ಸೋಮಶೇಖರ್‌ ಕಾಂಗ್ರೆಸ್‌ ಸೇರ್ಪಡೆ ಊಹಾಪೋಹ: ಆರ್‌.ಅಶೋಕ್‌

ಪಕ್ಷದ ಶಾಸಕ ಎಸ್‌.ಟಿ.ಸೋಮಶೇಖರ್‌ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಅದೆಲ್ಲವೂ ಊಹಾಪೋಹ ಎಂದು ಬಿಜೆಪಿ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. ಗುರುವಾರ ಸೋಮಶೇಖರ್‌ ಅವರು ಅಶೋಕ್‌ ಅವರ ನಿವಾಸಕ್ಕೆ ಆಗಮಿಸಿ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದರು.

Ex Minister R Ashok Talks Over ST Somashekhar gvd

ಬೆಂಗಳೂರು (ಆ.25): ಪಕ್ಷದ ಶಾಸಕ ಎಸ್‌.ಟಿ.ಸೋಮಶೇಖರ್‌ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಅದೆಲ್ಲವೂ ಊಹಾಪೋಹ ಎಂದು ಬಿಜೆಪಿ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. ಗುರುವಾರ ಸೋಮಶೇಖರ್‌ ಅವರು ಅಶೋಕ್‌ ಅವರ ನಿವಾಸಕ್ಕೆ ಆಗಮಿಸಿ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ಶಾಸಕ ಸೋಮಶೇಖರ್‌ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ನನಗೆ ಗೊತ್ತು. ನಾನೇ ಬಿಜೆಪಿಗೆ ಕರೆತಂದಿರುವ ಸೋಮಶೇಖರ್‌ ಕಾಂಗ್ರೆಸ್‌ಗೆ ಹೋಗಲ್ಲ. ಅವರ ಕ್ಷೇತ್ರದಲ್ಲಿನ ಕೆಲವು ಪಕ್ಷದ ಮುಖಂಡರು ತಮ್ಮ ವಿರುದ್ಧ ಚಟುವಟಿಕೆ ನಡೆಸಿದ್ದರಿಂದ ನೋವಾಗಿದೆ ಎಂಬ ಮಾತನ್ನು ಪ್ರಸ್ತಾಪಿಸಿದರು. 

ನಮ್ಮ ಸರ್ಕಾರದಲ್ಲಿ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು. ನಾವು ಸರ್ಕಾರ ಮಾಡುವ ಸಂದರ್ಭದಲ್ಲಿ ಸೋಮಶೇಖರ್‌ ಸೇರಿ ಐವರನ್ನು ನಾನೇ ಬಿಜೆಪಿಗೆ ಕರೆತಂದಿದ್ದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹತ್ತು ಮಂದಿಯನ್ನು ಪಕ್ಷಕ್ಕೆ ಕರೆತಂದಿದ್ದರು. ಎಲ್ಲರಿಗಿಂತ ಸೋಮಶೇಖರ್‌ ನನಗೆ ಚೆನ್ನಾಗಿ ಗೊತ್ತಿದೆ. ಉತ್ತರಹಳ್ಳಿ ಕ್ಷೇತ್ರದಲ್ಲಿ ನಾನು ಮೂರು ಬಾರಿ ಶಾಸಕನಾಗಿದ್ದೆ. ನಮ್ಮಿಬ್ಬರ ನಡುವೆ ಬಹಳ ಒಡನಾಟವಿದೆ. ಪ್ರತಿ ದಿನ ಒಂದೆರೆಡು ಬಾರಿ ನನಗೆ ಕರೆ ಮಾಡಿ ಮಾತನಾಡುತ್ತಾರೆ. ನನ್ನ ಹುಟ್ಟುಹಬ್ಬಕ್ಕೆ ನನ್ನ ಜತೆಯಲ್ಲೇ ಸೋಮಶೇಖರ್‌ ಬಂದಿದ್ದರು ಎಂದು ಹೇಳಿದರು.

