ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡವಾಳ ಬಯಲು: ಮಾಜಿ ಸಚಿವ ರಾಮದಾಸ್ ಭವಿಷ್ಯ

ಗ್ಯಾರಂಟಿಗಳನ್ನು ತೋರಿಸಿಕೊಂಡು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಬಂಡವಾಳ ಮೇ ತಿಂಗಳಲ್ಲಿ ನಡೆಯುವ ಲೋಕಾಸಭಾ ಚುನಾವಣೆಯಲ್ಲಿ ಬಯಲಾಗಲಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಭವಿಷ್ಯ ನುಡಿದರು. 

Ex Minister SA Ramadas Slams On Congress Govt At Hassan gvd

ಹಾಸನ (ನ.23): ಗ್ಯಾರಂಟಿಗಳನ್ನು ತೋರಿಸಿಕೊಂಡು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಬಂಡವಾಳ ಮೇ ತಿಂಗಳಲ್ಲಿ ನಡೆಯುವ ಲೋಕಾಸಭಾ ಚುನಾವಣೆಯಲ್ಲಿ ಬಯಲಾಗಲಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಭವಿಷ್ಯ ನುಡಿದರು. ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ರಾಷ್ಟ್ರ ನಾಯಕರು ಅಂತ ಬಂದಾಗ ಅವರ ಘನತೆ, ಗೌರವದಲ್ಲಿ ನಾನೇನು ಮಾತನಾಡುತ್ತಿದ್ದೀನಿ ಎಂಬುದರ ಅರಿವು ಇಟ್ಟುಕೊಂಡು ಮಾತನಾಡುವುದು ಒಳ್ಳೆಯದು. ಇದೇನು ಅವರಿಗೆ ಹೊಸತಲ್ಲ. ಈ ಥರ ಮಾತನಾಡಿ ಕೊನೆಗೆ ಕೇಸು ನ್ಯಾಯಾಲಯದಲ್ಲೂ ಬರುವಂತಾಯಿತು. 

ಮೋದಿ ಬಗ್ಗೆ ಮಾತನಾಡಲು ಅವರ ಬಳಿ ಏನು ಉಳಿದಿಲ್ಲ. ಯುಪಿಎ ಸರಕಾರದಲ್ಲಿ ಮಾಡಿದಂತ ಹಗರಣಗಳನ್ನು ಮೋದಿ ಸರ್ಕಾರ ಮಾಡಿಲ್ಲ. ಇಡೀ ದೇಶ ನೆಮ್ಮದಿಯಿಂದ ಇದೆ. ಜನರು ಬಿಜೆಪಿ ಬಗ್ಗೆ ಏನು ಮಾತನಾಡದ ಸಂದರ್ಭದಲ್ಲಿ ಇಂತಹ ಕ್ಷುಲ್ಲಕ ಮಾತುಗಳನ್ನು ಹೇಳುವಂತದ್ದು ರಾಹುಲ್ ಗಾಂಧಿಯವರ ಘನತೆ, ಗೌರವಕ್ಕೆ ತಕ್ಕದಲ್ಲ. ಗೆದ್ದಾಗ ಎಲ್ಲದೂ ನಮ್ಮದೆ ಎನ್ನುತ್ತಾರೆ. ಸೋತಾಗ ಯಾರು ನಮ್ಮದಲ್ಲ ಎನ್ನುತ್ತಾರೆ. ಆದರೆ ನಮ್ಮ ದೇಶದ ಪ್ರಧಾನಿ ಸೋತಂತ ಆಟಗಾರರ ಬಳಿ ಹೋಗಿ ಧೈರ್ಯ ಹೇಳಿ ಗೆಲುವು ಬರುವ ದಿನಗಳು ಬರುತ್ತವೆ ಎಂದು ಹೇಳುವವರು ದೇಶದ ಇತಿಹಾಸದಲ್ಲಿ ಯಾವುದೇ ಪ್ರಧಾನಮಂತ್ರಿ ಮಾಡಿರುವುದಿಲ್ಲ

