Asianet Suvarna News Asianet Suvarna News

ಚುನಾವಣೆ ಇಲ್ಲದೇ ವಿಧಾನಪರಿಷತ್‌ ಪ್ರವೇಶಿಸಿದ 7 ಅಭ್ಯರ್ಥಿಗಳು

ಕರ್ನಾಟಕ ವಿಧಾನಪರಿಷತ್‌ಗೆ ಚುನಾವಣೆ ನಡೆಯದೇ ನಾಮಪತ್ರಸಲ್ಲಿಸಿದ್ದ ಏಳು ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

4 BJP 2 Congress and 1 JDS candidate Unanimously Elected to Karnataka vidhan parishad
Author
Bengaluru, First Published Jun 22, 2020, 4:37 PM IST

ಬೆಂಗಳೂರು, (ಜೂ.22): ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಾಮಪತ್ರ ಸಲ್ಲಿಸಿದ್ದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದೇ ಜೂನ್ 29ರಂದು ರಾಜ್ಯದ 7 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದ್ರೆ, ಕಣದಲ್ಲಿ ಯಾರೂ ಪ್ರತಿಸ್ಪರ್ಧಿ ಇಲ್ಲದ ಕಾರಣ ಬಿಜೆಪಿಯ 4, ಕಾಂಗ್ರೆಸ್‌ನ 2 ಮತ್ತು ಜೆಡಿಎಸ್‌ ಓರ್ವ ಅಭ್ಯರ್ಥಿ ಅವಿರೋಧವಾಗಿ ಮೇಲ್ಮನೆ ಪ್ರವೇಶ ಮಾಡಿದರು.

ಮೇಲ್ಮನೆಗೆ 7 ಮಂದಿ ಅವಿರೋಧ ಆಯ್ಕೆ ನಿಶ್ಚಿತ..?

ಇಬ್ಬರು ಪಕ್ಷೇತರವಾಗಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಆದ್ರೆ, ಅವರಿಗೆ ಸೂಚಕರಿಲ್ಲದ ಕಾರಣ ಅವರ ಉಮೇದುವಾರಿಕೆ ತಿರಸ್ಕೃತಗೊಂಡಿದ್ದು, ಇನ್ನುಳಿದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಇಂದು (ಸೋಮವಾರ) ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಅಧಿಕೃತ ಘೋಷಣೆ ಮಾಡಿದರು. 

ಅವಿರೋಧವಾಗಿ ಆಯ್ಕೆಯಾದವರು
4 BJP 2 Congress and 1 JDS candidate Unanimously Elected to Karnataka vidhan parishad

* ಬಿಜೆಪಿ- ಆರ್. ಶಂಕರ್, ಎಂಟಿಬಿ ನಾಗರಾಜ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್
* ಕಾಂಗ್ರೆಸ್- ಬಿ.ಕೆ.ಹರಿಪ್ರಸಾದ್ ಮತ್ತು ನಸೀರ್ ಅಹಮ್ಮದ್
* ಜೆಡಿಎಸ್- ಗೋವಿಂದರಾಜು

ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಚುನಾಯಿತ ರಾಗಿದ್ದ ಜಯಮ್ಮ, ಎನ್.ಎಸ್.ಬೋಸ್‍ರಾಜು, ಹೆಚ್.ಎಂ.ರೇವಣ್ಣ, ನಸೀರ್ ಅಹ್ಮದ್, ಎಂ.ಸಿ. ವೇಣುಗೋಪಾಲ್, ಡಿ.ಯು.ಮಲ್ಲಿಕಾರ್ಜುನ ಹಾಗೂ ಟಿ.ಎ.ಶರವಣ ಅವರು ಜೂ.30ರಂದು ನಿವೃತ್ತಿಯಾಗುವುದರಿಂದ ತೆರವಾದ ಸ್ಥಾನಕ್ಕೆ 29 ಚುನಾವಣೆ ಘೋಷಣೆಯಾಗಿತ್ತು. 

Follow Us:
Download App:
  • android
  • ios