ಬೀದರ್: ಈಶ್ವರ್ ಖಂಡ್ರೆಗೆ ಜಿಲ್ಲೆ ಉಸ್ತು​ವಾ​ರಿ, ಅಭಿ​ವೃ​ದ್ಧಿಯ ಜವಾ​ಬ್ದಾರಿ!

ಕಳೆದ 2016ರಲ್ಲಿ ಸಿದ್ದ​ರಾ​ಮಯ್ಯ ಸರ್ಕಾ​ರದ ಅವ​ಧಿ​ಯ​ಲ್ಲಿಯೂ ಮಂತ್ರಿ​ಯಾ​ಗಿ, ಜಿಲ್ಲಾ ಉಸ್ತು​ವಾ​ರಿ ಸಚಿ​ವ​ರಾ​ಗಿದ್ದ ಈಶ್ವರ ಖಂಡ್ರೆ ಅವ​ರಿ​ಗೆ ಎರ​ಡನೇ ಬಾರಿ ಡಬಲ್‌ ಧಮಾಕಾ ಎಂಬಂತೆ ಸಚಿವ ಸ್ಥಾನದ ಜೊತೆ ಜೊತೆಗೆ ಜಿಲ್ಲಾ ಉಸ್ತು​ವಾರಿ ಸ್ಥಾನ ಕೂಡ ಲಭಿ​ಸಿದ್ದು, ಜಿಲ್ಲೆಯ ಜನ​ತೆ ನಿರೀ​ಕ್ಷೆ ಈಡೇ​ರಿ​ಸು​ವ ಜೊತೆ​ಗೆ ಆಡ​ಳಿ​ತ​ವನ್ನು ಬಿಗಿ​ಗೊ​ಳಿ​ಸುವತ್ತ ಗಮನ ಹರಿ​ಸ​ಬೇ​ಕಿದೆ.

Eshwar khandra district in charge responsible for development at bidar rav

ಅಪ್ಪಾ​ರಾವ್‌ ಸೌದಿ

ಬೀದರ್‌ (ಜೂ.10) ಕಳೆದ 2016ರಲ್ಲಿ ಸಿದ್ದ​ರಾ​ಮಯ್ಯ ಸರ್ಕಾ​ರದ ಅವ​ಧಿ​ಯ​ಲ್ಲಿಯೂ ಮಂತ್ರಿ​ಯಾ​ಗಿ, ಜಿಲ್ಲಾ ಉಸ್ತು​ವಾ​ರಿ ಸಚಿ​ವ​ರಾ​ಗಿದ್ದ ಈಶ್ವರ ಖಂಡ್ರೆ ಅವ​ರಿ​ಗೆ ಎರ​ಡನೇ ಬಾರಿ ಡಬಲ್‌ ಧಮಾಕಾ ಎಂಬಂತೆ ಸಚಿವ ಸ್ಥಾನದ ಜೊತೆ ಜೊತೆಗೆ ಜಿಲ್ಲಾ ಉಸ್ತು​ವಾರಿ ಸ್ಥಾನ ಕೂಡ ಲಭಿ​ಸಿದ್ದು, ಜಿಲ್ಲೆಯ ಜನ​ತೆ ನಿರೀ​ಕ್ಷೆ ಈಡೇ​ರಿ​ಸು​ವ ಜೊತೆ​ಗೆ ಆಡ​ಳಿ​ತ​ವನ್ನು ಬಿಗಿ​ಗೊ​ಳಿ​ಸುವತ್ತ ಗಮನ ಹರಿ​ಸ​ಬೇ​ಕಿದೆ.

