Asianet Suvarna News Asianet Suvarna News

ಬಿಜೆಪಿ ಆಡಳಿತದಲ್ಲಿ ರೈತರಿಗೆ ನೆಮ್ಮದಿ ಬದುಕು - ಸಚಿವ ಶ್ರೀರಾಮುಲು

  • ಬಿಜೆಪಿ ಆಡಳಿತದಲ್ಲಿದ್ದರೆ ರೈತರಿಗೆ ನೆಮ್ಮದಿ ಬದುಕು
  • ನಾಯಕನಹಟ್ಟಿಹಿರೇಕೆರೆಗೆ ಬಾಗಿನ ಅರ್ಪಿಸಿದ ಸಚಿವ ಬಿ. ಶ್ರೀರಾಮುಲು
  • ಮುಂದಿನ ದಿನಗಳಲ್ಲೂ ಪುನಃ ಇದೇ ಕ್ಷೇತ್ರದಲ್ಲಿ ಸ್ಪರ್ಧೆ
Farmers will live comfortably in  BJP govt says Minister Sriramulu rav
Author
First Published Oct 1, 2022, 1:10 PM IST

ಚಳ್ಳಕೆರೆ (ಅ.1) : ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತಲ್ಲಿದ್ದಾಗ ನಾಡಿನ ಕೆರೆ, ಕಟ್ಟೆ, ಹಳ್ಳಕೊಳ್ಳ, ನದಿ, ಡ್ಯಾಂ ತುಂಬಿ ಹರಿಯುತ್ತವೆ. ರೈತ ಸಮುದಾಯ ನೆಮ್ಮದಿಯಿಂದ ಬದುಕು ನಡೆಸುತ್ತದೆ. 2010ರಲ್ಲೂ ಸಹ ನಾಯಕನಹಟ್ಟಿಯ ದೊಡ್ಡಕೆರೆ( ಹಿರೆಕೆರೆ) ತುಂಬಿತ್ತು. ಅದೇ ರೀತಿ 12 ವರ್ಷಗಳ ನಂತರ ಈ ಕೆರೆತುಂಬಿ ಇಂದು ಬಾಗಿನ ಅರ್ಪಿಸುವ ಅವಕಾಶವನ್ನು ಭಗವಂತ ನಮಗೆ ಒದಗಿಸಿದ್ದಾನೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

BBMP ಚುನಾವಣೆ ಎದುರಿಸಲು ಬಿಜೆಪಿ ಸಿದ್ದವಿದೆ : ಸಚಿವ ಶ್ರೀರಾಮುಲು

ಅವರು, ಶುಕ್ರವಾರ ಮಧ್ಯಾಹ್ನ ನಾಯಕನಹಟ್ಟಿಯ ಕೆರೆಯಂಗಳದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ದೊಡ್ಡಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬಯಲು ಸೀಮೆಯ ಈ ಭಾಗದಲ್ಲಿ ನೀರಾವರಿ ವ್ಯವಸ್ಥೆ ಕಲ್ಪಿಸಬೇಕೆಂದು ಭದ್ರಾ ಮೇಲ್ದಂಡೆ ಯೋಜನೆ ಮೂಲಕ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಿ ಅಲ್ಲಿಂದ ವೇದಾವತಿ ಮೂಲಕ ಈ ಭಾಗದಲ್ಲಿ ನೀರಿನ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಈ ಭಾಗದ ಒಂದು ಲಕ್ಷಕ್ಕೂ ಹೆಚ್ಚು ಬೋರೆವೆಲ್‌ಗಳು ಮತ್ತೆ ಜೀವಕಳೆ ಬಂದಿದೆ. ಮೊಳಕಾಲ್ಮೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಯ 72 ಕೆರೆಗಳಿಗೆ ನೀರು ತುಂಬಿಸುವ ಸುಮಾರು 618 ಕೋಟಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲೂ ನೀರಾವರಿ ಸೌಲಭ್ಯ ಕಲ್ಪಿಸಲು ಬಿಜೆಪಿ ಬದ್ಧವಾಗಿದೆ ಎಂದರು.

ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಮಾತನಾಡಿ, ಮಾಡಿದಷ್ಟುನೀಡು ಭೀಕ್ಷೆ ಎನ್ನುವಂತೆ ನಾಯಕನಹಟ್ಟಿಗುರುತಿಪ್ಪೇರುದ್ರಸ್ವಾಮಿ ಸುಮಾರು 800 ವರ್ಷಗಳ ಹಿಂದೆ ಈ ಕೆರೆ ನಿರ್ಮಿಸಿ, ಈ ಭಾಗದ 3 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಭಾರತೀಯ ಜನತಾ ಪಕ್ಷ ಈ ಭಾಗದ ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸಲಿದೆ. ಇದೇ ಗ್ರಾಮದ ಮತ್ತೊಂದು ಚಿಕ್ಕಕೆರೆ ನೀರಿಲ್ಲದೆ ಬರಿದಾಗಿದ್ದು, ಆ ಕೆರೆಗೂ ನೀರಿನ ಸೌಲಭ್ಯ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡ ಎತ್ತಿನಹಟ್ಟಿಗೌಡ ಮಾತನಾಡಿ, ಈ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಸಚಿವರಾದ ಶ್ರೀರಾಮುಲು ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬೇರೆ ಪಕ್ಷದ ಯಾವ ಶಾಸಕರೂ ಸಹ ಇಂತಹ ಕಾರ್ಯಗಳನ್ನು ರೂಪಿಸಿಲ್ಲ. ಆದರೆ, ಕೆಲವು ನಾಯಕರು ಮಾತ್ರ ಸುಳ್ಳು ಪ್ರಚಾರದ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮತದಾರರು ಇಂತಹವರಿಗೆ ಬುದ್ದಿ ಕಲಿಸುತ್ತಾರೆಂದರು.

ಬಳ್ಳಾರಿಯಲ್ಲಿ ಮತ್ತೆ ಆಪರೇಷನ್ ಕಮಲದ ಸದ್ದು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ..!

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್‌, ಜಿಲ್ಲಾ ಎಸ್ಟಿಮೋರ್ಚಾ ಅಧ್ಯಕ್ಷ ಶಿವಣ್ಣ, ಮಂಡಲಾಧ್ಯಕ್ಷ ಈ.ರಾಮರೆಡ್ಡಿ, ರಾಜ್ಯ ಬಿಜೆಪಿ ಪರಿಶಿಷ್ಟವರ್ಗದ ಕಾರ್ಯಕಾರಿ ಸಮಿತಿ ಸದಸ್ಯ ಎಸ್‌.ಪಾಪೇಶ್‌ ನಾಯಕ, ಎಂವೈಟಿ ಸ್ವಾಮಿ, ಮೊಳಕಾಲ್ಮೂರು ಮಂಡಲಾಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಚಳ್ಳಕೆರೆ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್‌, ಯುವ ಘಟಕದ ಅಧ್ಯಕ್ಷ ವಿ.ಎಂ.ಮೋಹನ್‌, ಕಾರ್ಯದರ್ಶಿ ಎಚ್‌.ವಿ.ಪ್ರಕಾಶ್‌ರೆಡ್ಡಿ, ಪ್ರಧಾನ ಕಾರ್ಯದರ್ಶಿ ಚನ್ನಗಾನಹಳ್ಳಿ ಮಲ್ಲೇಶ್‌, ಅಶ್ವತ್‌್ಥನಾಯಕ, ಕರೀಕೆರೆ ತಿಪ್ಪೇಸ್ವಾಮಿ, ತಹಸೀಲ್ದಾರ್‌ ಎನ್‌.ರಘುಮೂರ್ತಿ, ಡಿವೈಎಸ್ಪಿ ರಮೇಶ್‌ ಕುಮಾರ್‌, ಸಿಪಿಐಗಳಾದ ಕೆ.ಸಮೀವುಲ್ಲಾ, ಜಿ.ಬಿ.ಉಮೇಶ್‌, ಸತೀಶ್‌, ಮುಖ್ಯಾಧಿಕಾರಿ ಟಿ. ಲೀಲಾವತಿ, ಸದಸ್ಯರಾದ ವಿನೋದಮ್ಮ, ಮಹಾಂತೇಶ್‌ ಇತರರಿದ್ದರು.

2023ಕ್ಕೆ ಮೊಳಕಾಲ್ಮುರಿಂದ ಸ್ಪರ್ಧೆ

ತಮ್ಮೆಲ್ಲರ ಆಶೀರ್ವಾದಿಂದ ಈ ಕ್ಷೇತ್ರದ ಶಾಸಕ, ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲೂ ಪುನಃ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ನಿಮ್ಮ ಸಹಕಾರದಿಂದ ಗೆಲುವು ಸಾಧಿಸಿ ಈ ಭಾಗಕ್ಕೆ ನೀರಾವರಿ ಸೌಲಭ್ಯದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ.

ಸಾರಿಗೆ ಸಚಿವ ಬಿ. ಶ್ರೀರಾಮುಲು

 

Follow Us:
Download App:
  • android
  • ios