ನವದೆಹಲಿ, (ಜೂನ್.01): ರಾಜ್ಯಸಭೆಯಲ್ಲಿ ತೆರವಾಗಲಿರುವ 18 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಗ ನಿಗದಿಪಡಿಸಿದೆ.

ಜೂನ್ 19 ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಆಂಧ್ರಪ್ರದೇಶ ಮತ್ತು ಗುಜರಾತ್‌ನಲ್ಲಿ ತಲಾ 4 ಸ್ಥಾನಗಳು, ಜಾರ್ಖಂಡ್ 2, ಮಧ್ಯಪ್ರದೇಶ 3, ಮಣಿಪುರ್ ಮತ್ತು ಮೇಘಾಲಯ ತಲಾ 1 ಸೀಟುಳಿಗೆ ಗೆ ಚುನಾವಣೆ ನಡೆಯಲಿದೆ.