ಈ ಹಿಂದಿನ ಸರ್ಕಾ​ರದ ಲೋಪ​ದೋ​ಷ​ಗ​ಳನ್ನು ಎತ್ತಿ ಹಿಡಿದು ವಿಧಾ​ನ​ಸೌ​ಧದ ಒಳ, ಹೊರಗೂ ಸತತ ಹೋರಾಟ ನಡೆಸಿ ಗಮನ ಸೆಳೆ​ದಿದ್ದ ಖಂಡ್ರೆ ಇದೀಗ ತಮ್ಮ ಈ ಅವ​ಧಿ​ಯ​ಲ್ಲಿ ಆಡ​ಳಿ​ತ ಹಳಿ ತಪ್ಪ​ದಂತೆ ಎಚ್ಚ​ರ​ವ​ಹಿ​ಸ​ಬೇ​ಕಿದೆ. ಪ್ರವಾ​ಸೋ​ದ್ಯಮ, ಕೈಗಾ​ರಿ​ಕೋ​ದ್ಯಮ, ಶಿಕ್ಷ​ಣ ಮತ್ತಿ​ತರ ಕ್ಷೇತ್ರ​ಗ​ಳಲ್ಲಿ ಜಿಡ್ಡು ಹಿಡಿ​ದಿ​ರುವ ವ್ಯವ​ಸ್ಥೆ​ಯನ್ನು ಬದ​ಲಿ​ಸ​ಬೇ​ಕಿದೆ. ಜನರ ಮನೆ ಬಾಗಿ​ಲಿಗೆ ಯೋಜನೆ ತಲು​ಪು​ವಂತೆ, ಸಾಕಾ​ರ​ಗೊ​ಳ್ಳುವ ಯೋಜ​ನೆ​ಗ​ಳು ಜನರ ಮನೆ ಮುಟ್ಟು​ವಂತೆ ಮಾಡ​ಬೇ​ಕಿ​ದೆ ಎನ್ನು​ತ್ತಾರೆ ಕ್ಷೇತ್ರದ ಜನತೆ.

ಸಚಿವ ಶರಣಪ್ರಕಾಶ ಪಾಟೀ​ಲ​ರಿ​ಗೆ ಉಸ್ತು​ವಾರಿ ಪಟ್ಟ: ರಾಯಚೂರಲ್ಲಿ ಅಸ​ಮಾಧಾನ ಸ್ಫೋಟ!...

ಜಿಲ್ಲೆ​ಯಲ್ಲಿ ದಶ​ಕದ ಹಿಂದೆ ಆರಂಭ​ವಾ​ಗಿ​ರುವ ಒಳ​ಚ​ರಂಡಿ ವ್ಯವಸ್ಥೆ ಇಂದಿಗೂ ಪೂರ್ಣ​ಗೊಂಡಿಲ್ಲ. ಒಂದು ಹಂತ​ದಲ್ಲಿ ವಿರೋಧ ಪಕ್ಷ​ದ​ವ​ರಾ​ಗಿ​ದ್ದಾಗ ಯುಜಿಡಿ ವಿಫ​ಲ​ವಾ​ಗಿದೆ ಎಂದು ಆರೋ​ಪಿ​ಸಿದ್ದ ಖಂಡ್ರೆ ಇದೀಗ ನೂರಾರು ಕೋಟಿ ರು.ಗಳ ಯೋಜನೆ ಪೂರ್ಣ​ಪ್ರ​ಮಾ​ಣ​ದಲ್ಲಿ ಜನ​ರಿಗೆ ತಲು​ಪಿಸು​ವ​ಲ್ಲಿ ಕಾರ್ಯೋ​ನ್ಮು​ಖ​ರಾ​ಗ​ಬೇ​ಕಿದೆ. ಇದ​ಕ್ಕಾಗಿ ಸಂಬಂಧಿತ ಗುತ್ತಿ​ಗೆ​ದಾ​ರ​ರ ಜುಟ್ಟು ಹಿಡಿ​ಯ​ಬೇ​ಕಿ​ದೆ. ನೀರ​ಸ​ವಾ​ಗಿ​ರು​ವ ಅಧಿ​ಕಾ​ರಿ​ಗ​ಳನ್ನ ಬದ​ಲಾ​ಯಿ​ಸ​ಬೇ​ಕಿ​ದೆ.

