Asianet Suvarna News Asianet Suvarna News

Belagavi Session: ಸಚಿವ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಚಳಿಗಾಲ ಅಧಿವೇಶನಕ್ಕೆ ಹಾಜರಾಗಲ್ಲ: ಈಶ್ವರಪ್ಪ

ನನ್ನ ಮೇಲಿದ್ದ ಆರೋಪದಿಂದ ನನಗೆ ಕ್ಲೀನ್‌ ಚಿಟ್‌ ಸಿಕ್ಕ ನಂತರ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಕ್ಲೀನ್‌ ಚಿಟ್‌ ಸಿಕ್ಕು ಹಲವು ದಿನಗಳಾದರೂ ಇಂದು ನಾಳೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಮುಂದಕ್ಕೆ ತಳ್ಳುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಬೇಸರವಾಗಿದೆ.

Didnot get a ministerial post because Didnot come to winter session Eshwarappa sat
Author
First Published Dec 19, 2022, 1:05 PM IST

ಬಾಗಲಕೋಟೆ (ಡಿ.19): ನನ್ನ ಮೇಲಿದ್ದ ಆರೋಪದಿಂದ ನನಗೆ ಕ್ಲೀನ್‌ ಚಿಟ್‌ ಸಿಕ್ಕ ನಂತರ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಕ್ಲೀನ್‌ ಚಿಟ್‌ ಸಿಕ್ಕು ಹಲವು ದಿನಗಳಾದರೂ ಇಂದು ನಾಳೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಮುಂದಕ್ಕೆ ತಳ್ಳುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಬೇಸರವಾಗಿದೆ. ಹೀಗಾಗಿಯೇ, ಚಳಿಗಾಲದ ಅಧಿವೇಶನದಿಂದ ದೂರ ಉಳಿಯುತ್ತಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಸ್ನೇಹಿತರೊಬ್ಬರು ನನಗೆ ಹೇಳಿದಂತೆ ಕಾನೂನಿನಲ್ಲಿ ಅಪರಾಧದಿಂದ ಮುಕ್ತರಾದವರಿಗೆ ಶಿಕ್ಷೆ ಆಗುವುದಿಲ್ಲ ಎಂಬ ವಿಚಾರ ನನ್ನ ಮೇಲಿದ್ದ ಆರೋಪ ಪ್ರಕರಣದಲ್ಲಿ ಸತ್ಯವಾಗಿದೆ. ಈಗ ನನ್ನ ಮೇಲಿದ್ದ ಆರೋಪದಿಂದ ಕ್ಲೀನ್‌ ಚಿಟ್‌ ಸಿಕ್ಕಾಗಿದೆ. ನಂತರ ಸಿಎಂ ಬೊಮ್ಮಾಯಿ ಅವರು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿಯೂ ಹೇಳಿದ್ದರು. ಇವತ್ತು, ನಾಳೆ ನಿಮ್ಮನ್ನ ಮಂತ್ರಿ ಮಾಡ್ತೀವಿ ಅಂತ ಸಿಎಂ ಬೊಮ್ಮಾಯಿ ತಿಳಿಸ್ತಾ ಬಂದಿದ್ದಾರೆ. ನಿಮ್ಮಂಥವರು ಸಚಿವ ಸಂಪುಟದಲ್ಲಿ ಇರಬೇಕು ಅಂತಾ ಹೇಳ್ತಾನೆ ಇದಾರೆ. ಆದರೆ, ಯಾವುದಕ್ಕೆ ನನ್ನ ತಗೊಳ್ತಿಲ್ವೋ ನನಗೆ ಗೊತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

