ಗಬ್ಬು ನಾರುತ್ತಿದೆ ಕಾಂಗ್ರೆಸ್ ಆಡಳಿತ ವ್ಯವಸ್ಥೆ: ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪ
ರಾಜ್ಯದಲ್ಲಿ ಎರಡೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ವ್ಯವಸ್ಥೆ ಗಬ್ಬೆದ್ದು ನಾರುತ್ತಿದೆ, ಭ್ರಷ್ಟಾಚಾರದ ಕಮಟು ವಾಸನೆ ಬರ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಬಾಗಲಕೋಟೆ (ಆ.04): ರಾಜ್ಯದಲ್ಲಿ ಎರಡೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ವ್ಯವಸ್ಥೆ ಗಬ್ಬೆದ್ದು ನಾರುತ್ತಿದೆ, ಭ್ರಷ್ಟಾಚಾರದ ಕಮಟು ವಾಸನೆ ಬರ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಜವಾನನಿಂದ ಹಿಡಿದು ಎಲ್ಲದರ ವರ್ಗಾವಣೆಗೂ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಕೆಲ ಪ್ರಾಮಾಣಿಕ ಶಾಸಕರು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರು ಕೊಟ್ಟಿದ್ದಾರೆ ಎಂದು ಹೇಳಿದರು. ಇದೇ ಕಾರಣಕ್ಕೆ ಎಐಸಿಸಿ ಹೈಕಮಾಂಡ್ ಸಭೆ ಕರೆದು ಬಂಡೆದ್ದ ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದೆ. ಸಂಪುಟದ ಎಲ್ಲ ಸಚಿವರಿಗೆ ಛೀಮಾರಿ ಹಾಕಿದ್ದಾರೆ. ಕೆಲವರ ಬುಟ್ಟಿಯಲ್ಲಿ ಹಾವಿದೆ ಎಂದು ಮಾಧ್ಯಮದವರು ಹೇಳಿದ್ದೀರಿ. ಆ ಹಾವುಗಳಿಗಾಗಿ ನಾವೂ ಕಾಯುತ್ತಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು.
ಕೆಂಪಣ್ಣನನ್ನು ಬ್ಯಾಟರಿ ಹಿಡಿದು ಹುಡುಕಬೇಕು: ಬಿಜೆಪಿ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣನನ್ನು ಈಗ ಬ್ಯಾಟರಿ ಹಿಡಿದು ಹುಡುಕುವ ಕಾಲ ಬಂದಿದೆ. ಸಿದ್ದು, ಡಿಕೆಶಿ ಮನೆಯಲ್ಲಿ ಕುಳಿತು ಅರ್ಜಿ ಬರೆದಿದ್ದ ಕೆಂಪಣ್ಣ ಈಗೆಲ್ಲಿದ್ದಾನೆ? ಸಿದ್ದರಾಮಯ್ಯ ಅವರ ಮನೆಯಲ್ಲೋ ಅಥವಾ ಡಿಕೆಶಿ ಮನೆಯಲ್ಲಿದ್ದಾನೋ? ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ 4 ತಿಂಗಳಿಂದ ಒಂದು ಕಾಮಗಾರಿಯೂ ಶುರುವಾಗಿಲ್ಲ. ಶೇ 6 ವರ್ಗಾವಣೆ ಎಂದು ಶೇ 54ರಷ್ಟುವರ್ಗಾವಣೆ ಮಾಡುತ್ತಿದ್ದಾರೆ. ನೀತಿಗೆಟ್ಟಸರ್ಕಾರವಿದು ವರ್ಗಾವಣೆಯ ಸುಗ್ಗಿ ನಡೆಸಿದೆ.
ಆರಗ ಜ್ಞಾನೇಂದ್ರ ಸಭ್ಯಸ್ಥರಂತೆ ಮುಖವಾಡ ಧರಿಸಿರುವ ಗೋಮುಖ ವ್ಯಕ್ತಿ: ಶಾಸಕ ತಮ್ಮಯ್ಯ
2 ತಿಂಗಳಲ್ಲಿ ತಮ್ಮದೇ ಶಾಸಕರ ವಿಶ್ವಾಸ ಗಳಿಸಲು ಕಾಂಗ್ರೆಸ್‌ನವರಿಗೆ ಸಾಧ್ಯವಾಗಿಲ್ಲ ಎಂದರೆ ನೀವು ಅಧಿಕಾರದಲ್ಲಿರಲು ಯೋಗ್ಯರಲ್ಲ ಎಂದು ತಿಳಿಸಿದರು. ಎಚ್‌ಡಿಕೆ ವಿದೇಶಿ ಪ್ರವಾಸ ಕುರಿತು ಡಿಕೆಶಿ ಮಾಡಿರುವ ಆರೋಪಕ್ಕೆ ಉತ್ತರಿಸಿದ ಅವರು, ತಮ್ಮ ಶಾಸಕರ ಮೇಲೆ ಅವರಿಗೆ ವಿಶ್ವಾಸವೇ ಇಲ್ಲ. ಬಿಜೆಪಿ ಯಾವಾಗಲೂ ಹಿಂಬಾಗಿಲನಿಂದ ಸರ್ಕಾರ ಮಾಡುತ್ತಿಲ್ಲವೇ? ಎಂಬ ಪ್ರಶ್ನೆಗೆ ಆಗಲೂ ಶಾಸಕರು ಅವಿಶ್ವಾಸದಿಂದ ಹೊರ ಬಂದರು. ಹಾಲು ಕುಡಿದು ಸಾಯೋರಿಗೆ ವಿಷ ಕೊಟ್ಟು ಸಾಯಿಸುವುದು ಬೇಕಿಲ್ಲ ಎಂದರು.