ಜಿಲ್ಲಾ ಸಂಕೀರ್ಣ ಹಾಗೂ ಬೀದರ್‌ ಮಿನಿ ವಿಧಾನಸೌಧ ನಿರ್ಮಾ​ಣ ಖಂಡ್ರೆಗೆ ಹೊಸ​ದೇ​ನಿಲ್ಲ. ಸುಮಾರು 50 ಕೋಟಿ ರು.ಗಳ ಮಂಜೂ​ರಾತಿ ದೊರೆ​ತಾ​ಗಿ​ದೆ. ಕೇವಲ ರಾಜ​ಕೀಯ, ಸ್ವ ಹಿತಾ​ಸಕ್ತಿ, ಪ್ರತಿ​ಷ್ಠೆ​ಯಿಂದಾ​ಗಿಯೇ ಒಂದು ದಶ​ಕ​ದಿಂದ ನಿರ್ಧಾರ ಮುಂದೂ​ಡ​ಲ್ಪ​ಡು​ತ್ತಲೇ ಬರು​ತ್ತಿದೆ. ಈ ಬಗ್ಗೆ ಗಟ್ಟಿನಿರ್ಧಾರ ಕೈಗೊ​ಳ್ಳುವ ಸಾಹಸ ಮಾಡ​ಬೇ​ಕಿದೆ.

ಗೋದಾ​ವರಿ ನೆನೆ​ಯಲಿ, ನೀರು ಹಿ​ಡಿ​ದಿ​ಟ್ಟು​ಕೊ​ಳ್ಳುವ ಯೋಜನೆ ತರ​ಲಿ​:

ಸದ್ಯಕ್ಕೆ ಜಿಲ್ಲೆಗೆ ಜೀವ​ಜ​ಲ​ವಾ​ಗಿ​ರುವ ಕಾರಂಜಾ ಜಲಾ​ಶಯ ಬರಿ​ದಾ​ಗು​ತ್ತಿದೆ. ಜಲಾ​ಶ​ಯ​ಕ್ಕಾಗಿ ಬೀದಿಗೆ ಬಿದ್ದಿ​ರುವ ರೈತ ಕುಟುಂಬ​ಗ​ಳಿಗೆ ಇನ್ನೂ ಸೂಕ್ತ ಪರಿ​ಹಾರ ಸಿಕ್ಕಿ​ಲ್ಲ. ಇಡೀ ರಾಜ್ಯದ ಪೈಕಿ ಬೀದರ್‌ ಜಿಲ್ಲೆ​ಯಲ್ಲಿ ಮಾತ್ರ ಹಾದು ಹೋಗುವ ಗೋದಾ​ವರಿ ನದಿ ನೀರಿನ ಸದ್ಬ​ಳಕೆ ಮರೀ​ಚಿ​ಕೆ​ಯಾ​ಗಿದೆ. ಗೋದಾ​ವರಿ ನೀರು ಹಿಡಿ​ದಿ​ಟ್ಟು​ಕೊ​ಳ್ಳಲು ಮತ್ತಷ್ಟುಬಾಂದಾರ, ಏತ ನೀರಾ​ವ​ರಿ​ಯಂತಹ ಯೋಜ​ನೆ​ಗ​ಳನ್ನು ಜಿಲ್ಲೆಗೆ ತರ​ಬೇ​ಕಿದೆ. ಇದ​ಕ್ಕಾಗಿ ಜಿಲ್ಲೆಯ ಉಸ್ತು​ವಾರಿಯಾಗಿ ಸರ್ಕಾ​ರದ ಮುಂದೆ ನಮ್ಮ ಹಕ್ಕನ್ನು ಮಂಡಿಸಿ ಬರುವ ಬಜೆ​ಟ್‌​ನಲ್ಲಿ ಗೋದಾ​ವರಿ ನೀರು ಬಳ​ಕೆ​ಗಾ​ಗಿಯೇ ಪ್ರತ್ಯೇಕ ಅನು​ದಾನ ಪಡೆ​ಯ​ಬೇ​ಕು ಎಂಬುದು ಜನರ ಆಶ​ಯ​ವಾ​ಗಿ​ದೆ.

