ಬೆಂಗಳೂರು, [ಜ.29]: ಪಕ್ಷದ ನಾಯಕರಲ್ಲಿಅಹಂ ಪ್ರವೃತ್ತಿ ಬೆಳೆದು, ಹಿರಿಯರನ್ನು ಕಡೆಗಣಿಸಿರುವುದೇ ಕಾಂಗ್ರೆಸ್‌ನ ಈಗಿನ ಸ್ಥಿತಿಗೆ ಕಾರಣ ಎಂದು ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಇಂದು [ಬುಧವಾರ] ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹೈಕಮಾಂಡ್‌ ಅಧಿಕಾರ ಇದ್ದಾಗ ಒಂದು ರೀತಿ, ಅಧಿಕಾರ ಇಲ್ಲದಾಗ ಮತ್ತೊಂದು ರೀತಿ ನಡೆದುಕೊಳ್ಳುತ್ತೆ. ಅಧಿಕಾರ ಇರುವಾಗ ಕಾಣುವ ಉತ್ಸಾಹ ನಂತರ ಕಾಣುವುದಿಲ್ಲ' ಎಂದು ಹೈಕಮಾಂಡ್ ನಡೆಗೆ ಬೇಸರ ವ್ಯಕ್ತಪಡಿಸಿದರು.

ಅತ್ತ ದೆಹಲಿಯಲ್ಲಿ ಡಿಕೆಶಿ ಬ್ಯಾಟಿಂಗ್: ಇತ್ತ ಬೆಂಗ್ಳೂರಲ್ಲಿ ಸಿದ್ದು ಬಣ ಮೀಟಿಂಗ್ 

ರಾಜ್ಯದಲ್ಲಿ ಬಣ ರಾಜಕೀಯ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರೇನೂ ದಿಢೀರ್‌ ಬೆಳೆದು ನಿಂತವರಲ್ಲ, ಎಲ್ಲರಿಂದಾಗಿ ಅವರು ಅಧಿಕಾರ ಪಡೆದುಕೊಂಡರು. ಪರಮೇಶ್ವರ್‌ ಕೂಡ ಸಂಸ್ಥೆಯೊಂದನ್ನು ಕಟ್ಟಿ ಆ ಮೂಲಕ ರಾಜಕೀಯಕ್ಕೆ ಬಂದವರು ಎಂದು ನೇರವಾಗಿ ಹೇಳಿದರು. 

ಅಹಂ ಭಾವ ತೊರೆದು, ಹಿರಿಯರೆಲ್ಲರ ಸಲಹೆಯೊಂದಿಗೆ ಪಕ್ಷ ಕಟ್ಟುವ ಕೆಲಸ ಆಗಬೇಕು. ಪದೇ ಪದೇ  ವರಿಷ್ಠರನ್ನು ಎಡತಾಕುವ ಬದಲು ರಾಜ್ಯ ನಾಯಕರೇ ಗೊಂದಲ ಬಗೆಹರಿಸಿಕೊಂಡು ಮುಂದೆ ಸಾಗಬೇಕು. ಪಕ್ಷ ಸಂಘಟನೆ ಚುರುಕುಗೊಳಿಸಬೇಕೆಂದು ಕಿವಿಮಾತು ಹೇಳಿದರು.

ಮಧುಬಂಗಾರಪ್ಪ ಕಾಂಗ್ರೆಸ್‌ಗೆ..? ಜಿಲ್ಲೆಯ 'ಕೈ' ಹಿರಿಯ ನಾಯಕ ಕಾಗೋಡು ಮಾತೇನು..?

ಕೆಪಿಸಿಸಿ ಅಧ್ಯಕ್ಷ ಆಯ್ಕೆಯಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗ ಕಾಂಗ್ರೆಸ್ಸಿಗರು ಎಂಬ ಎರಡು ಬಣಗಳು ಆಗಿವೆ.