ಹೆದರಿಸಿ ರಾಜಕಾರಣ ಮಾಡುವುದೇ ಡಿಕೆಶಿ ಸ್ಟೈಲ್: ಸಿ.ಟಿ.ರವಿ
ಗುತ್ತಿಗೆದಾರರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿರುವುದು ಪಂಚರಾಜ್ಯ ಚುನಾವಣೆಗೆ ಸಂಗ್ರಹಿಸಲಾದ ಹಣವೆನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಕಾಂಗ್ರೆಸ್ ವಲಯದಿಂದಲೇ ನಮಗೆ ಮಾಹಿತಿ ಲಭ್ಯ ಆಗಿದೆ ಆಗಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.

ಚಿತ್ರದುರ್ಗ (ಅ.17): ಗುತ್ತಿಗೆದಾರರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿರುವುದು ಪಂಚರಾಜ್ಯ ಚುನಾವಣೆಗೆ ಸಂಗ್ರಹಿಸಲಾದ ಹಣವೆನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಕಾಂಗ್ರೆಸ್ ವಲಯದಿಂದಲೇ ನಮಗೆ ಮಾಹಿತಿ ಲಭ್ಯ ಆಗಿದೆ ಆಗಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು. ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈವೋಲ್ಟೇಜ್ ಮೀಟಿಂಗ್ ಮಾಹಿತಿ ಕೂಡಾ ಸಿಕ್ಕಿದೆ, ಈ ವಿಚಾರವಾಗಿ ಸದ್ಯಕ್ಕೆ ಏನೂ ಹೇಳಲ್ಲ. ಐಟಿ ದಾಳಿ ವೇಳೆ ಬರಗಾಲದಲ್ಲಿ ನೂರು ಕೋಟಿ ಹಣ ಸಿಕ್ಕಿದೆ. ಕೆಲವು ಭಾಗದಲ್ಲಿ ಹೆದರಿಸಿ, ಬೆದರಿಸಿ ಹಣ ಸಂಗ್ರಹಿಸಿದ್ದಾರೆ.
ಹಣ ಸಿಕ್ಕಿರುವ ಅಂಬಿಕಾಪತಿ ಇವರಿಗೆ ದೂರದವರಲ್ಲ. ಸಿಎಂ ಮತ್ತು ಡಿಸಿಎಂ ಇಬ್ಬರೂ ಪ್ರಾಮಾಣಿಕರು ಆಗಿದ್ದರೆ ಸಿಬಿಐ ತನಿಖೆಗೆ ವಹಿಸಲಿ ಎಂದರು. ರಾಜೀವ್ ತಾರನಾಥ್ ಅವರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿದೆ. ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯ, ಮೈಸೂರು ಉಸ್ತುವಾರಿ ಸಚಿವ ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಕೂಡಾ ಇದ್ದರು. ಇದ್ದವರು ಮೂವರು, ಕದ್ದವರು ಯಾರು ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದರು.
ಜನರು ನನ್ನನ್ನು ಮನೆಮಗಳಂತೆ ಪ್ರೀತಿಯಿಂದ ಕಾಣುತ್ತಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬಿಜೆಪಿ ಲೂಟಿ ನಾಯಕರಿಗೆ ಉತ್ತರ ಕೊಡ್ತೀನಿ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಸಿದ ಸಿ.ಟಿ.ರವಿ, ಹೆದರಿಸಿ ರಾಜಕಾರಣ ಮಾಡುವುದೇ ಅವರ ಸ್ಟೈಲ್. ಎಲ್ಲರನ್ನ ಎಲ್ಲಾ ಕಾಲದಲ್ಲಿ ಹೆದರಿಸಿ ರಾಜಕಾರಣ ಮಾಡಲು ಆಗಲ್ಲ ಎಂದರು. ಧರ್ಮದ ಆಧಾರದ ಮೇಲೆ ಭಯೋತ್ಪಾದನೆ ನಡೆಯುತ್ತಿದೆ ಎಂದ ಖಂಡ್ರೆ ಹೇಳಿಕೆಗೆ ತಡವಾಗಿ ಆದರೂ ಸಚಿವ ಈಶ್ವರ್ ಖಂಡ್ರೆ ಸತ್ಯ ಹೇಳಿದ್ದಾರೆ. ಇಸ್ಲಾಂ ಹೆಸರಲ್ಲಿ ಭಯೋತ್ಪಾದನೆ ನಡೆಯುತ್ತಿದೆ ಎಂದರು.
ಡಿವಿಎಸ್ ಮಾತಿಗೆ ಸಿ.ಟಿ.ರವಿ ಪರೋಕ್ಷ ಆಕ್ಷೇಪ: ನಳಿನ್‌ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರುವುದರಿಂದ ಆ ಸ್ಥಾನಕ್ಕೆ ಎಲ್ಲರೂ ಗೌರವ ಕೊಡಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಬದಲಾವಣೆ ಆಗದಿರುವುದರಿಂದ ಕಾರ್ಯಕರ್ತರು ನೊಂದಿದ್ದಾರೆ ಎಂಬ ಸಂಸದ ಡಿ.ವಿ.ಸದಾನಂದಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಇವರೆಲ್ಲಾ ಚಿಗುರುತ್ತಾರೆ: ಭಗವಾನ್ ವಿರುದ್ಧ ಸುಧಾಕರ್ ಆಕ್ರೋಶ
ಈಗಾಗಲೇ ನಳಿನ್ ಕುಮಾರ್ ಕಟೀಲ್ ಅವರು ತಮ್ಮನ್ನು ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಪಕ್ಷದ ವರಿಷ್ಠರನ್ನು ಕೇಳಿಕೊಂಡಿದ್ದಾರೆ. ವರಿಷ್ಠರು ಯಾವಾಗ ನಿರ್ಣಯ ಮಾಡುವರೋ ಗೊತ್ತಿಲ್ಲ. ಈಗ ಕಟೀಲ್ ಅವರು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇದ್ದ ಮೇಲೆ ಆ ಸ್ಥಾನಕ್ಕೆ ಎಲ್ಲರೂ ಗೌರವ ಕೊಡಬೇಕು ಎಂದು ಡಿ.ವಿ.ಸದಾನಂದಗೌಡ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಟಾಂಗ್ ನೀಡಿದರು.