ಇನ್ನು ಇಡೀ ವಿಶ್ವ​ದ​ಲ್ಲಿಯೇ ಅಪ​ರೂಪ ಎಂಬಂತಿ​ರು​ವ ಗುಹಾಂತರ ಬಾವಿ​ಗಳ ಕರೇಜ್‌ ಜಿಲ್ಲಾ ಕೇಂದ್ರ ಬೀದ​ರ್‌​ನ​ಲ್ಲಿ​ದೆ. ಕಳೆದ ಬಾರಿ ಖಂಡ್ರೆ ಸಚಿ​ವ​ರಾ​ಗಿ​ದ್ದಾಗ ಬಿಡು​ಗ​ಡೆ​ಯಾ​ಗಿದ್ದ 5 ಕೋಟಿ ರು. ಏನಾ​ಯಿತು ಎಂಬುದೇ ಗೊತ್ತಾ​ಗು​ತ್ತಿ​ಲ್ಲ. ಕಿಂಚಿತ್ತೂ ಪುನ​ಶ್ಚೇ​ತನ ಆಗ​ದಿ​ದ್ದರೂ ಕೋಟ್ಯಂತರ ರುಪಾಯಿ ಖರ್ಚಾ​ಗಿದೆ. ಈ ಬಗ್ಗೆ ಗಂಭೀ​ರತೆ ತೋರ​ಲಿ. ಪ್ರವಾಸಿ ತಾಣ​ಗಳ ಅಭಿ​ವೃ​ದ್ಧಿ​ಯಾ​ಗ​ಲಿ.

ರೈತರು ಅತಿವೃಷ್ಟಿ, ಅನಾ​ವೃ​ಷ್ಟಿಯಂಥ ಪ್ರಕೃತಿ ವಿಕೋ​ಪ​ಗ​ಳಿಗೆ ತತ್ತ​ರಿಸಿ ಹೋಗಿ​ದ್ದಾರೆ. ಬಿಎ​ಸ್‌​ಎ​ಸ್‌ಕೆ ಸಕ್ಕರೆ ಕಾರ್ಖಾನೆ ಮುಚ್ಚಿ ಹೋಗಿ ರೈತರು ಸಂಕ​ಷ್ಟಕ್ಕೆ ದೂಡ​ಲ್ಪ​ಟ್ಟಿ​ದ್ದಾರೆ. ಸಹ​ಕಾರ ಹಾಗೂ ಖಾಸಗಿ ಕಾರ್ಖಾ​ನೆ​ಗಳ ಪೈಕಿ ಕೆಲವು ಸೂಕ್ತ ಬೆಲೆ ನೀಡು​ತ್ತಿಲ್ಲ, ಬಾಕಿ ನೀಡು​ವಲ್ಲಿ ಭಾರಿ ವಿಳಂಬ ಮಾಡುತ್ತಿ​ವೆ. ಈ ಕುರಿತು ಸಚಿ​ವರು ಪ್ರತ್ಯೇಕ ಸಭೆ ನಡೆ​ಸಿ ಕಾಲ​ಮಿ​ತಿ​ ಹಾಕ​ಬೇ​ಕಿ​ದೆ. ತೋಟ​ಗಾ​ರಿಕಾ ಬೆಳೆ​ಗ​ಳಿಗೆ ಪ್ರೋತ್ಸಾ​ಹಿ​ಸ​ಬೇ​ಕಿದೆ. ಸೋಯಾ ಬೆಳೆ​ಗಾ​ರ​ರಿಗೆ ಸಹ​ಕಾ​ರ​ವಾ​ಗು​ವಂತೆ ಸಣ್ಣ ಕೈಗಾ​ರಿ​ಕಾ​ಗ​ಳನ್ನು ಆರಂಭಿ​ಸು​ವುದು ಅತ್ಯಂತ ಅವ​ಶ್ಯಕ. ಇದ​ರಿಂದ ರೈತ​ರಿಗೂ ಅನು​ಕೂಲ, ನಿರು​ದ್ಯೋಗ ಸಮಸ್ಯೆ ಕಿಂಚಿ​ತ್ತಾ​ದರೂ ಪರಿ​ಹಾ​ರಕ್ಕೆ ಸಹ​ಕಾ​ರಿಯಾಗ​ಲಿದೆ.

