ಸಿ.ಪಿ.ಯೋಗೇಶ್ವರ್ v/s ಎಚ್ ಡಿ ಕುಮಾರಸ್ವಾಮಿ ನಡುವೆ ಜಟಾಪಟಿ
ಗ್ರಾಮೀಣಾಭಿವೃದ್ಧಿಗೆ ಸಿಎಂ ವಿಶೇಷ ಅನುದಾನ ಬಳಕೆಯಲ್ಲಿ ಇಬ್ಬರು ನಾಯಕರ ನಡುವೆ ಜಟಾಪಟಿ ಜೋರಾಗಿದೆ. ಕುಮಾರಸ್ವಾಮಿಯವರನ್ನ ಆಹ್ವಾನಿಸದೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿರುವ ಸಿ.ಪಿ.ಯೋಗೇಶ್ವರ್. ಸಿ.ಪಿ. ಯೋಗೇಶ್ವರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಚ್ಡಿಕೆ.
ರಾಮನಗರ (ಅ.1) : ಗ್ರಾಮೀಣಾಭಿವೃದ್ಧಿಗೆ ಸಿಎಂ ವಿಶೇಷ ಅನುದಾನ ಬಳಕೆಯಲ್ಲಿ ಇಬ್ಬರು ನಾಯಕರ ನಡುವೆ ಜಟಾಪಟಿ ಜೋರಾಗಿದೆ. ಗ್ರಾಮೀಣಾಭಿವೃದ್ಧಿಗೆ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ. ಈ ವಿಶೇಷ ಅನುದಾನಕ್ಕಾಗಿ ಸಿಎಂಗೆ ಮನವಿ ಮಾಡಿದ್ದ ಉಭಯ ನಾಯಕರು.. ಆದರೆ ಇಂದು ಚನ್ನಪಟ್ಟಣ ತಾಲೂಕಿನಲ್ಲಿ ಕುಮಾರಸ್ವಾಮಿಯವರನ್ನ ಆಹ್ವಾನಿಸದೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿರುವ ಸಿ.ಪಿ.ಯೋಗೇಶ್ವರ್. ಸಿ.ಪಿ. ಯೋಗೇಶ್ವರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಚ್ಡಿಕೆ.
ಇದು ಬಂಡು ಬಿದ್ದ ಸರ್ಕಾರ: ಕುಮಾರಸ್ವಾಮಿ ವಾಗ್ದಾಳಿ
ಮತ್ತೊಂದು ಕಡೆ ಕಾಮಗಾರಿಗಳಿಗೆ ಚಾಲನೆ ನೀಡಿದ ಹೆಚ್‌ಡಿಕೆ
ಸ್ಥಳೀಯ ಶಾಸಕರನ್ನ ಆಹ್ವಾನಿಸದೆ. ಆಹ್ವಾನಪತ್ರಿಕೆಯಲ್ಲಿ ಹೆಸರೂ ಹಾಕದೆ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆರೆವೇರಿಸಿರುವ ಸಿ.ಪಿ.ಯೋಗೇಶ್ವರ್. ಇದರಿಂದ ಜೆಡಿಎಸ್ ನಾಯಕರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಮತ್ತೊಂದು ಕಡೆ ಕುಮಾರಸ್ವಾಮಿಯವರು ಕಾಮಗಾರಿಗಳಿಗೆ ಚಾಲನೆ ನೀಡಿದರು.
ಸಿಪಿವೈ ಕಾರ್ಯಕ್ರಮ. ಆಹ್ವಾನ ಪತ್ರಿಕೆಯಲ್ಲಿ 'ಸಿ.ಪಿ ಯೋಗೇಶ್ವರ್ ಕೋರಿಕೆ ಮೇರೆಗೆ' ಬಿಡುಗಡೆಯಾಗಿರುವ ವಿಶೇಷ ಅನುದಾನ ಎಂದು ಮುದ್ರಣ. ಸಿಪಿ.ಯೋಗೇಶ್ವರ್ ನಡೆಗೆ ಕುಮಾರಸ್ವಾಮಿ ಕಿಡಿ. ಸ್ಥಳೀಯ ಶಾಸಕರನ್ನು ಕಡೆಗಣಿಸಿದ್ದಾರೆಂದು ಜೆಡಿಎಸ್ ಕಾರ್ಯಕರ್ತರು ಸಿಪಿ ಯೋಗೇಶ್ವರ ವಿರುದ್ಧ ಕೂಗಿ ಪ್ರತಿಭಟನೆ ನಡೆಸಿದರು.
