ಕರ್ನಾಟಕದಲ್ಲಿ ದಲಿತ ಸಿಎಂ ಹೋರಾಟ ನಿಲ್ಲದು: ಬಿಜೆಪಿ ಸಂಸದ ಜಿಗಜಿಣಗಿ
75 ವರ್ಷಗಳಲ್ಲಿ ಎಲ್ಲ ಸಮಾಜದವರು ಮುಖ್ಯಮಂತ್ರಿಗಳಾಗಿದ್ದಾರೆ. ಒಂದೆರಡು ಪರ್ಸೆಂಟ್ ಜನ ಇದ್ದವರು ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಶೇ. 24ರಷ್ಟು ಇರುವ ಜನಾಂಗದವರು ಸಿಎಂ ಯಾಕಾಗಾಬಾರದು ಎಂದು ಹೇಳಿದ ಸಂಸದ ಜಿಗಜಿಣಗಿ
ವಿಜಯಪುರ(ನ.09): ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ಹೋರಾಟವನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ನನ್ನ ಕೊನೆ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಇಂಡಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರು ಅಯೋಗ್ಯರಾ? ಬುದ್ಧಿ ಇಲ್ಲವಾ? ಎಂದರು.
75 ವರ್ಷಗಳಲ್ಲಿ ಎಲ್ಲ ಸಮಾಜದವರು ಮುಖ್ಯಮಂತ್ರಿಗಳಾಗಿದ್ದಾರೆ. ಒಂದೆರಡು ಪರ್ಸೆಂಟ್ ಜನ ಇದ್ದವರು ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಶೇ. 24ರಷ್ಟು ಇರುವ ಜನಾಂಗದವರು ಸಿಎಂ ಯಾಕಾಗಾಬಾರದು ಎಂದು ಹೇಳಿದರು.
ದಲಿತ ಮುಖ್ಯಮಂತ್ರಿ ಮಾಡುವಂತೆ ನಮ್ಮ ಪಕ್ಷಕ್ಕೆ ಆಗ್ರಹಿಸುತ್ತೇನೆ ಎಂದವರು ತಿಳಿಸಿದರು. ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ನಾಗಠಾಣ ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಗಠಾಣ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಪ್ರತಿಯೊಬ್ಬರ ಅಭಿಪ್ರಾಯ ಇದೆ. ನಾನು ಕೂಡಾ ಆ ಭಾಗದಲ್ಲಿ ಶಾಸಕನಾಗಿ, ಸಚಿವನಾಗಿ ಸಾಕಷ್ಟುಕೆಲಸ ಮಾಡಿದ್ದೇನೆ. ನಾನೇ ಅಭ್ಯರ್ಥಿಯಾಗಬೇಕು ಎಂಬ ಒತ್ತಡ ಇದೆ. ಆದಾಗ್ಯೂ ನಾನು ಒಪ್ಪಿಕೊಂಡಿಲ್ಲ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಬಂದ ನಂತರ ಗೋಹತ್ಯೆ ತಡೆಗಟ್ಟಲಾಗಿದೆ: ಅರುಣ ಸಿಂಗ್
ನಮ್ಮದು ರಾಷ್ಟ್ರೀಯ ಪಕ್ಷ. ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ತೀರ್ಮಾನವನ್ನು ಪಕ್ಷದ ಮುಖಂಡರು ಕೈಗೊಳ್ಳುತ್ತಾರೆ. ವಿಧಾನಸಭೆಗೆ ಸ್ಪರ್ಧಿಸಲು ತಿಳಿಸಿದರೆ ವಿಧಾನಸಭೆಗೆ ಸ್ಪರ್ಧಿಸುತ್ತೇನೆ. ಇಲ್ಲವೆ ಲೋಕಸಭೆಗೆ ಸ್ಪರ್ಧಿಸಲು ತಿಳಿಸಿದರೆ ಲೋಕಸಭೆ ಸ್ಪರ್ಧಿಸಲು ಸಿದ್ದನಿದ್ದೇನೆ. ಎರಡೂ ಕಡೆ ಬೇಡವೆಂದರೆ ಮನೆಯಲ್ಲಿ ಆರಾಗವಾಗಿರುತ್ತೇನೆ ಎಂದು ಹೇಳಿದರು.