Asianet Suvarna News Asianet Suvarna News

Karnataka Politics: ಈಶ್ವರಪ್ಪ, ಜಾರಕಿಹೊಳಿಗೆ ಸಚಿವಸ್ಥಾನ ನೀಡಲು ಇರುವ ವೈಯಕ್ತಿಕ ಸಮಸ್ಯೆ ಹೇಳಲಿಕ್ಕಾಗಲ್ಲ: ಸಿಎಂ ಬೊಮ್ಮಾಯಿ

ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಮತ್ತು ರಮೇಶ್‌ ಜಾರಕಿಹೊಳಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಕೆಲವು ವೈಯಕ್ತಿಕ ವಿಚಾರಗಳು ಇದ್ದು ಅವುಗಳನ್ನು ಹೇಳುವುದಕ್ಕೆ ಆಗುವುದಿಲ್ಲ.

Eshwarappa Jarakiholi personal problem to give ministerial position is not to mention Bommai sat
Author
First Published Dec 20, 2022, 12:38 PM IST

ಬೆಳಗಾವಿ (ಡಿ.20): ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಮತ್ತು ರಮೇಶ್‌ ಜಾರಕಿಹೊಳಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ದೆಹಲಿಗೆ ಭೇಟಿ ನೀಡಿದ್ದ ವೇಳೆ ಹೈಕಮಾಂಡ್‌ನೊಂದಿಗೆ ಚರ್ಚೆ ಮಾಡಲಾಗಿದೆ. ಈ ವೇಳೆ ಸಕಾರಾತ್ಮಕ ಸ್ಪಂದನೆಯೂ ವ್ಯಕ್ತವಾಗಿದೆ. ಆದರೆ, ಕೆಲವು ವೈಯಕ್ತಿಕ ವಿಚಾರಗಳು ಇದ್ದು ಅವುಗಳನ್ನು ಹೇಳುವುದಕ್ಕೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾತಿ ಅವರು ತಿಳಿಸಿದ್ದಾರೆ.

ಶಿವಮೊಗ್ಗದ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡು ಈಶ್ವರಪ್ಪ ಅವರ ಮೇಲೆ ಆರೋಪ ಮಾಡಿದ್ದ ವಿಚಾರಕ್ಕೆ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಯುವತಿಯೊಬ್ಬಳ ಲೈಂಗಿಕ ಕಿರುಕುಳ ಆರೋಪದಡಿ ರಮೇಶ್ ಜಾರಕಿಹೊಳಿ ಅವರು ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಇಬ್ಬರಿಗೂ ಈಗ ಆರೋಪ ಪ್ರಕರಣಗಳಿಂದ ಕ್ಲೀನ್‌ ಚಿಟ್‌ ಸಿಕ್ಕಿದೆ. ಇನ್ನು ಕ್ಲೀನ್‌ ಚಿಟ್‌ ಸಿಕ್ಕ ನಂತರವೇ ಸಚಿವ ಸ್ಥಾನ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಯಡುಯೂರಪ್ಪ ಮತ್ತು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ, ಸಚಿವ ಸಂಪುಟ ಸೇರಿಸಿಕೊಳ್ಳದ ಹಿನ್ನೆಲೆಯಲ್ಲಿ ಇಬ್ಬರೂ ಮಾಜಿ ಸಚಿವರು ಅಸಮಾಧಾನದಿಂದ ಈಗ ನಡೆಯುತ್ತಿರುವ ಚಳಿಗಾಲದ ಅಧಿವೇಶನದಿಂದ ದೂರ ಉಳಿದಿದ್ದಾರೆ.

Karnataka Politics: ಮಂತ್ರಿಗಿರಿ ಸಿಗದ್ದಕ್ಕೆ ಈಶ್ವರಪ್ಪ ಬಹಿರಂಗ ಅತೃಪ್ತಿ

ಅವರ ಭಾವನೆ ಅರ್ಥವಾಗಿದೆ: ಈಶ್ವರಪ್ಪ ಮತ್ತು ರಮೇಶ್‌ ಜಾರಕಿಹೊಳಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅವರ ಭಾವನೆ ನನಗೆ ಅರ್ಥವಾಗಿದೆ. ದೆಹಲಿಗೆ ಭೇಟಿ ಕೊಟ್ಟಾಗ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ವೈಯುಕ್ತಿಕ ವಿಚಾರಗಳಿವೆ ಅದನ್ನು ಮಾಧ್ಯಮಗಳ ಮುಂದೆ ಹೇಳುವುದಕ್ಕೆ ಆಗುವುದಿಲ್ಲ. ಅವರ ಜೊತೆ ನಾನು ವೈಯಕ್ತಿಕವಾಗಿ ಮಾತನಾಡ್ತೇನೆ ಎಂದು ಹೇಳಿದರು.

