Dharwad: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರಿಂದ ಫೇಸ್‌ಬುಕ್‌, ವಾಟ್ಸಾಪ್‌ ವಾರ್‌!

ಕಳೆದ ನಾಲ್ಕೈದು ದಿನಗಳಿಂದ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಕಡೆಯಿಂದ ಫೇಸ್ಬುಕ್, ವಾಟ್ಸಪ್ ವಾರ್ ಶುರುವಾಗಿದೆ. 

Facebook WhatsApp war by Congress BJP activists at Dharwad gvd

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಅ.19): ಕಳೆದ ನಾಲ್ಕೈದು ದಿನಗಳಿಂದ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಕಡೆಯಿಂದ ಫೇಸ್ಬುಕ್, ವಾಟ್ಸಪ್ ವಾರ್ ಶುರುವಾಗಿದೆ. ಕಳೆದ ರವಿವಾರದಂದು ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಮಾವೇಶದಲ್ಲಿ ಶಾಸಕ ಅಮೃತ ದೇಸಾಯಿ ಬಹಿರಂಗವಾಗಿ ಮಾಜಿ ಸಚಿವ‌ ವಿನಯ ಕುಲಕರ್ಣಿ ಅವರನ್ನ ಬಾರೋ, ಬಾ ಎಲ್ಲೆ ಕುಂತು ವಿಡಿಯೋ ಮಾಡಿ ಹಾಕೋದು ಅಲ್ಲ, ಕಾಯ್ತಾ ಇದೆನಿ ನಿನಾಗಿ‌ನಾ, ಎಂದು ಏಕವಚನ ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸದ್ಯ ಕಾಂಗ್ರೆಸ್ ಕಾರ್ಯಕರ್ತರನ್ನ ಬಡಿದೆಬ್ಬಿಸದಂತಾಗಿದೆ ಎಂದು ಕ್ಷೇತ್ರದಲ್ಲಿ ಗುಸುಗುಸು ಮಾತುಗಳು ಕೇಳಿ ಬರುತ್ತಿವೆ. 

ಕೇವಲ ಗುಸು ಗುಸು ಮಾತುಗಳು ಅಲ್ಲ ಎಲ್ಲ ಕಡೆ ವಾಟ್ಸಪ್ ,ಪೇಸ್ಬುಕ್, ಸ್ಟೆಟಸ್‌ಗಳಲ್ಲಿ ಶಾಸಕ ಅಮೃತ ದೇಸಾಯಿ ಅವರೆ 1400 ಕೋಟಿ ಅನುದಾನದ ಲೆಕ್ಕ‌ ಕೊಡಿ‌ ಎಂದು ಸ್ಟೆಟಸ್ ವಾಟ್ಸಪ್‌ಗಳಲ್ಲಿ ಚಾಟಿಂಗ್ ಮೇಸೆಜ್ ಹರಿದಾಡುತ್ತಿವೆ..ಇದಕ್ಕೆ ಪ್ರತಿ ಉತ್ತರವಾಗಿ ಬಿಜೆಪಿ ಶಾಸಕ ಅಮೃತ ದೇಸಾಯಿ ಪ್ಯಾನ್ಸ್ ಗ್ರೂಪ್‌ನವರು ಸದ್ಯ ,ವಿವಿಧ ಇಲಾಖೆಗಳಲ್ಲಿ ಯಾವ ಇಲಾಖೆಗೆ ಎಷ್ಟು ಹಣ ಬಿಡುಗಡೆಯಾಗಿದೆ, ಬಿಡುಗಡೆಯಾದ ಹಣ ಎಷ್ಟು ಎಂಬುದರ ಎಲ್ಲ‌ ಮಾಹಿತಿಗಳನ್ನ ಸದ್ಯ ಬಿಜೆಪಿ ವಿರೋದಿಗಳಿಗೆ ಮುಟ್ಟಿಸುವ ಕೆಲಸವನ್ನ ಮಾಡುತ್ತಿದ್ದಾರೆ. ಕೇವಲ‌ ಶಾಸಕ ಅಮೃತ ದೇಸಾಯಿ, ಮಾಜಿ ಸಚಿವ‌ ವಿನಯ ಕುಲಕರ್ಣಿ ಅವರನ್ನ‌ ತಡವಿದ್ದಷ್ಟೆ ಇಡೀ 71 ರ ಧಾರವಾಡ ಗ್ರಾಮೀಣ ಕ್ಷೆತ್ರದಲ್ಲಿ ಈಗಿನಿಂದಲೆ‌ ಚುನಾವಣೆ ರಣ ಕಹಳೆಯನ್ನ. 