ಬೀದರ್‌ ನಗ​ರ​ಸ​ಭೆಗೆ ಚುನಾ​ವಣೆ ಮುಗಿದು ಎರಡು ವರ್ಷ ಉರು​ಳಿದೆ. ಇನ್ನೂ ಅಧ್ಯಕ್ಷ, ಉಪಾ​ಧ್ಯಕ್ಷ ಸ್ಥಾನ ಭರ್ತಿ ಆಗಿಲ್ಲ. ಸದ​ಸ್ಯರಿಗೂ ಅಧಿ​ಕಾರ ಸಿಕ್ಕಿಲ್ಲ. ಇದು ನಗ​ರದ ಅಭಿ​ವೃ​ದ್ಧಿಗೆ ಮಾರಕ. ಇದ​ರತ್ತ ಗಮ​ನ​ಹ​ರಿ​ಸ​ಬೇ​ಕಿದೆ. ಮುಖ್ಯ​ವಾಗಿ ಪೌರಾ​ಡ​ಳಿತ ಸಚಿವರಾದ ರಹೀ​ಮ್‌​ಖಾನ್‌ ಪಾತ್ರ ಇದ​ರಲ್ಲಿ ಮುಖ್ಯ​ವಾ​ಗಿದೆ.

ಬೀದರ್‌ ಜಿಲ್ಲೆ​ಯ ಕಲಾ​ವಿ​ದ​ರಿಗೆ ಪ್ರೋತ್ಸಾ​ಹಿ​ಸು​ವತ್ತ ಕಾರ್ಯ​ಕ್ರ​ಮ​ಗಳು ತರಲಿ, ಜಿಲ್ಲೆ​ಯ​ಲ್ಲಿ ಕ್ರೀಡಾಂಗ​ಣ​ಗಳ ಕೊರ​ತೆ​ಯಿದೆ. ಬೀದರ್‌ ಜಿಲ್ಲಾ ಕೇಂದ್ರ​ದ​ಲ್ಲಿ​ರುವ ನೆಹರು ಕ್ರೀಡಾಂಗಣ ವ್ಯವ​ಸ್ಥೆ ಇದೀಗ ಹದೆ​ಗೆಟ್ಟು ಹೋಗಿದೆ. ಭಾಲ್ಕಿ​ಯಲ್ಲಿ ಕ್ರೀಡಾಂಗಣ ನಿರ್ಮಾ​ಣದ ಬೇಡಿಕೆ ಬಹು​ಬೇಗ ಈಡೇ​ರಿ​ಸ​ಬೇ​ಕಿದೆ. ಹೀಗೆಯೇ ಹತ್ತು ಹಲ​ವಾರು ಸಾಲು ಸಾಲು ಬೇಡಿ​ಕೆ​ಗಳು ಜಿಲ್ಲಾ ಉಸ್ತು​ವಾರಿ ಸಚಿ​ವ​ರಾ​ಗಿ​ರುವ ಈಶ್ವರ ಖಂಡ್ರೆ ಮುಂದಿದ್ದು, ಜಿಲ್ಲೆಯ ಇನ್ನೋರ್ವ ಸಚಿವ ರಹೀಮ್‌ ಖಾನ್‌ ಜೊತೆ​ಗೂಡಿ ಸಾಕಾ​ರ​ಗೊ​ಳಿ​ಸುವತ್ತ ತಡ​ಮಾ​ಡದೇ ಹೆಜ್ಜೆ ಇಡ​ಲಿ ಎಂಬುದು ಮತ​ದಾ​ರರ ನಿರೀ​ಕ್ಷೆ​ಯಾ​ಗಿ​ದೆ.

