ಕೊಡಗಿನವರಿಗೆ ಎಂಪಿ ಟಿಕೆಟ್ ಕೊಡಿ ನಾನೂ ಆಕಾಂಕ್ಷಿ, ಪ್ರತಾಪ್ ಸಿಂಹ ಸೀಟಿಗೆ ಕಣ್ಣಿಟ್ಟ ಮಾಜಿ ಸಚಿವ ಅಪ್ಪಚ್ಚು ರಂಜನ್
ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಪಕ್ಷದಿಂದ ಲೋಕಸಭಾ ಚುನಾವಣೆಗೆ ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ಈ ಬಾರಿಯಾದರೂ ಕೊಡಗು ಜಿಲ್ಲೆಯವರಿಗೆ ಟಿಕೆಟ್ ಕೊಡಬೇಕು ಎಂದು ಮಾಜಿ ಸಚಿವ ಮಡಿಕೇರಿಯ ಮಾಜಿ ಶಾಸಕ ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.30): ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಪಕ್ಷದಿಂದ ಲೋಕಸಭಾ ಚುನಾವಣೆಗೆ ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ಈ ಬಾರಿಯಾದರೂ ಕೊಡಗು ಜಿಲ್ಲೆಯವರಿಗೆ ಟಿಕೆಟ್ ಕೊಡಬೇಕು ಎಂದು ಮಾಜಿ ಸಚಿವ ಮಡಿಕೇರಿಯ ಮಾಜಿ ಶಾಸಕ ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ. ಆ ಮೂಲಕ ಕೊಡಗು ಜಿಲ್ಲೆಯಲ್ಲಿ ಬಿಜೆಪಿಯ ಲೋಕಸಭಾ ಟಿಕೆಟ್ಗೆ ಸಾಕಷ್ಟು ಜನರು ಆಕಾಂಕ್ಷಿಗಳಿದ್ದು ಒಳಗೊಳಗೆ ಪೈಪೋಟಿ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾದಂತೆ ಆಗಿದೆ.
ಮಡಿಕೇರಿಯಲ್ಲಿ ಮಾತನಾಡಿರುವ ಅಪ್ಪಚ್ಚು ರಂಜನ್ ಅವರು ಇದುವರೆಗೆ ಮಂಗಳೂರು, ಮೈಸೂರು ಹೀಗೆ ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ಈಗಲಾದರೂ ಕೊಡಗಿನವರಿಗೇ ಟಿಕೆಟ್ ಕೊಡಬೇಕು ಎನ್ನುವುದು ನಮ್ಮ ಜಿಲ್ಲೆಯ ಎಲ್ಲಾ ನಾಯಕರ ಆಶಯವಾಗಿದೆ ಎಂದು ಅಪ್ಪಚ್ಚು ರಂಜನ್ ಹೇಳಿದ್ದಾರೆ. ನಾನೂ ಕೂಡ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಅಪ್ಪಚ್ಚು ರಂಜನ್ ನೇರವಾಗಿಯೇ ವ್ಯಕ್ತಪಡಿಸಿದ್ದಾರೆ.
ಸೂಪರ್ ಸ್ಟಾರ್ ಜತೆ ಡೇಟಿಂಗ್‌ನಲ್ಲಿದ್ದು ಬ್ರೇಕಪ್ ಬಳಿಕ ಅದೇ ನಟನ ಕುಟುಂಬ ವೈದ್ಯನನ್ನು ಮದುವೆಯಾದ ಸ್ಟಾರ್ ನಟಿ
ಕೊಡಗಿನವರಿಗೆ ಈ ಬಾರಿ ಟಿಕೆಟ್ ಕೊಡಬೇಕು ಎಂದು ಜಿಲ್ಲಾ ಬಿಜೆಪಿಯ ಹಿಂದಿನ ಮತ್ತು ಇಂದಿನ ಅಧ್ಯಕ್ಷರಾದಿಯಾಗಿ ಎಲ್ಲಾ ಮುಖಂಡರು ರಾಜ್ಯ ನಾಯಕರ ಬಳಿ ಹೇಳಿದ್ದಾರೆ. ನಾನು ಚುನಾವಣೆಗೆ ನಿಂತರೆ ಗೆದ್ದೇ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿದೆ. ಏಕೆಂದರೆ ಜನರು ಮತ ಹಾಕುವುದು ಅಪ್ಪಚ್ಚು ರಂಜನ್ಗೆ ಅಲ್ಲ, ಬದಲಾಗಿ ಮೋದಿ ಜಿ ಅವರಿಗೆ ಹಾಕುವ ಮತವಾಗಿರುತ್ತದೆ. ಮೋದಿಜಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವುದು ಜನರ ಆಶಯವಿದೆ. ಹೀಗಾಗಿ ಜನರು ಮತಹಾಕಿ ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
ಮತ್ತೊಂದೆಡೆ ಈಗಾಗಲೇ ಹಾಲಿ ಸಂಸದರಾದ ಪ್ರತಾಪ್ ಸಿಂಹ ಅವರು ಕೂಡ ಮತ್ತೊಮ್ಮೆ ತಮಗೆ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದು ಕ್ಷೇತ್ರದಾದ್ಯಂತ ಸಾಕಷ್ಟು ಓಡಾಟದಲ್ಲಿ ಇದ್ದಾರೆ. ಈಗಾಗಲೇ ಹಲವು ಬಾರಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರತಾಪ ಸಿಂಹ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಲು ನನ್ನನ್ನು ಬಿಟ್ಟರೆ ಬೇರೆಯಾರಿದ್ದಾರೆ ಹೇಳಿ ಎಂದಿದ್ದಾರೆ.