ಒಳ ಮೀಸಲಾತಿ ಸೋಲು ಭ್ರಮೆ: ಒಳ ಮೀಸಲಾತಿಯಿಂದಾಗಿ ಬಿಜೆಪಿ ಸೋತಿದೆ ಎಂಬ ಮಾಜಿ ಶಾಸಕರ ಆರೋಪಕ್ಕೆ ಉತ್ತರಿಸಿದ ಕಾರಜೋಳ, ಅದು ಅವರ ಭ್ರಮೆ. ತಪ್ಪು ಲೆಕ್ಕಾಚಾರದಿಂದ ನಾವು ಸೋತಿದ್ದೇವೆ. 72 ಹೊಸ ಮುಖಗಳನ್ನು ಜನ ಒಪ್ಪಲಿಲ್ಲ. ಸರ್ಕಾರದ ಮೇಲಿನ ಆರೋಪಗಳಿಗೆ ಅಭಿಯಾನದ ರೂಪದಲ್ಲಿ ಉತ್ತರ ಕೊಡಬೇಕಿತ್ತು. ಅದು ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಸೋಲಿನ ಕುರಿತು ವಿಶ್ಲೇಷಿಸಿದರು. ಸದ್ಯ ಸಂವಿಧಾನದಲ್ಲಿ ಒಳ ಮೀಸಲಾತಿಗೆ ಅವಕಾಶ ಇಲ್ಲವೆಂದು ಸಚಿವ ನಾರಾಯಣಸ್ವಾಮಿ ಉತ್ತರಿಸಿದ್ದಾರೆ. ಆದರೆ ಸಂವಿಧಾನದ ಪರಿಚ್ಛೇದ 341ಕ್ಕೆ ತಿದ್ದುಪಡಿ ತಂದು ಜಾರಿ ಮಾಡಬಹುದಾಗಿದೆ. ನಾವು ಅದಕ್ಕಾಗಿಯೇ ಶಿಫಾರಸ್ಸು ಮಾಡಿದ್ದೇವೆ. ಒಳ ಮೀಸಲಾತಿ ಎಂಬುದು ಅನ್ಯಾಯದ ಕೆಲಸ ಅಲ್ಲ. ಅದಕ್ಕೆ ಬಿಜೆಪಿ-ಆರೆಸ್ಸೆಸ್ ಈಗಲೂ ಬದ್ಧವಾಗಿದೆ ಎಂದು ಹೇಳಿದರು.
ಯಾವ ಚುನಾವಣೆಗೂ ಆಕಾಂಕ್ಷಿಯಲ್ಲ: ಲೋಕಸಭೆಗೆ ತಮ್ಮ ಸ್ಪರ್ಧೆ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ಯಾವ ಚುನಾವಣೆಗೂ ನಾನು ಆಕಾಂಕ್ಷಿಯಲ್ಲ. ಸದ್ಯ ಬಾಗಲಕೋಟೆ, ವಿಜಯಪುರಕ್ಕೆ ಸಂಸದರು ಇದ್ದಾರೆ. ಹೀಗಾಗಿ ಆ ಪ್ರಶ್ನೆ ಸದ್ಯಕ್ಕೆ ಅಗತ್ಯವಿಲ್ಲ ಎಂದು ಕಾರಜೋಳ ಪ್ರತಿಕ್ರಿಯಿಸಿದರು. ಎಸ್ಸಿಪಿ, ಟಿಎಸ್ಸಿಪಿ ಹಣವನ್ನು ಈ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ ಕಾರಜೋಳ, ಶೋಷಿತ ಸಮುದಾಯಗಳನ್ನು ಬಡಿದೆಬ್ಬಿಸಿ ಅವರನ್ನು ಶೆಟೆದು ನಿಲ್ಲುವಂತೆ ಮಾಡ್ತೇವೆ. ಗ್ಯಾರಂಟಿ ಯೋಜನೆಗಳು ಶೋಷಿತ ಸಮುದಾಯಗಳಿಗೆ ರೂಪಿಸಿದ ವಿಶೇಷ ಯೋಜನೆಯಲ್ಲ, ಸಾವಿರ ವರ್ಷ ಕೈಯೊಡ್ಡಿ ಆಗಿದೆ.