ಲೋಕಸಭೆಗೆ ಸ್ಪರ್ಧಿಸುವ ಹುಚ್ಚಿಲ್ಲ: ಶಾಸಕ ಎಸ್‌.ಟಿ.ಸೋಮಶೇಖರ್‌

ಮತ್ತೆ ಕಾಂಗ್ರೆಸ್‌ ಕದ ತಟ್ಟಿದರೆ ಮರ್ಯಾದೆಗೇಡು: ಕಾಂಗ್ರೆಸ್‌ ಸೇರುವವರನ್ನು ಅವರು ಮರ್ಯಾದೆ ಕೊಟ್ಟು ಕರೆಸಿಕೊಳ್ಳುತ್ತಿಲ್ಲ. ಬಂದವರೆಲ್ಲ ಲಾಸ್ಟ್‌ ಬೆಂಚ್‌ ಅಂತ ಅವರೇ ಹೇಳಿದ್ದಾರೆ. ಹಾಗಾಗಿ ಮರ್ಯಾದೆ ಇರೋರಾರ‍ಯರೂ ಕಾಂಗ್ರೆಸ್‌ ಸೇರುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಹೋಗುವವರಿಗೆ ನಾನೇನೂ ಹೇಳಲಾರೆ. ಅವರು ಯಾವ ಭಯಕ್ಕೆ ಹೋಗುತ್ತಿದ್ದಾರೋ ಗೊತ್ತಿಲ್ಲ. ಈಗ ಹೋದರೆ ಅವರಿಗೂ ಮರ್ಯಾದೆ ಸಿಗುವುದಿಲ್ಲ ಎಂದರು. ಇನ್ನು, ಪಕ್ಷ ಬಿಡುತ್ತಿರುವವರ ಬಗ್ಗೆ ವದಂತಿಗಳು ಹರಡುತ್ತಿವೆ. 

ನಾವು ‘ಆಪರೇಷನ್‌ ಹಸ್ತ’ ಮಾಡುತ್ತಿಲ್ಲ, ಅವರೇ ಬರ್ತಿದ್ದಾರೆ: ಸಚಿವ ಎಂ.ಬಿ.ಪಾಟೀಲ್‌

ನಾನು ಮುನಿರತ್ನ, ಡಿ.ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್‌ ಜೊತೆ ಮಾತನಾಡಿದ್ದೇನೆ. ಈ ಪೈಕಿ ಸೋಮಶೇಖರ್‌ ಅವರನ್ನು ಕಾಂಗ್ರೆಸ್‌ನವರು ಸಂಪರ್ಕಿಸಿರುವುದು ನಿಜ. ಈ ವದಂತಿ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಯಾರೂ ಕಾಂಗ್ರೆಸ್‌ ಸೇರುತ್ತಿಲ್ಲ ಎಂದು ಹೇಳಿದರು. ಹಿಂದೆ ನಮ್ಮಪ್ಪ ನನ್ನನ್ನು ದೇವೇಗೌಡರ ಪಾರ್ಟಿ ಸೇರಿಕೋ ಎಂದಿದ್ದರು. ಆದರೆ, ನಾವು ಯಡಿಯೂರಪ್ಪನ ಹೋರಾಟ ನೋಡಿ ಪಕ್ಷಕ್ಕೆ ಬಂದವರು. ಅವರ ಜೊತೆಗೇ ಪಕ್ಷ ಕಟ್ಟಿದ್ದೇವೆ. ಮುಂದೆಯೂ ಪಕ್ಷ ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು. ಇನ್ನು, ಬಿಜೆಪಿಗೆ ನಾಯಕತ್ವದ ಕೊರತೆಯಿದೆ ಎಂಬ ಕಾಂಗ್ರೆಸ್‌ ಹೇಳಿಕೆಗೆ, ಸನ್ನಿವೇಶವನ್ನು ಎದುರಿಸಿ ನಿಲ್ಲುವುದು ನಾಯಕತ್ವ . ಅದು ಅಧಿಕಾರ ಹಸ್ತಾಂತರಿಸಿದಂತಲ್ಲ ಎಂದು ವ್ಯಾಖ್ಯಾನಿಸಿದರು.

Latest Videos
Follow Us:
Download App:
  • android
  • ios