Asianet Suvarna News Asianet Suvarna News

ದಳಪತಿಗಳಿಗೆ ಬಿಗ್ ಶಾಕ್: ಜೆಡಿಎಸ್ ನ ಮತ್ತೊಂದು ವಿಕೆಟ್ ಪತನ

ಇತ್ತೀಚೆಗಷ್ಟೇ ಮತ್ತೋರ್ವ ಎಂಎಲ್ ಸಿ ಪುಟ್ಟಣ್ಣ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಪ್ರಭಾವಿ ನಾಯಕ ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ.

ex mlc ramesh babu resigns to jds
Author
Bengaluru, First Published Mar 7, 2020, 2:53 PM IST

ದಾವಣಗೆರೆ, (ಮಾ.07): ವಿಧಾನಪರಿಷತ್ ಮಾಜಿ ಸದಸ್ಯ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಬಗ್ಗೆಇಂದು (ಶನಿವಾರ) ದಾವಣಗೆರೆಯಲ್ಲಿ ರಮೇಶ್ ಬಾಬು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಚಾರ ಸ್ಪಷ್ಟಪಡಿಸಿದ್ದಾರೆ. 

"

ರಮೇಶ್‌ ಬಾಬು ರಾಜೀನಾಮೆ ಬಗ್ಗೆ ನಾನು ಮಾತನಾಡೋದಿಲ್ಲ: ದೇವೇಗೌಡ 

ಪಕ್ಷದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದರೂ ಒಂದು ಪೂರ್ಣ ಅವಧಿಗೆ ವಿಧಾನಪರಿಷತ್ತಿನ ಸದಸ್ಯನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಲಿಲ್ಲ ಮತ್ತು ಇತರ ಕಾರಣಗಳಿಂದ ತಾನು ರಾಜೀನಾಮೆ ನೀಡುತ್ತಿರುವುದಾಗಿ ರಮೇಶ್ ಬಾಬು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಪ್ರವೇಶ ಬಯಸಿದ್ದ ರಮೇಶ್ ಬಾಬುಗೆ ಜೆಡಿಎಸ್ ಟಿಕೆಟ್ ನೀಡಿರಲಿಲ್ಲ. ಇದರಿಂದ ಬೇಸತ್ತಿರುವ ಅವರು ಪಕ್ಷದ ವರಿಷ್ಠ ಎಚ್ ಡಿ ದೇವೆಗೌಡರಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ಧಾರೆ.

ಇತ್ತೀಚೆಗಷ್ಟೇ ಮತ್ತೋರ್ವ ಎಂಎಲ್ ಸಿ ಪುಟ್ಟಣ್ಣ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಮೊನ್ನೆ ಅಷ್ಟೇ ಮಧು ಬಂಗಾರಪ್ಪ ಅಸಮಧಾನ ವ್ಯಕ್ತಪಡಿಸಿದ್ದರು.

ಇದೀಗ ರಮೇಶ್ ಬಾಬು ಅವರ ರಾಜಕೀಯ ಮುಂದಿನ ನಡೆ ಯಾವ ಕಡೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

ಎಚ್‌ಡಿಕೆ ಪ್ರತಿಕ್ರಿಯೆ:

"

Follow Us:
Download App:
  • android
  • ios