Belagavi Session: ಅಧಿವೇಶನ ಸಭಾಂಗಣದ ಬಾಗಿಲು ಮುಚ್ಚಿ ಸಾವರ್ಕರ್‌ ಫೋಟೋ ಅನಾವರಣ

ಬೆಳಗಾವಿಗೆ ಹೋಗ್ತೀನಿ-ಅಧಿವೇಶನಕ್ಕೆ ಹೋಗಲ್ಲ: ಇಡೀ ಕರ್ನಾಟಕದಿಂದ ನನಗೆ ಫೋನ್ ಮಾಡ್ತಾರೆ. ಯಾಕಿನ್ನೂ ನಿನ್ನ ಸಂಪುಟಕ್ಕೆ ತಗೊಂಡಿಲ್ಲ ಅಂತ ಪ್ರಶ್ನಿಸ್ತಿದಾರೆ. ನಮಗೆಲ್ಲ ತುಂಬಾ ನೋವಾಗಿದೆ ಅಂತಾ ಹೇಳ್ತಿರೋದರಿಂದ‌ ನನಗೂ ನೋವು, ಅಪಮಾನ ಆಗ್ತಿದೆ. ಇದನ್ನು ಅರ್ಥ ಮಾಡಿಸಬೇಕು ಒಂದೇ ಉದ್ದೇಶದಿಂದ ನಾನು ಬೆಳಗಾವಿಗೆ ಹೋಗ್ತೀನಿ ಆದರೆ ಅಧಿವೇಶನಕ್ಕೆ ಹೋಗಲ್ಲ. ಬೆಳಗಾವಿಗೆ ಹೋಗ್ತಿರೋ ಉದ್ದೇಶ ಸಭಾಧ್ಯಕ್ಷರಿಗೆ ಈ ವಾರ ನಾನು ಸದನಕ್ಕೆ ಹಾಜರಾಗಲ್ಲ ಅಂತಾ ಅನುಮತಿ ಪಡೆಯಲು ಹೋಗುತ್ತಿದ್ದೇನೆ. ಈ ಮೂಲಕ ಸೌಜನ್ಯ ರೀತಿಯಲ್ಲಿ ಮೌನ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಸಚಿವ ಸಂಪುಟಕ್ಕೆ ಸೇರಿಸದ್ದಕ್ಕೆ ಈಶ್ವರಪ್ಪ ಅವರು ಅಸಮಾಧಾನ ಹೊರ ಹಾಕಿದರು.

ಜನಾರ್ದನ ರೆಡ್ಡಿಗೆ ಬುದ್ಧಿ ಹೇಳುತ್ತಿದ್ದೆ:  ರಾಜ್ಯದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಜನಾರ್ಧನ ರೆಡ್ಡಿ ದೂರವಾಗುವ ಪ್ರಶ್ನೆ ನನಗೆ ಕೇಳಿದ್ರೆ ನಾನೇನು ಉತ್ತರ ಕೊಡಲಿ. ಈಗಾಗಲೇ ಬೇರೆ ಪಕ್ಷ ಕಟ್ಟುತ್ತೇನೆ ಎಂದು ಹೇಳಿದ್ದರೆ ನಾನಾಗ ಬುದ್ಧಿ ಹೇಳುತ್ತಿದ್ದೆ. ಈ ಹಿಂದೆ ಯಡಿಯೂರಪ್ಪ ಪಕ್ಷ ಕಟ್ತೀನಿ ಅಂತಾ ಹೊರಟಾಗ, ಬೇಡ ತೊಂದರೆ ಆಗುತ್ತೆ ಅಂತಾ ಗಿಣಿ ಹೇಳಿದಂಗೆ ಹೇಳಿದ್ದೆನು. ಅದನ್ನು ಮೀರಿ ಪಕ್ಷ ಕಟ್ಟಿದರೂ, ಎಷ್ಟು ಸೀಟ್ ತಗೊಂಡ್ರು? ಬಿಜೆಪಿ ನಮ್ಮ ತಾಯಿ ಇದ್ದಂಗೆ, ಈ ತಾಯಿ ಬಿಟ್ಟು ಹೋಗೋಕೆ ನಾವ್ಯಾರು ತಯಾರಿಲ್ಲ. ಇದು ನಮಗೆ ಸಿಕ್ಕಿರುವಂತಹ ಸಂಸ್ಕಾರವಾಗಿದೆ. ಎಚ್. ವಿಶ್ವನಾಥ್‌ ಅವರು ಎಲ್ಲಿಗೆ ಆದರೂ ಹೋಗಲಿ ಸ್ವತಂತ್ರವಾಗಿ, ಅವರಿಗೆ ಅವಕಾಶವಿದೆ. ಬರಬೇಕಾದರೆ ಬಂದಿದ್ರಲ್ಲ ಹೆಂಗೆ ಬಂದಿದ್ದರು. ಹಂಗೆ ಹೋದರೆ ಹೋಗಲಿ ಬಿಡಿ. ಬಿಜೆಪಿಯವರು ಅವರಿಗೆ ಸೋಲು ಅಂತ ಹೇಳಿದ್ರಾ ಎಂದ ಈಶ್ವರಪ್ಪ ಪ್ರಶ್ನಿಸಿದರು.

