Asianet Suvarna News Asianet Suvarna News

ಅಲ್ಪಸಂಖ್ಯಾತರ ಸರ್ಕಾರ ಮಾಡ್ತೀರಾ?: ಸಚಿವ ದಿನೇಶ್‌ಗೆ ರೇಣುಕಾಚಾರ್ಯ ಪ್ರಶ್ನೆ

ಅಲ್ಪಸಂಖ್ಯಾತರ ಮನೆ ಸಂಬಂಧ ಬೆಳೆಸಿದ ತಕ್ಷಣ ಸರ್ಕಾರವನ್ನೇ ಅಲ್ಪಸಂಖ್ಯಾತರ ಸರ್ಕಾರ ಮಾಡಲು ಹೊರಟಿದ್ದೀರಾ ಎಂದು ಸಚಿವ ದಿನೇಶ್‌ ಗುಂಡೂರಾವ್ ವಿರುದ್ಧ ಬಿಜೆಪಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

EX Minister MP Renukacharya Slams On Minister Dinesh Gundu Rao gvd
Author
First Published Dec 28, 2023, 11:59 PM IST

ದಾವಣಗೆರೆ (ಡಿ.28): ಅಲ್ಪಸಂಖ್ಯಾತರ ಮನೆ ಸಂಬಂಧ ಬೆಳೆಸಿದ ತಕ್ಷಣ ಸರ್ಕಾರವನ್ನೇ ಅಲ್ಪಸಂಖ್ಯಾತರ ಸರ್ಕಾರ ಮಾಡಲು ಹೊರಟಿದ್ದೀರಾ ಎಂದು ಸಚಿವ ದಿನೇಶ ಗುಂಡೂರಾವ್ ವಿರುದ್ಧ ಬಿಜೆಪಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಧಾರ್ಮಿಕ ಕ್ಷೇತ್ರದ ಮೇಲೆ ಕೇಸರಿ ಧ್ವಜ ಹಾಕಬೇಡಿ ಎನ್ನುಲು ಸಚಿವ ದಿನೇಶ ಗುಂಡೂರಾವ್ ಯಾರು? ಅಲ್ಪಸಂಖ್ಯಾತರ ಮನೆಯಲ್ಲಿ ಸಂಬಂಧ ಬೆಳೆಸಿದ್ದಕ್ಕೆ ಇಡೀ ಸರ್ಕಾರವನ್ನೇ ಮುಸ್ಲಿಮರ ಸರ್ಕಾರ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಮೊದಲು ಅಲ್ಪಸಂಖ್ಯಾತರ ಓಲೈಕೆ ಮಾಡುವುದನ್ನು ದಿನೇಶ್‌ ಗುಂಡೂರಾವ್ ಬಿಡಲಿ. ಹಿಂದುಗಳ ಪವಿತ್ರ ಕ್ಷೇತ್ರ, ಧಾರ್ಮಿಕ ಕ್ಷೇತ್ರಗಳ ಮೇಲೆ ಕೇಸರಿ ಧ್ವಜ ಹಾರಿಸಿದರೆ ಕ್ರಮ ಕೈಗೊಳ್ಳುತ್ತೀರಾ? ದಿನೇಶ ಗುಂಡೂರಾವ್ ನಿಮಗೆ ತಲೆ ಸರಿ ಇದೆಯಾ? ನೀವು ಅಲ್ಪಸಂಖ್ಯಾತರ ಮನೆಯಲ್ಲಿ ಮದುವೆಯಾಗಿದ್ದು, ಕೌಟುಂಬಿಕ ಸಂಬಂಧ ಹೊಂದಿರುವುದು ನಿಮ್ಮ ವೈಯಕ್ತಿಕ. ಹಾಗೆಂದು ಹಿಂದುಗಳು ಹಾಗೂ ಕೇಸರಿ ಧ್ವಜಕ್ಕೆ ಅಪಮಾನ ಮಾಡಿದರೆ ಸಹಿಸುವುದಿಲ್ಲ ಎಂದು ಅವರು ಗುಟುರು ಹಾಕಿದರು. ಹಿಂದು ವಿರೋಧಿಗಳು, ಹಿಂದು ಧಾರ್ಮಿಕ ಆಚರಣೆಗೆ, ಕೇಸರಿ ಧ್ವಜಕ್ಕೆ ಅಡ್ಡಿಪಡಿಸುವವರು, ವಿರೋಧಿಸುವವರ ವಿರುದ್ಧ ಹೋರಾಡೋಣ ಬನ್ನಿ ಬಸವನಗೌಡ ಪಾಟೀಲ್ ಯತ್ನಾಳರೆ ಎಂದು ರೇಣುಕಾಚಾರ್ಯ ಕರೆ ನೀಡಿದರು.