ಬೇಲ್‌ ಮೇಲಿರುವ ರಾಹುಲ್‌, ಭ್ರಷ್ಟಾಚಾರದ ಮಾತು: ಸಿಎಂ ಬೊಮ್ಮಾಯಿ ವ್ಯಂಗ್ಯ

ಎರಡು ಪಕ್ಷದವರು ಹೂಡಿದ್ದಾರೆ ಅಷ್ಟೆ ಪುಲ್ ಆ್ಯಕ್ಟಿವ್ ಆಗಿ‌ ಎರಡು ಪಕ್ಷದ ಕಾರ್ಯಕರ್ತರು ಕೆಲಸದಲ್ಲಿ ತೊಡಗಿದ್ದಾರೆ.. ಇನ್ನು ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಕಳೆದ ಒಂದುವರೆ ವರ್ಷದಿಂದ ಧಾರವಾಡಕ್ಕೆ ಬರದೆ ಇರೋದಕ್ಕೆ‌ ಧಾರವಾಡದಲ್ಲಿ ಇಂತಹ ಮಾತುಗಳು ಬರುತ್ತಿವೆ ಅಂತಾರೆ‌ ಕಾಂಗ್ರೆಸ್ ಅಭಿಮಾನಿಗಳು. ಇನ್ನು ಯೋಗೀಶ್ ಗೌಡ ಕೊಲೆ ಕೇಸ್ ನಲ್ಲಿ ಜೈಲು ಶಿಕ್ಷೆ ಅನುಭವಿಸಿ‌ ಸದ್ಯ ಜಾಮೀನು ಮೆಲೆ ಬಿಡುಗಡೆಯಾಗಿರುವ ವಿನಯ ಕುಲಕರ್ಣಿ ಅವರು ಧಾರವಾಡಕ್ಕೆ ಎಂಟ್ರಿ ಆಗದ ಹಾಗೆ ಕೋರ್ಟ್ ಕೂಡಾ ಅವರಿಗೆ ನಿಷೇಧವನ್ನ ಮಾಡಿದೆ. ಒಂದು ಕಡೆ ವಿನಯ ಕುಲಕರ್ಣಿ ಧಾರವಾಡ ಜಿಲ್ಲೆಗೆ ಎಂಟ್ರಿಯಾಗದೆ ಚುನಾವಣೆಯ ಕಣಕ್ಕೆ ಇಳಿಯುವುದು ಪಕ್ಕಾ ಕಾಂಗ್ರೆಸ್ ಟಿಕೆಟ್ ಅವರಿಗೆ ಅಂತಾನೆ ಈಗಾಗಲೆ‌ ಡಿಕೆಶಿ ಸಿದ್ದರಾಮಯ್ಯ ಅವರು ಸ್ಪಷ್ಟ ಪಡಿಸಿದ್ದಾರೆ. 

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಗೆ ಚಿಂತನೆ: ಸಚಿವ ಎಂಟಿಬಿ ನಾಗರಾಜ್‌

ಮತ್ತೊಂದಡೆ ವಿನಯ್ ಕುಲಕರ್ಣಿ ಅವರಿಗೆ ಚುಣಾವಣೆಗೆ ಸ್ಪರ್ಧೆ ಮಾಡಲು ಇನ್ನು 5 ತಿಂಗಳು ಬಾಕಿ‌ಇದೆ. ಆದರೆ ಒಂದು ಕಡೆ ವಿಕೆ‌ಬರ್ತಾರೆ ಅವರೆ‌ ಚುನಾವಣೆಗೆ ನಿಲ್ತಾರೆ ಎಂದು ಕಾರ್ಯಕರ್ತರಲ್ಲಿ ನಂಬಿಕೆ ಇದೆ ಇತ್ತ ಕಡೆ ಬಿಜೆಪಿ ಶಾಸಕ‌ ಅಮೃದ ದೇಸಾಯಿ ವಿನಯ ಕುಲಕರ್ಣಿಗೆ ಕಣಕ್ಕೆ‌ ಬರುವಂತೆ‌ ಆಹ್ವಾನ ಮಾಡಿದ್ದಾರೆ. ರಾಜ್ಯದಲ್ಲಿ ಧಾರವಾಡ 71 ಗ್ರಾಮೀಣ ಕ್ಷೇತ್ರ ಸದ್ಯ 224 ವಿಧಾನ‌ಸಭಾ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಷ್ಠಿತ ಕಣವಾಗಿದೆ, ರಾಜ್ಯದ ಜನರ‌  ಗಮನವನ್ನ ಈ ಕ್ಷೇತ್ರ ಸೆಳೆಯುತ್ತಿದೆ.

Latest Videos
Follow Us:
Download App:
  • android
  • ios