ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತೆ ತಿಹಾರ್ ಜೈಲು ಸೇರಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ನಮ್ಮ ಸುದ್ದಿಗೆ ಬಂದವರಿಗೆ ಸೆಟಲ್‌ ಮೆಂಟ್ ಆಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ.

ಮೈಸೂರು (ಫೆ.12): ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತೆ ತಿಹಾರ್ ಜೈಲು ಸೇರಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ನಮ್ಮ ಸುದ್ದಿಗೆ ಬಂದವರಿಗೆ ಸೆಟಲ್‌ ಮೆಂಟ್ ಆಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಇಬ್ಬರು ಗೂಂಡಾಗಳು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನನ್ನ ಮಾತಿಗೆ ಸಿನಿಮಾ ಸ್ಟೈಲ್‌ ನಲ್ಲಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. 

ಅವರ ಅರ್ಧ ಜೀವನ ತಿಹಾರ್ ಜೈಲಿನಲ್ಲಿ ಸೆಟಲ್‌ ಮೆಂಟ್ ಆಗಿದೆ. ಉಳಿದ ಇನ್ನೊಂದು ಪಾರ್ಟ್ ಕೂಡ ಜೈಲಿನಲ್ಲೇ ಸೆಟಲ್‌ ಮೆಂಟ್ ಆಗುತ್ತೆ, ನೋಡ್ತಾ ಇರಿ, ಇಷ್ಟರಲ್ಲೆ ಡಿ.ಕೆ. ಶಿವಕುಮಾರ್ ಮತ್ತೆ ತಿಹಾರ್ ಜೈಲು ಸೇರಲಿದ್ದಾರೆ ಎಂದು ಅವರು ಹೇಳಿದರು. ನಾಡಪ್ರಭು ಕೆಂಪೇಗೌಡ ಅವರು ಡಿ.ಕೆ. ಶಿವಕುಮಾರ್‌ ಅವರ ಆಸ್ತಿಯಲ್ಲ. ತಮ್ಮನ್ನು ರಾಜ್ಯ ಕಟ್ಟಿದ ವ್ಯಕ್ತಿಯ ಜೊತೆ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ. ರಾಷ್ಟ್ರದ್ರೋಹ ಹೇಳಿಕೆಗೆ ಸಂಸದ ಡಿ.ಕೆ. ಸುರೇಶ್ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ. ಕ್ರಮಕೈಗೊಳ್ಳಿ ಎಂದರೆ ನನಗೆ ನೋಟಿಸ್ ಕಳುಹಿಸುತ್ತಾರೆ. ರಾಷ್ಟ್ರದ್ರೋಹಿಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.

ಸಚಿವ ಎಚ್‌.ಕೆ.ಪಾಟೀಲ್‌ಗೆ ತಾಕತ್ತಿದ್ದರೆ ಬಂಧಿಸಲಿ: ಕೆ.ಎಸ್‌.ಈಶ್ವರಪ್ಪ

ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ದನಿ ಎತ್ತಿದ್ದೇನೆ: ‘ನಾನೇನು ಭಾರತ ವಿರೋಧಿಯಲ್ಲ. ನಾನು ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಸಂವಿಧಾನ ಆಶಯದ ಪ್ರಕಾರ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದೇನೆ. ಇಷ್ಟಕ್ಕೇ ನನ್ನನ್ನು ಗುಂಡಿಟ್ಟು ಕೊಲ್ಲುವುದಾದರೆ ನಾನು ಸಿದ್ಧನಿದ್ದೇನೆ. ಈಶ್ವರಪ್ಪನವರೇ ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರುತ್ತೇನೆ. ಗುಂಡಿಕ್ಕಲು ಸಿದ್ಧರಾಗಿ’ ಎಂದು ಸಂಸದ ಡಿ.ಕೆ. ಸುರೇಶ್ ಸವಾಲು ಎಸೆದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಕೊಡದೆ ನಿರಾಕರಣೆ ಮಾಡಿದರು. 

ಈಶ್ವರಪ್ಪ ವಿರುದ್ಧ ಕೇಸ್ ಮುಖೇನ ಕಾನೂನಿದೆ ಎಂಬುದು ಸಾಬೀತು: ಸಚಿವ ಮಧು ಬಂಗಾರಪ್ಪ

ಒಳಗೆ ನನ್ನ ಧ್ವನಿ ತಡೆಯಲು ಪ್ರಯತ್ನ ಮಾಡಿದರು. ಆದರೆ ಹೊರಗಡೆ ನನ್ನ ಧ್ವನಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಬಿಚ್ಚಿಡುತ್ತಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. ಸುರೇಶ್‌ಗೆ ಗುಂಡಿಕ್ಕಿ ಎಂಬ ಬಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನೇನು ಭಾರತದ ವಿರೋಧಿಯಲ್ಲ. ನಮ್ಮ ಕನ್ನಡಿಗರ ಪರ ನ್ಯಾಯ ಕೇಳಿದ್ದಕ್ಕೆ ದೇಶದ್ರೋಹಿ ಎಂದು ಗುಂಡಿಕ್ಕುವುದಾದರೆ ಕೊಲ್ಲಲಿ. ಈಶ್ವರಪ್ಪನವರ ಎದುರು ಶೀಘ್ರವೇ ಸಿದ್ಧನಾಗಿ ಬರುತ್ತೇನೆ. ಗುಂಡಿಕ್ಕಲು ಸಿದ್ಧರಾಗಿ ಎಂದರು.