Asianet Suvarna News Asianet Suvarna News

ಜಗದೀಶ್‌ ಶೆಟ್ಟರ್ ವಾಪಸಾತಿ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ: ರೇಣುಕಾಚಾರ್ಯ

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಹಿರಿಯ ನಾಯಕರಾಗಿದ್ದು, ವಿಧಾನಸಭೆ ಚುನವಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದರಿಂದ ಮನಸ್ಸಿಗೆ ನೋವಾಗಿ ಹೊರ ಹೋಗಿದ್ದಾರೆ. ಶೆಟ್ಟರ್‌ ವಾಪಸಾತಿ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

Ex Minister MP Renukacharya Talks over Jagadish Shettar gvd
Author
First Published Dec 3, 2023, 2:15 PM IST

ದಾವಣಗೆರೆ (ಡಿ.03): ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಿರಿಯ ನಾಯಕರಾಗಿದ್ದು, ವಿಧಾನಸಭೆ ಚುನವಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದರಿಂದ ಮನಸ್ಸಿಗೆ ನೋವಾಗಿ ಹೊರ ಹೋಗಿದ್ದಾರೆ. ಶೆಟ್ಟರ್‌ ವಾಪಸಾತಿ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಬಿಜೆಪಿಗೆ ಮರಳುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಶೆಟ್ಟರ್ ಮತ್ತೆ ಮರಳಿ ಬಿಜೆಪಿಗೆ ಬರುವ ಮಾಹಿತಿಯೂ ನನಗಿಲ್ಲ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದೇನೆ. ಈ ಬಗ್ಗೆ ಪಕ್ಷವು ಸರ್ವೇ ಮಾಡಿಸಲಿ. ಪದೇಪದೇ ನನ್ನ ಬಗ್ಗೆ ನಾನೇ ಹೇಳಿದರೆ ನನ್ನ ವರ್ಚಸ್ಸು ಕುಂದುತ್ತದೆ. ಪಕ್ಷದ ನಾಯಕರು ಸಮೀಕ್ಷೆ ಮಾಡಿಸಲಿ. ಜನಾಭಿಪ್ರಾಯದ ಆದಾರದಲ್ಲಿ ನನಗೆ ಟಿಕೆಟ್ ನೀಡಲಿ ಎಂದು ಅವರು ತಿಳಿಸಿದರು. ಆಡಳಿತ ವೈಫಲ್ಯ ಹಾಗೂ ಬರ ನಿರ್ವಹಣೆ ವೈಫಲ್ಯ ಖಂಡಿಸಿ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಿದ್ದೇವೆ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಜನರು ಬೇಸತ್ತಿದ್ದಾರೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನ: ರೇಣುಕಾಚಾರ್ಯ ಭವಿಷ್ಯ

ಜಮೀರ್ ಅಹಮ್ಮದ್ ತಾನೊಬ್ಬ ಸಚಿವ ಎಂಬುದನ್ನೂ ಮರೆತು ಮಾತನಾಡುವುದು ಸರಿಯಲ್ಲ. ಸಭಾಪತಿ ಹುದ್ದೆಗೆ ಅವಮಾನಿಸುವ ಕೆಲಸ ಜಮೀರ್ ಮಾಡಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಕನಿಷ್ಠ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅವರು ತಿಳಿಸಿದರು.

ಜಾತಿ ವರದಿಗೆ ಆಡಳಿತ ಪಕ್ಷದಲ್ಲೂ ವಿರೋಧ: ರಾಜ್ಯದಲ್ಲಿ ಕೈಗೊಂಡ ಜಾತಿ ಗಣತಿ ಬಗ್ಗೆ ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನ ಹಿರಿಯ ಶಾಸಕ, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಸೇರಿದಂತೆ ಆಡಳಿತ ಪಕ್ಷದ ಸಚಿವರು, ಶಾಸಕರೇ ವಿರೋಧ ಮಾಡುತ್ತಿದ್ದು, ಇಂತಹ ಅವೈಜ್ಞಾನಿಕ ವರದಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಶಿಕ್ಷಣ ಕ್ಷೇತ್ರಕ್ಕೆ ರೇವಣ್ಣ ದಂಪತಿಯ ಕೊಡುಗೆ ಅಪಾರ: ಎಚ್.ಡಿ.ದೇವೇಗೌಡ

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂತರಾಜು ವರದಿ ಬಗ್ಗೆ ಪಕ್ಷಾತೀತವಾಗಿ ಜನ ಪ್ರತಿನಿಧಿಗಳು, ಸಮುದಾಯಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಕಾಂತರಾಜು ವರದಿ ಸರಿ ಇಲ್ಲ. ರಾಜ್ಯದಲ್ಲಿ ಯಾರ ಮನೆಗೂ ಹೋಗಿ, ಸಮೀಕ್ಷೆ ಕೈಗೊಂಡಿಲ್ಲ. ಇದೊಂದು ಅವೈಜ್ಞಾನಿಕ ವರದಿಯಾಗಿದೆ. ಸರಿಯಾದ ರೀತಿ, ವೈಜ್ಞಾನಿಕವಾಗಿ ಸಮೀಕ್ಷೆ ಕೈಗೊಂಡು, ಅದರ ಆದಾರದಲ್ಲಿ ವರದಿ ನೀಡಲಿ ಎಂದು ಆಗ್ರಹಿಸಿದರು.

Follow Us:
Download App:
  • android
  • ios