3 ವರ್ಷದಲ್ಲಿ 3 ಸಾವಿರ ಕೆಪಿಎಸ್ ಶಾಲೆ ಸ್ಥಾಪನೆ ಗುರಿ: ಸಚಿವ ಮಧು ಬಂಗಾರಪ್ಪ

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಗೌರವ ವಾಜಪೇಯಿಗೆ ಸಲ್ಲುತ್ತದೆ: ದೇಶದಲ್ಲಿ ಬಿಜೆಪಿ ಸಂಕಷ್ಟದಲ್ಲಿದ್ದಾಗ ಪಕ್ಷದ ಕಾರ್ಯಕರ್ತರನ್ನು ಬೆನ್ನುತಟ್ಟಿ ಹುರಿದುಂಬಿಸಿ ಕೇಂದ್ರದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಗೌರವ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದ ಗುರುಭವನದಲ್ಲಿ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮ ದಿನಾಚರಣೆ ಕಾರ್ಯಕ್ರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಟಲ್‍ಜೀ ಅವರು ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ವಿದೇಶಿ ನೀತಿ ಅನುಸರಿಸಿ ವಿಶ್ವದ ಎಲ್ಲಾ ದೇಶಗಳನ್ನು ಸುತ್ತಿ ಸಹೋದರತ್ವ ಸಂದೇಶ ಸಾರಿ ದೇಶದಲ್ಲಷ್ಟೇ ಆಲ್ಲದೆ ವಿಶ್ವದ ಮೆಚ್ಚುಗೆಗಳಿಸಿದ್ದ ಆಜಾತಶತ್ರು ಎಂದು ಹೆಸರುವಾಸಿಯಾಗಿದ್ದರು. ದೇಶದ ಬಹುತೇಕ ರಸ್ತೆಗಳು ಕೇವಲ 7.5 ಮೀ. ಅಗಲದ ವ್ಯಾಪ್ತಿಯನ್ನು ಹೊಂದಿದ್ದವು, ವಾಜಪೇಯಿ ಅವರು ದೇಶದ ಪ್ರಧಾನಿಯಾದ ಮೇಲೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಚತುಷ್ಪಥ ರಸ್ತೆಗಳನ್ನು ನಿರ್ಮಿಸಿ ದೇಶದ ಚಿತ್ರಣವನ್ನೇ ಬದಲಿಸಿದ್ದವರು ಎಂದರು.

ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿಲ್ಲ, ನನ್ನ ಹೇಳಿಕೆಯನ್ನು ತಿರುಚಿದ್ದಾರೆ: ಪ್ರತಾಪ್‌ ಸಿಂಹ

ವಾಜಪೇಯಿ ನೇತೃತ್ವದ ಸರ್ಕಾರಕ್ಕೆ ಲೋಕಸಭೆ ಅಧಿವೇಶನದಲ್ಲಿ ಕೇವಲ ಒಂದೇ ಮತದಿಂದ ಸೋಲಾದಾಗ ವಾಜಪೇಯಿ ಅವರು ಬುಹು ದೊಡ್ಡದಾದ ವಿದಾಯ ಭಾಷಣ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಸಂದರ್ಭದಲ್ಲಿ ದೇಶದ ಜನರಷ್ಟೇ ಅಲ್ಲ ವಿಶ್ವವೇ ದುಃಖ ವ್ಯಕ್ತಪಡಿಸಿದ ಘಟನೆಯೂ ಜರುಗಿತು ಎಂದು ಹೇಳಿದರು. ಸಾಮಾನ್ಯ ಕಾರ್ಯಕರ್ತ, ಸರಳ, ಸಜ್ಜನಿಕೆಯ ಸಂತ, ಬ್ರಹ್ಮಚಾರಿ, ಉತ್ತಮ ವಾಗ್ಮಿ ದೇಶದ ಪ್ರಧಾನಿ ಸ್ಥಾನ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ವಾಜಪೇಯಿ ತೋರಿಸಿಕೊಟ್ಟಿದ್ದು, ಇತಿಹಾಸವಾದರೆ, ಅದು ಮುಂದುವರಿದು ನರೇಂದ್ರ ಮೋದಿ ಅತಹ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಿಯಾಗಿ ಹೊರಹೊಮ್ಮಿ ವಿಶ್ವಕ್ಕೆ ನಂ.1 ಜನಪ್ರತಿನಿಧಿಯಾಗಿ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಎಂದರು.

Follow Us:
Download App:
  • android
  • ios