ಜಗದೀಶ್ ಶೆಟ್ಟರ್ ಡಿಎನ್‌ಎ ಸಂಘ ಪರಿವಾರದ್ದೇ ಹೊರತು ಕಾಂಗ್ರೆಸ್‌ನದ್ದಲ್ಲ: ಸಿ.ಟಿ.ರವಿ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಡಿಎನ್‌ಎ ಸಂಘ ಪರಿವಾರದ್ದೇ ಹೊರತು ಕಾಂಗ್ರೆಸ್‌ನದ್ದಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರ ಚಿಕ್ಕಪ್ಪ ಜನ ಸಂಘ ದಿಂದ ಗೆದ್ದಿದ್ದರು.

Ex Mla CT Ravi Talks Over Jagadish Shettar At Chikkamagaluru gvd

ಚಿಕ್ಕಮಗಳೂರು (ಡಿ.02): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಡಿಎನ್‌ಎ ಸಂಘ ಪರಿವಾರದ್ದೇ ಹೊರತು ಕಾಂಗ್ರೆಸ್‌ನದ್ದಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರ ಚಿಕ್ಕಪ್ಪ ಜನ ಸಂಘ ದಿಂದ ಗೆದ್ದಿದ್ದರು. ಶೆಟ್ಟರ್ ಸಹ ಬಿಜೆಪಿಯಿಂದಲೇ ಗೆದ್ದು ಅಧಿಕಾರ ಅನುಭವಿಸಿದವರು. ಈಗ ಕಾಂಗ್ರೆಸ್ ಸೇರಿಕೊಂಡು ಏನೇನೋ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ರಿಪೇರಿ ಮಾಡಲು ಸಾಧ್ಯವಿಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿರುವ ಸಿ.ಟಿ.ರವಿ ಅವರು, ಬಿಜೆಪಿಯ ಪ್ರೊಡಕ್ಷನ್ ಯೂನಿಟ್ ಚೆನ್ನಾಗಿದೆ. ಪ್ರಾಡಕ್ಟ್ ಗಳು ಕೆಲವೊಮ್ಮೆ ಫಸ್ಟ್ ಕ್ವಾಲಿಟಿ ಇನ್ನು ಕೆಲವೊಮ್ಮೆ ಸೆಕೆಂಡ್ ಕ್ವಾಲಿಟಿ ಬರುತ್ತವೆ. ಪ್ರೊಡಕ್ಷನ್ ಯೂನಿಟ್ ಎಲ್ಲಿವರೆಗೂ ಚೆನ್ನಾಗಿರುತ್ತದೆಯೋ ಅಲ್ಲಿಯವರೆಗೂ ಬಿಜೆಪಿಯನ್ನು ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಹೊಸದಾಗಿ ಮತಾಂತರಗೊಂಡವರು ನಾವು ಕಟ್ಟರ್ ಎಂದು ತೋರಿಸಿಕೊಳ್ಳಲು ಏನೇನೋ ಮಾಡುತ್ತಾರೆ, ಅದೇ ರೀತಿ ಶೆಟ್ಟರ್ ಸಹ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅವರಿಗೆ ಬಿಜೆಪಿ ಸೈದ್ಧಾಂತಿಕ ನೆಲೆಯಲ್ಲಿ ರೂಪುಗೊಂಡ ಪಕ್ಷವೆಂಬ ಅರಿವಿದೆ. ಹೀಗಿರುವಾಗ ಬಿಜೆಪಿಗೆ ಬೈದರೆ ಕಾಂಗ್ರೆಸ್ ನವರು ನನ್ನನ್ನು ನಂಬುತ್ತಾರೆ ಎಂದು ಭಾವಿಸಿದ್ದಾರೆ. ಒಟ್ಟಾರೆಯಾಗಿ ಜಗದೀಶ್ ಶೆಟ್ಟರ್ ಅತಂತ್ರ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ ಎಂದು ಹೇಳಿದರು. ಜಗದೀಶ್ ಶೆಟ್ಟರ್ ಪಕ್ಷ ಬದಲು ಮಾಡಿರಬಹುದು ಆದರೆ ಅವರ ರಕ್ತವನ್ನು ಬದಲು ಮಾಡಲು ಸಾಧ್ಯ ವಾಗುತ್ತದೆಯೇ ? ಜಗದೀಶ್ ಶೆಟ್ಟರ್ ಅವರ ರಕ್ತ ಜನಸಂಘದಿಂದ ಬಂದಂತಹ ಬಿಜೆಪಿ ರಕ್ತ ಎಂದು ತಿವಿದರು.

ಯಾವುದನ್ನೂ ಉಚಿತವಾಗಿ ಕೊಡಬಾರದು ಎಂದಿರುವ ನಾರಾಯಣಮೂರ್ತಿಗೆ ಬಡವರ ಕಷ್ಟ ಗೊತ್ತಿಲ್ಲ: ಸಚಿವ ಮಹದೇವಪ್ಪ

ಅಪ್ಪ ಮಕ್ಕಳ ರಾಜ್ಯಭಾರ ಬಗ್ಗೆ ಚರ್ಚೆ ಮಾಡುವುದಿಲ್ಲ: ಕಾಂಗ್ರೆಸನ್ನು ಟೀಕಿಸುತ್ತಿದ್ದ ಬಿಜೆಪಿಯಲ್ಲೂ ಅಪ್ಪ ಮಕ್ಕಳ ರಾಜ್ಯಭಾರ ಆರೋಪದ ಬಗ್ಗೆ ನಾನು ಈ ಸಂದರ್ಭ ಚರ್ಚೆ ಮಾಡುವುದಿಲ್ಲ. ಚರ್ಚಿಸಲು ಹೊರಟರೆ ಬೇರೆಬೇರೆ ಅರ್ಥಗಳು ಹುಟ್ಟಿಕೊಳ್ಳುತ್ತದೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಜಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಸಂಸದೀಯ ಸಮಿತಿಯನ್ನೂಳಗೊಂಡ ವರಿಷ್ಠರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಂತಹ ಆರೋಪಗಳು ಕೇಳಿ ಬಂದಿರುವುದು ನಿಜ, ಆದರೆ ಈಗ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸದೃಢವಾಗಿ ಬೆಳೆಯಲಿ ಎಂದರು.

Latest Videos
Follow Us:
Download App:
  • android
  • ios