ಜೀವ ಹಾನಿ​ಯ​ತ್ತ ಪರಿ​ಸರ ಮಾಲಿನ್ಯ, ತಕ್ಷಣ ಕ್ರಮ​ವಾ​ಗ​ಲಿ

ಬೀದರ್‌ ಜಿಲ್ಲೆ​ಯಲ್ಲಿ ಪರಿ​ಸರ ಮಾಲಿ​ನ್ಯದ ಸಮಸ್ಯೆ ಮುಗಿ​ಲೆ​ತ್ತ​ರಕ್ಕೆ ಬೆಳೆ​ದಿದೆ. ಪರಿ​ಸರ ಖಾತೆ ಸಚಿ​ವ​ರಾ​ಗಿ​ರುವ ಖಂಡ್ರೆ ಪರಿ​ಸ​ರಕ್ಕೆ ಧಕ್ಕೆ ತರು​ತ್ತಿ​ರುವ ಕಾರ್ಖಾ​ನೆ​ಗಳಿಗೆ ಮೂಗು​ದಾ​ರ ಹಾಕ​ಬೇ​ಕಿದೆ. ಕೇವಲ ಕಾಗ​ದದ ಮೇಲೆ ಕ್ರಮ​ವಾ​ಗದೆ ಜನರ ಆರೋ​ಗ್ಯ ಕಾಪಾ​ಡುವ ನಿಟ್ಟಿ​ನಲ್ಲಿ ಗಂಭೀರ ಕ್ರಮ​ವಾ​ಗ​ಲಿ. ಜಿಲ್ಲೆಯ ಕೈಗಾ​ರಿಕಾ ಪ್ರದೇ​ಶಗ​ಳಲ್ಲಿ ತ್ಯಾಜ್ಯ ಸಂಸ್ಕ​ರಣಾ ಘಟಕ ಅಳ​ವ​ಡಿಕೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡ​ಲಿ ಎಂದು ಜನರು ಚಾತಕ ಪಕ್ಷಿ​ಯಂತೆ ಕಾಯು​ತ್ತಿ​ದ್ದಾ​ರೆ.

ಒಡಿಶಾ ದುರ್ಘಟನೆ: ನಮಗೆ ಸನ್ಮಾನ ಬೇಡವೆಂದ ಖಂಡ್ರೆ, ರಹೀಂ ಖಾನ್

ಕೃಷ್ಣ​ಮೃಗ, ನವಿಲು ಸಂರ​ಕ್ಷ​ಣೆ:

ಜಿಲ್ಲೆ​ಯ​ಲ್ಲಿನ ಅರ​ಣ್ಯೀ​ಕ​ರಣ ಹೆಚ್ಚಾಗ​ಬೇ​ಕಿ​ದೆ. ಜೊತೆ​ಗೆ ಹೇರ​ಳ​ವಾ​ಗಿ​ರು​ವ ನವಿಲು​ಗ​ಳು, ಕೃಷ್ಣ ಮೃಗ​ಗ​ಳನ್ನು ಬೇಟೆ​ಗಾ​ರ​ರಿಂದ ರಕ್ಷಿ​ಸಲು ರಕ್ಷಿ​ತಾ​ರಣ್ಯ ಸ್ಥಾಪಿ​ಸಬೇಕಿ​ದೆ. ನವಿಲು ಧಾಮವನ್ನು ಅರಣ್ಯ ಸಚಿವ ಖಂಡ್ರೆ ಘೋಷಿ​ಸ​ಬೇಕಿದೆ.

Latest Videos
Follow Us:
Download App:
  • android
  • ios