ಗುವಾಹಟ್ಟಿ, (ಡಿ.29): ಕಾಂಗ್ರೆಸ್ ನ ಇಬ್ಬರು ಉಚ್ಚಾಟಿತ ಶಾಸಕರು ಮತ್ತು ಒಬ್ಬ ಮಾಜಿ ಶಾಸಕರು ಇಂದು (ಮಂಗಳವಾರ) ಬಿಜೆಪಿ ಸೇರಿದರು.

ಕಾಂಗ್ರೆಸ್ ನ ಮಾಜಿ ಶಾಸಕರಾದ ಅಜಂತಾ ನಿಯೋಗ್ ಮತ್ತು ರಾಜ್ ದೀಪ್ ಗೋವಾಲಾ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಮಾಜಿ ಶಾಸಕ ಬನೇಂದ್ರ ಮುಶಾಹರ್ ಅವರು ಗುವಾಹಟಿಯ ಅಸ್ಸಾಂ ಬಿಜೆಪಿ ಕಚೇರಿಯಲ್ಲಿ ಸೇರ್ಪಡೆಯಾದರು.

ಬಿಜೆಪಿಗೆ ಗುಡ್‌ ಬೈ ಹೇಳಿದ MP: ಸಂಸದ ಸ್ಥಾನಕ್ಕೂ ರಾಜೀನಾಮೆ ಸಾಧ್ಯತೆ...!

ಪಕ್ಷದ ರಾಜ್ಯ ಅಧ್ಯಕ್ಷ ರಂಜಿತ್ ಕುಮಾರ್ ದಾಸ್, ರಾಜ್ಯ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ, ಅರಣ್ಯ ಸಚಿವ ಪರಿಮಳ್ ಸುಖಾಬೈದ್ಯ ಮತ್ತಿತರ ಹಿರಿಯ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು. 2021ರ ವಿಧಾನಸಭೆ ಚುನಾವಣೆಗೆ ಬಿಜೆಪಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.

ಅಜಂತಾ ನೀಗ್ ಅಸ್ಸಾಂ ಕಾಂಗ್ರೆಸ್ ನ ಪ್ರಬಲ ನಾಯಕರಲ್ಲಿ ಒಬ್ಬರು. ಇದೀಗ ಅವರು ಬಿಜೆಪಿ ಸೇರುವುದರಿಂದ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುತ್ತದೆ ಎಂದು ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

'ಅವರ ಅಗಾಧವಾದ ಆಡಳಿತ ಮತ್ತು ರಾಜಕೀಯ ಅನುಭವವು ಖಂಡಿತವಾಗಿಯೂ ಅಸ್ಸಾಂನಲ್ಲಿ ಬಿಜೆಪಿಯನ್ನು ಬಲಪಡಿಸುತ್ತದೆ. ರಾಜ್ ದೀಪ್ ಗೋವಾಲಾ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದು, ಅವರ ಸೇರ್ಪಡೆ ನಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.