Asianet Suvarna News Asianet Suvarna News

ಅಭ್ಯರ್ಥಿ ಯಾರೇ ಆದರೂ ಗುರಿ ಮೋದಿಯತ್ತ ಇರಲಿ: ಮಾಜಿ ಶಾಸಕ ತಿಪ್ಪಾರೆಡ್ಡಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಯಾರೇ ಆಗಲಿ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆ ಮಾಡುವ ಕಡೆ ನಮ್ಮ ದೃಷ್ಠಿ ನೆಟ್ಟಿರಲಿ. 

Ex Mla GH Thippareddy Talks Over PM Narendra Modi At Chitradurga gvd
Author
First Published Feb 3, 2024, 4:01 PM IST

ಚಿತ್ರದುರ್ಗ (ಫೆ.03): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಯಾರೇ ಆಗಲಿ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆ ಮಾಡುವ ಕಡೆ ನಮ್ಮ ದೃಷ್ಠಿ ನೆಟ್ಟಿರಲಿ. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಹಗಲಿರುಳು ಶ್ರಮಿಬೇಕು. ಈ ಬಗ್ಗೆ ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಬೇಕೆಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ಚಿತ್ರದುರ್ಗದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಶುಕ್ರವಾರ ಹಿರಿಯೂರು ಮತ್ತು ಶಿರಾ ತಾಲೂಕಿನ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಕೆಲ ಮುಖಂಡರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರವನ್ನು ಗೆಲಲ್ಲೇಬೇಕಿದೆ. ಈ ಅನಿವಾರ್ಯತೆಯನ್ನು ಎಲ್ಲರೂ ಮನಗಾಣಬೇಕೆಂದರು.

ಕಾಂಗ್ರೆಸ್‌ ಗ್ಯಾರಂಟಿಗಳಿಂದ ಕುಟುಂಬಕ್ಕೆ ಆರ್ಥಿಕ ಬಲ: ಶಾಮನೂರು ಶಿವಶಂಕರಪ್ಪ

ಕಳೆದ ಬಾರಿಗಿಂತ ಈ ಸಲ ಹೆಚ್ಚಿನ ಲೋಕಸಬಾ ಸ್ಥಾನವನ್ನು ಈ ಬಾರಿ ಗೆಲ್ಲಬೇಕಿದೆ. ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಯಲ್ಲಿ ಹಾಗೆಯೇ ಮುಂದುವರಿಯ ಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೊಂದು ಗೌರವ ತಂದುಕೊಟ್ಟಿರುವ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವ ತನಕ ಯಾರೂ ವಿರಮಿಸುವುದು ಬೇಡ. ಬಿಜೆಪಿ ಬಗ್ಗೆ ಎಲ್ಲೆಡೆ ನಂಬಿಕೆಗಳು ಶುರುವಾಗದಿದ್ದು ಜೆಡಿಎಸ್, ಕಾಂಗ್ರೆಸ್ ತೊರೆದು ಮುಖಂಡರುಗಳು ನಮ್ಮ ಕಡೆ ಮುಖ ಮಾಡಿದ್ದಾರೆ. ಎಲ್ಲರೂ ಸೇರಿ ಮುಂದಿನ ದಿನಮಾನದಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸೋಣ ಎಂದರು.

ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಸಿದ ಮತಕ್ಕಿಂತ ಈ ಬಾರಿಯ ಚುನಾವಣೆಯಲ್ಲಿ ಶೇ.10ರಷ್ಟು ಹೆಚ್ಚಿನ ಪ್ರಮಾಣದ ಮತವನ್ನು ಗಳಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಒಂದೇ ಜನಾಂಗದವರು ಹಲವಾರು ಜನ ಚುನಾವಣಾ ಕಣದಲ್ಲಿ ಇದಿದ್ದರಿಂದ ನಮಗೆ ಅನುಕೂಲವಾಯಿತು. ಆದರೆ ಈ ಬಾರಿ ಪರಿಸ್ಥಿತಿ ಹಿಂದಿನಂತೆ ಇಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಶ್ರಮ ಹಾಕಬೇಕಿದೆ. ಕಳೆದ 10 ವರ್ಷದಲ್ಲಿ ನರೇಂದ್ರ ಮೋದಿಯವರು ಮಾಡಿದ ವಿವಿಧ ರೀತಿಯ ಸಾಧನೆಗಳನ್ನು ಗ್ರಾಮ ಗ್ರಾಮಗಳಲ್ಲಿಯೂ ತಿಳಿಸಬೇಕಿದೆ. ಚುನಾವಣೆಯಲ್ಲಿ ಟಿಕೆಟ್ ಯಾರೇ ತರಲಿ, ಅದರ ಉಸಾಬರಿ ಬೇಡ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದರ ಕಡೆ ನಮ್ಮ ಗುರಿ ಇರಲಿ ಎಂದು ತಿಪ್ಪಾರೆಡ್ಡಿ ಹೇಳಿದರು.

ಜೆಡಿಎಸ್ ತೋರಿದು ಬಿಜೆಪಿ ಸೇರ್ಪಡೆಯಾದ ಜಿಪಂ ಮಾಜಿ ಸದಸ್ಯ ದ್ಯಾಮಣ್ಣ ಮಾತನಾಡಿ, ನಾನು ಈ ಹಿಂದೆ ಬಿಜೆಪಿಯಲ್ಲಿಯೇ ಇದ್ದು ಹಲವಾರು ಕಾರಣ ದಿಂದ ಜೆಡಿಎಸ್‍ಗೆ ಹೋಗಿದ್ದೆ. ಈಗ ಮೋದಿಯವರ ಕಾರ್ಯ ವೈಖರಿಯನ್ನು ಮೆಚ್ಚಿ ಮರಳಿ ಬಿಜೆಪಿಗೆ ಬಂದಿದ್ದೇನೆ. ನನ್ನ ಕ್ಷೇತ್ರದ 284 ಬೂತ್‍ಗಳಲ್ಲಿಯೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಲೀಡ್ ನೀಡಲಾಗುವುದು. ಅಲ್ಲದೆ ನಮ್ಮ ಪಕ್ಷದ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲುವನ್ನು ಸಾಧಿಸಲು ಈಗಿನಿಂದಲೇ ಶ್ರಮವನ್ನು ಹಾಕುವುದಾಗಿ ತಿಳಿಸಿದರು.

ಜಾತಿ ಹೆಸರಿನಲ್ಲಿ ದೇಶ ಒಡೆದು ವಿಭಜನೆ ಮಾಡಿದ್ದೇ ಕಾಂಗ್ರೆಸ್: ಸಿ.ಟಿ.ರವಿ

ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಸಂಪತ್ ಕುಮಾರ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ಹಿರಿಯೂರು ಮಂಡಲ ಅಧ್ಯಕ್ಷ ಶಿವಣ್ಣ ಜಿಲ್ಲಾ ಕಾರ್ಯದರ್ಶಿ ಮೋಹನ್, ವಕ್ತಾರ ಶಿವಪ್ರಕಾಶ್ ದಗ್ಗೆ, ಸೇರಿದಂತೆ ಇತರರು ಉಪಸ್ಥಿತರಿ ದ್ದರು. ಈ ಸಂದರ್ಭದಲ್ಲಿ ದ್ಯಾಮಣ್ಣರವರ ಜೊತೆಯಲ್ಲಿ ರವಿವರ್ಮ, ಸೋಮಣ್ಣ, ಶೇಖರಪ್ಪ, ರಂಗನಾಥ್, ರುದ್ರೇಶ್ ಬಿಜೆಪಿಯನ್ನು ಸೇರ್ಪಡೆಯಾದರು.

Follow Us:
Download App:
  • android
  • ios