Belagavi Session: ಸುವರ್ಣ ಸೌಧದಲ್ಲಿ ಸಾವರ್ಕರ್‌ ಫೋಟೋ: ಕಾಂಗ್ರೆಸ್‌ನಲ್ಲಿ ಮೂಡದ ಒಮ್ಮತ

ಸಾವರ್ಕರ್‌ ಫೋಟೋ ಅಳವಡಿಕೆ ಸ್ವಾಗತ: ಇಂದು ಕರ್ನಾಟಕದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಸುವರ್ಣಸೌಧದಲ್ಲಿ ಸಭಾಧ್ಯಕ್ಷ ಕಾಗೇರಿಯವರು ಏಳು ಮಹಾನ್ ಪುರುಷರ ಚಿತ್ರಗಳನ್ನು ಹಾಕಿಸಿ ಸ್ಪೂರ್ತಿ ಕೊಟ್ಟಿದ್ದಾರೆ. ಬಸವಣ್ಣ, ಗಾಂಧಿ, ಅಂಬೇಡ್ಕರ್, ವೀರಸಾವರ್ಕರ್, ವಿವೇಕಾನಂದ ಸೇರಿದಂತೆ 7 ಜನ ಮಹಾಪುರುಷರ ಭಾವಚಿತ್ರ ಅನಾವರಣ ಮಾಡಿದ್ದಾರೆ ಎಂದರು.

ಡಿ.ಕೆ.ಶಿವಕುಮಾರ್‌ಗೆ ಜೈಲು ಶಿಕ್ಷೆ ಮಾತ್ರ ಗೊತ್ತು: ಮಾನ್ಯ ಡಿಕೆ ಶಿವಕುಮಾರ ಹಾಗೂ ಅವರ ಶಿಷ್ಯಂದಿರಿಗೆ ತಿಹಾರ್ ಜೈಲು ಪರಪ್ಪನ ಅಗ್ರಹಾರ ಸಂಬಂಧ ಮಾತ್ರ ಗೊತ್ತು. ಯಾಕೆ ಅಂದರೆ ವೀರ ಸಾವರ್ಕರ್ ಅವರು ಅಂಡಮಾನ್ ನ ಜೈಲಲ್ಲಿ ಎಷ್ಟು ವರ್ಷ ಇದ್ದರು. ಅಲ್ಲಿನ ಕಠಿಣ ಶಿಕ್ಷೆ  ಎಷ್ಟರಮಟ್ಟಿಗೆ ಅನುಭವಿಸಿದರು. ಅವರ ಇತಿಹಾಸ ತಿಳಿದುಕೊಳ್ಳುವ ಪ್ರಯತ್ನ ಡಿಕೆಶಿ ಹಾಗೂ ಸ್ನೇಹಿತರು ಮಾಡಲಿ. ಆದರೆ, ಡಿ.ಕೆ. ಶಿವಕುಮಾರ್ ವೀರ ಸಾವರ್ಕರ್ ಬಗ್ಗೆ ಮಾತಾಡಿರೋದು ರಾಜ್ಯದ ಜನರಿಗೆ ಕಾಂಗ್ರೆಸ್ ಬಗ್ಗೆ ಅಸಹ್ಯ ಹುಟ್ಟುತ್ತದೆ. ವೀರ ಸಾವರ್ಕರ್ ಅವರು ಜೈಲಿಗೆ ಹೋಗಿದ್ದು ಸ್ವಾತಂತ್ರ್ಯ ಹೋರಾಟಕ್ಕಾಗಿ. ಇತಿಹಾಸ ನೋಡಿಕೊಂಡು ಡಿ.ಕೆ.ಶಿವಕುಮಾರ್ ಮಾತನಾಡಬೇಕು ಎಂದು ಕಿಡಿಕಾರಿದರು. 