ಅಕ್ಕಿ, ಬೇಳೆ ಕೊಡೋದಲ್ಲ. 5 ಕಿಲೋ ಅಕ್ಕಿ ಬರುತ್ತಿರುವುದು ಕೇಂದ್ರ ಸರ್ಕಾರದಿಂದ ವಿನಾಃ ಸಿದ್ದರಾಮಯ್ಯ ಕೊಡ್ತಿರೋದಲ್ಲ. ಸಿದ್ದರಾಮಯ್ಯ, ಡಿಕೆಶಿ, ಮುನಿಯಪ್ಪ ಅವರಿಗೆ ಮಾನ-ಮರ್ಯಾದೆ ಇದ್ದರೆ, ಮೇಲೆ ಮೋದಿ ಫೋಟೋ ಹಾಕಿ ನಂತರ ತಮ್ಮ ಫೋಟೋ ಹಾಕಿಕೊಳ್ಳಬೇಕು ಎಂದು ಕಾರಜೋಳ ಒತ್ತಾಯಿಸಿದರು. ನಮ್ಮ ಜಿಲ್ಲೆಯಲ್ಲಿ ಕಬ್ಬು ಬೆಳೆಯೇ ಹೆಚ್ಚಿದೆ. ನದಿ ದಡದ ಪ್ರವಾಹದಿಂದ ಅದು ನಾಶವಾಗಿದೆ. ಪ್ರತಿ ಎಕರೆಗೆ .25 ಸಾವಿರ ಪರಿಹಾರ ಕೊಡಿ ಎಂದು ಹೇಳಿದ ಅವರು, ಮುಂಗಾರು ವಿಫಲವಾಗಿದ್ದು, ಇತರ ಬೆಳೆಗೆ ಯೋಗ್ಯ ಪರಿಹಾರ ಕೊಡಲು ಆಗ್ರಹಿಸಿದರು. ಮಹಾದಾಯಿ ಹುಲಿ ಸಂರಕ್ಷಿತ ಪ್ರದೇಶ ಎಂದು ಗೋವಾದಿಂದ ಘೋಷಣೆ ಮಾಡಿದ್ದರ ಕುರಿತು ಮಾತನಾಡಿದ ಕಾರಜೋಳ, ಈಗಾಗಲೇ ಕಳಸಾ-ಬಂಡೂರಿಯನ್ನು ಪ್ರತ್ಯೇಕಿಸಿ ಟೆಂಡರ್ ಆಗಿದೆ.
Chitradurga: ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
ಎಲ್ಲೆಲ್ಲಿ ಕೆಲಸ ಶುರು ಮಾಡಲು ಅವಕಾಶವಿದೆಯೋ ಅಲ್ಲಿ ಆರಂಭಿಸಬೇಕು. ಕಳಸಾ ಬಂಡೂರಿ ನೀರಾವರಿ ಯೋಜನೆಯಲ್ಲ ಅದು ಕುಡಿಯುವ ನೀರಿನ ಯೋಜನೆ. ಹಾಗಾಗಿ ಸಮಸ್ಯೆ ಇಲ್ಲ ಎಂದರು. ಯುಕೆಪಿಗೆ, ಕಳಸಾ ಬಂಡೂರಿಗೆ ರಾಜ್ಯ ಸರ್ಕಾರ ಈಗ ನಯಾ ಪೈಸೆ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ನಾನು ನೀರಾವರಿ ಮಂತ್ರಿ ಇದ್ದಾಗ ಬಾಗಲಕೋಟೆ-ವಿಜಯಪುರಕ್ಕೆ .10 ಸಾವಿರ ಕೋಟಿ ಕೊಟ್ಟಿದ್ದೇನೆ. ಆ ಹೆಮ್ಮೆ ನನಗಿದೆ. ಕೃಷ್ಣೆಗೆ .50 ಸಾವಿರ ಕೋಟಿ ಕೊಡ್ತೀನಿ ಎಂದು ಇದೇ ಸಿದ್ದರಾಮಯ್ಯ ಕೂಡಲಸಂಗಮದಲ್ಲಿ ಆಣೆ ಮಾಡಿ ಕೊಟ್ಟರಾ? ಹಿಂದಿನ ಅವಧಿಯಲ್ಲಿ ಅಧಿಕಾರ ಬಿಡೋವಾಗ .1 ಲಕ್ಷ ಕೋಟಿ ಸಾಲದ ಹೊರೆಹೊರೆಸಿ ಹೋದರು. ಆಗ ಕಮಿಷನ್ ಹೊಡೆದವರು ಯಾರು? ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.