ಎಚ್ಡಿಕೆ, ಸಿಪಿವೈ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ ನಡುವೆ ವಾರ್
ಸಿಪಿವೈ ಹಾಗೂ ಎಚ್‌ಡಿಕೆ ನಡುವೆ ಗುದ್ದಲಿ ಪೂಜೆ ವಾರ್ ಹಿನ್ನೆಲೆ; ಗುದ್ದಲಿ ಪೂಜೆ ಕಾರ್ಯಕ್ರಮ ಮುಂದೂಡಿ ಜಿಲ್ಲಾಧಿಕಾರಿ ಅವಿನಾಷ್ ಮೆನನ್ ಆದೇಶ. ಗುದ್ದಲಿ ಪೂಜೆ ಮುನ್ನ ಕಾರ್ಯಕ್ರಮ ಶಾಸಕರ ಗಮನಕ್ಕೆ ಬಾರದೆ, ತಡರಾತ್ರಿ ಶಾಸಕರಿಗೆ ಪತ್ರ ತಲುಪಿದ್ದು, ಎಚ್ ಡಿಕೆ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ಕಾರ್ಯಕ್ರಮ ಮುಂದೂಡುವಂತೆ ಆದೇಶ. ನೆನ್ನೆಯೆ ದಿನಾಂಕದಲ್ಲಿರುವ ಆದೇಶ ಪತ್ರ ಹೊರಡಿಸಲಾಗಿತ್ತು..
ಹೆಚ್ಚಿನ ಪೊಲೀಸರು ನಿಯೋಜನೆ:
ಕಾರ್ಯಕ್ರಮ ನಡೆಯವ ಸ್ಥಳದಲ್ಲಿ ಪ್ರತಿಭಟನೆ ನಡೆಯುವ ಹಿನ್ನೆಲೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಕುಮಾರಸ್ವಾಮಿ ಕಡೆಗಣಿಸಿದ್ದಾರೆಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು. 40% ಕಮಿಷನ್ ಪಡೆಯುವುದಕ್ಕಾಗಿ ಸಿಪಿವೈ ಗುದ್ದಲಿ ಪೂಜೆ ನಡೆಸಿದ್ದಾರೆಂದು ಕೂಗಿದರು. ಈ ವೇಳೆ ಪ್ರತಿಭಟನಾಕರರನ್ನು ವಶಕ್ಕೆ ಪಡೆದು ಕರೆದೊಯ್ದರು.
ರಾಂ ಪುರ ಗ್ರಾಮದಿಂದ ಬೈರಾಪಟ್ಟಣ ಗ್ರಾಮಕ್ಕೆ ಪ್ರತಿಭಟನೆ ಶಿಫ್ಟ್
ಬೈರಪಟ್ಟಣದಲ್ಲೂ ಗುದ್ದಲಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಸಚಿವರು ಬೈರಪಟ್ಟಣಕ್ಕೆ ಬರುತ್ತಾರೆಂದು ಬೈರಾಪಟ್ಟಣಕ್ಕೆ ತೆರಳಿ ಅಲ್ಲಿಯೂ ಸಿಪಿವೈ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇನ್ನೊಂದು ಕಡೆ ಬಿಜೆಪಿ ಕಾರ್ಯಕರ್ತರಿಂದಲೂ ಪ್ರತಿಭಟನೆ ನಡೆಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಪ್ರತಿಭಟನಾಕಾರರು, ಪೊಲೀಸರ ನಡುವೆ ಕೆಲಹೊತ್ತು ಜಟಾಪಟಿ ನಡೆಯಿತು.
ಸಿದ್ದರಾಮಯ್ಯ ಕಣ್ಣು ಮಂಕಾಗಿದ್ಯಾ: ಸಿದ್ದರಾಮಯ್ಯ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ
ಸಿಪಿವೈ ಕಾರಿನ ಮೇಲೆ ಕಲ್ಲು ಎಸೆತ
ಸಿಪಿವೈ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಿಪಿವೈ ಕಾರಿನ ಮೇಲೆ ಕಲ್ಲು, ಮೊಟ್ಟೆಗಳನ್ನು ಎಸೆದಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಗುದ್ದಲಿ ಪೂಜೆ ನೆರವೇರಿಸುತ್ತಿದ್ದ ವೇಳೆ ತೀವ್ರಗೊಂಡ ಪ್ರತಿಭಟನೆ. ಇದರಿಂದ ಪೊಲೀಸರು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದರು.
ಒಟ್ಟಿನಲ್ಲಿ ವಿಶೇಷ ಅನುದಾನಕ್ಕೆ ಸಿಪಿವೈ, ಎಚ್‌ಡಿಕೆ ಮಧ್ಯೆ ಫೈಟ್ ತೀವ್ರಗೊಂಡಿದೆ.