಗ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ರೋಚಕವಾಗಿ ಹಾಗೂ ಶಾಂತಿಯುತವಾಗಿ ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್‌ ಮಾಲಾಶ್ರೀ ಸಂದೀಪ್ ಮತ್ತು  ಬಿಜೆಪಿಯ ಸುಧಾ ಸೋಮನಾಥ ಕಂಪ್ಲಿ ಅವರು ಕಾಂಗ್ರೆಸ್‌ಗೆ ಬೆಂಬಲಿಸುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇದರಿಂದ ಬಿಜೆಪಿಯ ಕನಸು ನುಚ್ಚುನೂರಾಗಿದೆ.

ಸಿನಿಮೀಯ ಮಾದರಿ ಗಂಗಾ​ವತಿ ನಗ​ರ​ಸಭೆ ಸದ​ಸ್ಯನ ಅಪ​ಹರ​ಣ..!

ಬಿಜೆಪಿ ಕೆಲವರು ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಸದಸ್ಯನನ್ನು ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಮಾಡಿದ್ದು, ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಆದರೂ ಕೊನೆಯಲ್ಲಿ ಗಂಗಾವತಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆ ಕೈ ವಶವಾಗಿದೆ.

ಅಧ್ಯಕ್ಷ ಉಪಾಧ್ಯಕ್ಷರ‌ ಚುನಾವಣಾಧಿಯಾಗಿ‌ ಸಹಾಯಕ ಆಯುಕ್ತ ನಾರಾಯಣ ರೆಡ್ಡಿ ಕನಕರೆಡ್ಡಿ ಕಾರ್ಯ ನಿರ್ವಹಿಸುದರು.
ಯಾವುದೇ ಅಹಿತಕರ ಘಟನೆಯಾಗದಂತೆ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತೀವ್ರ ಕುತೂಹಲ ಮೂಡಿಸಿದ್ದ ನಗರಸಭೆ ಚುನಾವಣೆಗೂ‌ ಮುಂಚೆ ಬಿಜೆಪಿ ಸದಸ್ಯೆ ಸುಧಾಸೋಮನಾಥ ಕಾಂಗ್ರೆಸ್ ಪಾಳೆಯಕ್ಕೆ ಜಂಪ್ ಆಗಿದ್ದರು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಗರಸಭೆ ಸದಸ್ಯ‌ ಮನೋಹರಸ್ವಾಮಿ ಹಿರೇಮಠ ಅವರನ್ನು ಕಿಡ್ನಾಪ್ ಮಾಡಿ ಹಳಿಯಾಳದಲ್ಲಿ ಪೊಲೀಸರ ಕೈ ಗೆ ಸಿಕ್ಕು ಹಾಕಿಕೊಂಡಿದ್ದಾರೆ. ನಂತರ ಬಿಜೆಪಿ ಕಾಂಗ್ರೆಸ್ ಮುಖಂಡರು ಪರಸ್ಪರ ದೂರು ದಾಖಲಿಸಿದ್ದರು. ಇದರಿಂದ ‌ಗಂಗಾವತಿ ಬಿಗುವಿನ‌ ವಾತಾವರಣ ಉಂಟಾಗಿತ್ತು. ಕೊನೆಯಲ್ಲಿ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ಅಂತ್ಯಕಂಡಿದೆ.

Follow Us:
Download App:
  • android
  • ios