ಸೋನಿಯಾ, ರಾಹುಲ್‌ ಗಾಂಧಿ ಹಾಗೂ ದೇಶಕ್ಕೇನು ಸಂಬಂಧ: ನಾನು ಕಾಂಗ್ರೆಸ್‌ಗೆ ವಾಪಸ್‌ ಕೇಳುತ್ತೇನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದವರೆಲ್ಲರಿಗೆ ಹಾಗೂ ನಮ್ಮ ದೇಶಕ್ಕೂ ಏನು ಸಂಬಂಧ? ಅವರು ಈ ದೇಶಕ್ಕೆ ಸಂಬಧವೇ ಇಲ್ಲ. ಸೋನಿಯಾ ಗಾಂಧಿ ವಿದೇಶದಿಂದ ಬಂದ ವ್ಯಕ್ತಿ. ನಾನು ವೈಕ್ತಿಕವಾಗಿ ಅವರನ್ನು ಟೀಕೆ ಮಾಡೋದಕ್ಕೆ ಇಷ್ಟ ಪಡೋದಿಲ್ಲ. ಕಾಂಗ್ರೆಸ್ ಯಾವ ಧಿಕ್ಕಲ್ಲಿ ಹೋಗ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೈಲು ಶಿಕ್ಷೆ ಅನುಭವಿಸಿದ್ದಾರಾ? ತಿಹಾರ್ ಜೈಲಿಗೆ ಡಿಕೆ ಶಿ ಹೋಗಿದ್ದು ಇರಬಹುದು. ಪರಪ್ಪನ ಅಗ್ರಹಾರಕ್ಕೆ ಕಾಂಗ್ರೆಸ್ ನವರು ಹೋಗಿದ್ದು ಇರಬಹುದು. ಇದು ಅವರ ವೈಕ್ತಿಕವಾಗಿ ಮಾಡಿದಂತಹ ರಾಷ್ಟದ್ರೋಹಿ ಚಟುವಟಿಕೆಗಳು ಕಾರಣವಾಗಿವೆ ಎಂದರು.

ರಾಜಕಾರಣ ಮಾಡುವ ಬುದ್ಧಿ ಕಾಂಗ್ರೆಸ್‌ಗಿಲ್ಲ: ಈ ಹಿಂದೆ ಪಾಕಿಸ್ತಾನ ಭಾರತ ಯುದ್ದ ಸಮಯದಲ್ಲಿ  ಶ್ರೀಮತಿ ಇಂದಿರಾ ಗಾಂಧಿಯವರನ್ನು ವಾಜಪೇಯಿಯವರು ದುರ್ಗೆ ಅಂತ ಕರೆದರು. ದೇಶದ ಸಂಕಷ್ಟದ ಸಮಯದಲ್ಲೂ ಇಂದಿರಾ ಗಾಂಧಿಯನ್ನು ಹೊಗಳಿದರು. ಅದೇ ಇಂದಿರಾ ಗಾಂಧಿ ಅವರು ವಾಜಪೇಯಿ, ಜಯಪ್ರಕಾಶ್ ನಾರಾಯಣ ಸೇರಿದಂತೆ ಅನೇಕ‌ ನಾಯಕರನ್ನು ತುರ್ತು ಪರಿಸ್ಥಿತಿ ತಂದು ಜೈಲು ಸೇರಿಸಿದರು.  ಅದನ್ನು ಬಿಜೆಪಿ ವಿರೋಧಿಸಿತು. ಯಾವ ಸಂದರ್ಭದಲ್ಲಿ ರಾಜಕಾರಣ ಮಾಡಬೇಕು ಎಂಬ ಕಲ್ಪನೆ ಕಾಂಗ್ರೆಸ್ ಗೆ ಇಲ್ಲ ಎಂದು ಈಶ್ವರಪ್ಪ ಹೇಳಿದರು.

Follow Us:
Download App:
  • android
  • ios