ಅವಧಿ ಮುಕ್ತಾಯ: ಕರ್ನಾಟಕದ 16 MLCಗಳಿಗೆ ಬೈ ಬೈ....

ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ರಾಜ್ಯದ  16 ವಿಧಾನ ಪರಿಷತ್‌ ಸದಸ್ಯರಿಗೆ ಬೀಳ್ಕೊಡಲಾಯ್ತು. ಯಾರು-ಯಾರು ಎನ್ನುವ ಮಾಹಿತಿ ಈ ಕೆಳಗಿನಂತಿದೆ.

farewell To Karnataka 16 mlc for  completed 6 Year period

ಬೆಂಗಳೂರು, (ಜು.10): ಅವಧಿ ಪೂರ್ಣಗೊಳಿಸಿ ಜೂನ್ ತಿಂಗಳಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿ ಹೊಂದಿದ 16 ಮಂದಿ ವಿಧಾನ ಪರಿಷತ್ತಿನ ನಿವೃತ್ತ ಸದಸ್ಯರನ್ನು‌ ಬೀಳ್ಕೊಡಲಾಯಿತು.

 ಉಭಯ ಸದನಗಳಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,ನಿವೃತ್ತರಾಗಿರುವ 16 ಎಂಎಲ್‌ಸಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಚುನಾವಣೆ ಇಲ್ಲದೇ ವಿಧಾನಪರಿಷತ್‌ ಪ್ರವೇಶಿಸಿದ 7 ಅಭ್ಯರ್ಥಿಗಳು

ಸಮ್ಮೇಳನಾ ಸಭಾಂಗಣ ವಿಧಾನ ಪರಿಷತ್ ಸಚಿವಾಲಯ ಇಂದು (ಶುಕ್ರವಾರ) ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಅವಧಿ ಮುಗಿದ 16 ಮಂದಿ ಸದಸ್ಯರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. 

ವಿಧಾನ ಪರಿಷತ್ತಿನ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮೇಲ್ಮನೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪರಿಷತ್ ವಿರೋಧ ಪಕ್ಷ ನಾಯಕ ಎಸ್.ಆರ್.ಪಾಟೀಲ್, ವಿಪಕ್ಷ ಸಚೇತಕ ನಾರಾಯಣಸ್ವಾಮಿ ಗಣ್ಯರು ನಿವೃತ್ತ ವಿಧಾನ ಪರಿಷತ್ ಸದಸ್ಯರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಆದ್ರೆ, ಈ ಸಮಾರಂಭಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ  ಗೈರಾಗಿದ್ದರು.

ನಿವೃತ್ತಿಯಾದವರು
* ವಿಧಾನಸಭೆ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಜಯಮ್ಮ ಬೋಸರಾಜ್, ಹೆಚ್.ಎಂ.ರೇವಣ್ಣ ನಸೀರ್ ಅಹ್ಮದ್, ಎಂ.ಸಿ.ವೇಣುಗೋಪಾಸ್, ಟಿ.ಎ.ಶವರಣ, ಡಿಯು ಮಲ್ಲಿಕಾರ್ಜುನ. 

* ನಾಮ ನಿರ್ದೇಶನಗೊಂಡಿರುವ ಜಯಮಾಲಾ ರಾಮಚಂದ್ರ, ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜಾ, ಇಕ್ಬಾಲ್ ಅಹಮ್ಮದ್ ಸರಡಗಿ, ತಿಪ್ಪಣ್ಣ ಕಮಕನೂರ್, ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಚೌಡರೆಡ್ಡಿ ತೂಪ್ಪಿ, ಎಸ್.ವಿ.ಸಂಕನೂರು ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಪುಟ್ಟಣ್ಣ, ಶರಣಪ್ಪ ಮಟ್ಟೂರು ನಿವೃತ್ತರಾಗಿದ್ದಾರೆ. 

Latest Videos
Follow Us:
Download App:
  • android
  • ios