ಸಿಬಿಐ ಸಂವಿಧಾನಿಕ ಸಂಸ್ಥೆ: ದೇಶದ ಸಾಂವಿಧಾನಿಕ ಸಂಸ್ಥೆಯಾಗಿರುವ ಸಿಬಿಐ ಅಕ್ರಮವಾಗಿ ಆಸ್ತಿ ಗಳಿಸಿರುವ ವ್ಯಕ್ತಿಗಳನ್ನು ಮಟ್ಟ ಹಾಕುವ ಬಗ್ಗೆ ಸದಾ ಕಣ್ಗಾವಲು ಇಟ್ಟಿರುತ್ತದೆ. ಇದೇ ರೀತಿಯಲ್ಲಿ ಡಿ.ಕೆ. ಶಿವಕುಮಾರ್‌ ಅವರ ಒಡೆತನದ ಆಸ್ತಿಗಳು ಮತ್ತು ಸಂಸ್ಥೆಗಳ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ. ಶಿವಕುಮಾರ್ ಅವರ ಮೇಲೆ ಯಾವ ಪ್ರಕರಣವಿದೆ ಎನ್ನುವುದು ಅವರಿಗೆ ಗೊತ್ತಿದೆ ಎಂದು ಹೇಳಿದರು.

Belagavi Session: ಸಚಿವ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಚಳಿಗಾಲ ಅಧಿವೇಶನಕ್ಕೆ ಹಾಜರಾಗಲ್ಲ: ಈಶ್ವರಪ್ಪ

ಪಂಚಮಸಾಲಿ ಮೀಸಲಾತಿ ಕ್ರಮ ಕೈಗೊಳ್ಳುತ್ತೇವೆ:  ಇನ್ನು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಸರ್ಕಾರ ಹಿಂದುಳಿದ ಆಯೋಗಕ್ಕೆ ಸೂಚನೆ ಕೊಟ್ಟಿದೆ. ಸೂಕ್ತವಾಗಿ ವರದಿ ಮಂಡಿಸಿದ ಕೂಡಲೇ ಆ ವರದಿಯನ್ನು ಆಧರಿಸಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ. ಮತ್ತೊಂದೆಡೆ ವಿಶ್ವ ಮುಂದೆ ಬಂದಿದೆ. ನಾವು ಕೂಡ ಮುಂದೆ ಬಂದಿದ್ದೇವೆ. ಹೀಗಾಗಿ, ಜನರು ಹಲಾಲ್ ವಿಚಾರದಿಂದ ಹೊರಗಡೆ ಬರಬೇಕು ಎಂದು ಸಲಹೆ ನೀಡಿದರು.

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 5 ಕೋಟಿ ರೂ. ಬಿಡುಗಡೆ: ವರುಣಾ ಕ್ಷೇತ್ರಕ್ಕೆ ರಾಜ್ಯ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಿಂದ ಹಣ ಬಂದಿಲ್ಲ‌ ಎಂದು ಶಾಸಕ ಯತಿಂದ್ರ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು 2018 -19 ರಲ್ಲಿ 5 ಕೋಟಿ ರೂ. ಬಿಡುಗಡೆ ಆಗಿತ್ತು. ಕೋವಿಡ್ ಕಾರಣದಿಂದ ಕೆಲವು ಅನುದಾನಗಳು ಕಡಿತ ಆಗಿವೆ. ನಿರ್ದಿಷ್ಟವಾಗಿ ಯಾವ ಸಮುದಾಯ ಭವನ, ಚರ್ಚ್ ಕಾಮಗಾರಿ ಎಂದು ಮಾಹಿತಿ ನೀಡಿದರೆ ಹಣ ನೀಡುತ್ತೇ‌ನೆ ಎಂದು ತಿಳಿಸಿದರು.

Follow Us:
Download App:
  • android
  • ios