ಇವೆಲ್ಲವೂ ಒಂದೆಡೆಯಾದರೆ ಮಗದೊಂದೆಡೆ ಈಗಾಗಲೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಕೂಡ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ತಮಗೆ ಟಿಕೆಟ್ ಸಿಗುತ್ತದೆ ಎನ್ನುವ ಆಕಾಂಕ್ಷೆಯಲ್ಲಿ ಇದೆ. ಕೊಡಗಿನ ಮಾಜಿ ಉಸ್ತುವಾರಿ ಸಚಿವರಾಗಿರುವ ಸಾ.ರಾ ಮಹೇಶ್ ಅವರು ತಮಗೆ ಟಿಕೆಟ್ ದೊರೆಯುತ್ತದೆ ಎನ್ನುವ ವಿಶ್ವಾಸದಲ್ಲಿ ಇದ್ದಾರೆ. ಹೀಗಾಗಿಯೇ ಈಗಾಗಲೇ ಮಡಿಕೇರಿ ತಾಲ್ಲೂಕಿನ ತೊಂಭತ್ತೊಕ್ಲುವಿನಲ್ಲಿ ಇರುವ ತಮ್ಮ ತೋಟದ ಮನೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ವಿಶೇಷ ಸಭೆ ನಡೆಸಿದ್ದಾರೆ.
15ನೇ ವಯಸ್ಸಿಗೆ ಸ್ಟಾರ್ ನಟಿ ವಿವಾಹಿತ ದಕ್ಷಿಣದ ಸ್ಟಾರ್ ನಟನ ಜೊತೆ ಸಂಬಂಧ ಹೊಂದಿ ಮದುವೆಗೂ ಮುನ್ನ ತಾಯಿಯಾದ್ರು!
ಈ ಕುರಿತು ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ಕೂಡ ಇನ್ನೂ ಟಿಕೆಟ್ ಕುರಿತು ನಿರ್ದಾರವಾಗಿಲ್ಲ. ಮುಂದಿನ ದಿನಗಳಲ್ಲಿ ಏನು ನಿರ್ಧಾರ ಆಗುತ್ತದೆ ನೋಡೋಣ ಎಂದಿದ್ದರು. ಹೀಗಾಗಿ ನಿಜವಾಗಿಯೂ ಬಿಜೆಪಿ ಟಿಕೆಟ್ ಜಿಲ್ಲೆಯಿಂದ ಹೊರಗಿನವರಿಗೆ ಸಿಗುತ್ತದೆಯಾ? ಇಲ್ಲವೆ ಹಿಂದಿನಂತೆ ಹೊರ ಜಿಲ್ಲೆಯವರಿಗೆ ಸಿಗುತ್ತದೆಯಾ.? ಅಥವಾ ಜೆಡಿಎಸ್ ಪಾಲಾಗುತ್ತದೆಯಾ ಎನ್ನುವ ಸಾಕಷ್ಟು ಕುತೂಹಲವಿದೆ. ಏನೇ ಆಗಲಿ ಎನ್ನೇನು ಸ್ವಲ್ಪ ದಿನಗಳಲ್ಲಿಯೇ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿ ಯಾರು ಎನ್ನುವುದನ್ನು ಬಹಿರಂಗ ಪಡಿಸಲಿವೆ. ಹೀಗಾಗಿ ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದ್ದು ಅಲ್ಲಿವರೆಗೆ ಕಾಯಲೇಬೇಕು.