ವಿ.ಸೋಮಣ್ಣ ಬಿಜೆಪಿ ಪಕ್ಷ ಬಿಡಲ್ಲ: ಮಾಜಿ ಸಚಿವ ರಾಮದಾಸ್ ಸ್ಪಷ್ಟನೆ

ಈ ಬಗ್ಗೆ ಶ್ಲಾಘಿಸಬೇಕೆ ಹೊರತು ಇಂತಹ ಕ್ಷುಲಕ ಮಾತುಗಳನ್ನಾಡಬಾರದು ಎಂದು ಸಲಹೆ ನೀಡಿದರು. ರಾಹುಲ್ ಗಾಂಧಿ ಅವರು ರಾಷ್ಟ್ರೀಯ ನಾಯಕರು ಎಂದು ಹೇಳಿಕೊಳ್ಳುವುದಕ್ಕೆ ಅವರ ಪಾರ್ಟಿಯವರಿಗೇ ಬೇಸರವಾಗುತ್ತದೆ ಎಂದು ಟಾಂಗ್ ನೀಡಿದರು. ಯಾವುದೇ ಶಾಸಕರು ಕ್ಷೇತ್ರದಲ್ಲಿ ರಸ್ತೆ, ಮೋರಿ ಹಾಗೂ ಯಾವ ಅಭಿವೃದ್ಧಿ ಕೆಲಸ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಜನರಲ್ಲಿ ಅಸಮಾಧಾನ ಇದೆ. ಹಾಗಾಗಿ ಜನರನ್ನು ಬೇರೆಡೆ ಡೈವರ್ಟ್ ಮಾಡುವ ಸಲುವಾಗಿ ಕಾಂಗ್ರೆಸ್ ನಾಯಕರು ಇಷ್ಟೆಲ್ಲಾ ಡ್ರಾಮಾ ಮಾಡುತ್ತಿದ್ದಾರೆ. ಆದರೆ ಲಾಭ, ನಷ್ಟದ ಈ ಎಲ್ಲಾ ಹೇಳಿಕೆಗಳ ಬಂಡವಾಳ ತಿಳಿಯುವುದು ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶದಿಂದ.

ರೈತರು ಬದುಕಿದ್ದಾಗ ಪರಿಹಾರ ನೀಡಿ: ಸ್ವಾಮೀಜಿಗಳೊಂದಿಗೆ ಬರ ಅಧ್ಯಯನ ಮಾಡಿದ ಜೆಡಿಎಸ್

ಈಗಾಗಲೇ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ವಿಜಯೇಂದ್ರ ಅವರು ಒಂದು ಸಂಕಲ್ಪ ಮಾಡಿದ್ದು, ರಾಜ್ಯದಲ್ಲಿ ೨೮ಕ್ಕೆ ೨೮ ಎಂಪಿ ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ಭಾವನೆಗಳಿವೆ. ನಾವು ನಮ್ಮ ನೋವುಗಳನ್ನೆಲ್ಲಾ ಮರೆತು ಈ ದೇಶಕ್ಕೆ ಮತ್ತೊಮ್ಮೆ ಮೋದಿ ಬೇಕು, ಆಗೇ ದೇಶದ ಅಭಿವೃದ್ಧಿ ಆಗಬೇಕು ಎನ್ನುವ ವಿಚಾರವನ್ನಿಟ್ಟುಕೊಂಡು ಹೊರಟಿದ್ದೇವೆ. ಕಾಂಗ್ರೆಸ್ ನಾಯಕರು ಹೇಳಿದ ಮಾತಿಗೆ ಮೇ ತಿಂಗಳಲ್ಲಿ ನಡೆಯುವ ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಬಣ್ಣ ಗೊತ್ತಾಗಲಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್, ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಪ್ರಸನ್ನಕುಮಾರ್, ಪ್ರವೀಣ್ ಇತರರು ಇದ್ದರು.

Latest Videos
Follow Us:
Download App:
  • android
  • ios