Bengaluru: ನಕಲಿ ಗುರುತಿನ ಚೀಟಿ ಮುದ್ರಣ ಆರೋಪ, ಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ

ನಕಲಿ ಮತದಾರರ ಗುರುತಿನ ಚೀಟಿ ಮುದ್ರಣ ಆರೋಪದ ಮೇಲೆ ಚುನಾವಣಾಧಿಕಾರಿಗಳು ಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ. 

Election officials raid bengaluru BJP leader's house on allegations of printing Fake voter ID  gow

ಬೆಂಗಳೂರು (ಏ.4): ಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ. ಏರ್ ಪೋರ್ಟ್ ರಸ್ತೆಯ ಅಗ್ರಹಾರ ಬಡಾವಣೆಯಲ್ಲಿರೋ ಬಿಜೆಪಿ ಮುನಿರಾಜು ಮನೆ ಮೇಲೆ ಈ ದಾಳಿ ನಡೆದಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಎನ್ನಲಾದ ಮುನೀಂದ್ರ ಬೆಂಬಲಿಗನಾಗಿರುವ ಮುನಿರಾಜು ಮನೆ ಮೇಲೆ ನಕಲಿ ಮತದಾರರ ಗುರುತಿನ ಚೀಟಿ ಮುದ್ರಣ ಆರೋಪದ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಪ್ರಿಂಟರ್ ಸೇರಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.  ಸದ್ಯ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. 

ಆದರೆ ಸಿಕ್ಕಿರೋ ಮಿಕ್ಕ ದಾಖಲೆಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ. ಗಿಫ್ಟ್ ಗಳು 2500 ಸೀರೆಗಳು ಸೇರಿದಂತೆ 1000 ಫಾರಂ 6 ಮತ್ತು ಫಾರಂ 8 ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಇವು ಓಟರ್ ಐಡಿಯಲ್ಲಿ ಸ್ಥಳ ಬದಲಾವಣೆ, ಓಟರ್ ಐಡಿ ಸೇರಿಕೊಳ್ಳಲು ಬಳಸುವ ಫಾರಂಗಳಾಗಿವೆ. ಸದ್ಯ ಈ ಬಗ್ಗೆ  ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

ಫ್ಲೇಯಿಂಗ್ ಸ್ವ್ಕಾಡ್ ಮತ್ತು ಜಿಎಸ್ ಟಿ ಆಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದ್ದು,  ಸೀರೆ ಮತ್ತು ಗಿಫ್ಟ್ ತಂದಿಟ್ಟಿರುವ  ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸೀರೆ ಎಲ್ಲಿಂದ ತಗೊಂಡು ಬಂದ್ರಿ?  ಸೀರೆ ತಂದಿದ್ದಕ್ಕೆ ಬಿಲ್ ಇದೆಯಾ? ನಿಮ್ಮ ಜಿಎಸ್ ಟಿ ಬಿಲ್ ಇದೆಯಾ? ಯಾಕೆ ಚುನಾವಣೆ ಸಮಯದಲ್ಲಿ ಸೀರೆ ಶೇಖರಿಸಿದ್ದೀರಾ? ಯಾರಿಗಾದ್ರೂ ಸೀರೆಯನ್ನ ಹಂಚಲು ತಂದಿದ್ರಾ ಎಂದೆಲ್ಲ ಪ್ರಶ್ನೆ ಕೇಳಿದ್ದಾರೆ.

ಏ.8ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌: ಸಿಎಂ ಬೊಮ್ಮಾಯಿ ಮಾಹಿತಿ

ಅಧಿಕಾರಿಗಳ ಇಷ್ಟು ಪ್ರಶ್ನೆಗೆ ಉತ್ತರ ನೀಡುತ್ತಿರುವ ಮುನಿರಾಜು, ನಮ್ಮದು ಎಸ್ ಎಲ್ ವಿ ಎಂಟರ್ ಪ್ರೈಸಸ್ ಅನ್ನೋ ರಿಜಿಸ್ಟರ್ ಜಿಎಸ್ ಟಿ ಇದೆ. ನಾವು ಸೀರೆ ತಂದು ಮಾರಾಟ ಮಾಡೋದು ಸಫ್ಲೇ ಮಾಡ್ತೀವಿ. ಇದ್ಯಾವುದು ಚುನಾವಣಾ ಉದ್ದೇಶಕ್ಕೆ ತಂದಿರೋದಲ್ಲ. ಸೀರೆ ಖರೀದಿಗೆ ಸಂಬಂಧಿಸಿದಂತೆ ನಮ್ಮ ಬಳಿ ಜಿಎಸ್ ಟಿ ಬಿಲ್ ಇದೆ. ಮನೆಯಲ್ಲಿ ವೋಟರ್ ಐಡಿಗೆ ಸಂಬಂಧಿಸಿ ಕೆಲವು ಫಾರ್ಮ್ ಪತ್ತೆಗೆ ಸಂಬಂಧಿಸಿ ಮಾತನಾಡಿದ ಅವರು ಹೊಸದಾಗಿ ವೋಟರ್ ಐಡಿ ರೆಡಿ ಮಾಡಲು ಫಾರ್ಮ್ ನಂ -6 ಸಿಕ್ಕಿದೆ. ವೋಟರ್ ಐಡಿ ಇಲ್ಲದೆ ಇರುವವರಿಗೆ ವೋಟರ್ ಐಡಿ ಮಾಡಲು ಸಹಾಯ ಮಾಡ್ತೀವಿ. ಯಾರು ವೋಟರ್ ಐಡಿ ಬೇಕು ಅಂತಾ ಬರ್ತಾರೆ. ಅವರ ಫಾರ್ಮ್ ಫಿಲ್ ಮಾಡಿ ಪೊಟೋ ಅಂಟಿಸಿ ಕೊಡ್ತಿದ್ವಿ. ಇದು ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯ ಅಲ್ಲ. ನಾವು ಅಪ್ಲೋಡ್ ಮಾಡಿದ ಫಾರ್ಮ್ ಅನ್ನ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ ಎಂದಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಅಕ್ರಮ ಸದ್ಯ ಕಂಡು ಬಂದಿಲ್ಲ. ಪೊಲೀಸರ ಭದ್ರತೆಯಲ್ಲಿ  ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಪರಿಶೀಲನೆ ವೇಳೆ ಪತ್ತೆಯಾದ ಅಕ್ರಮವಾಗಿ ದಾಸದ್ತಾನು ಮಾಡಿದ್ದ ಸೀರೆಗಳನ್ನ ಅಧಿಕಾರಿಗಳು ವಶಕ್ಕೆ  ಪಡೆದಿದ್ದಾರೆ. ಜೊತೆಗೆ ಮತದಾರರ ಸೇರ್ಪಡೆ ಮಾಡುವ ಫಾರಂ ನಂಬರ್ 6 ಹಾಗೂ 8 ಪ್ರತಿಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸೀರೆಗಳನ್ನು ಕ್ಯಾಂಟರ್ ನಲ್ಲಿ ತುಂಬಿಕೊಂಡು ಚುನಾವಣಾಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ.

ಶುಕ್ರವಾರದೊಳಗೆ ಹಾಸನ ಕ್ಷೇತ್ರದ ಟಿಕೆಟ್‌ ಫೈನಲ್‌: ಎಚ್‌.ಡಿ.ಕುಮಾರಸ್ವಾಮಿ

ಹಿರಿಯ ಅಧಿಕಾರಿಗಳ ಮಾಹಿತಿ ಆಧರಿಸಿ ತಪಾಸಣೆ ಮಾಡಲಾಯ್ತು. ಪ್ಲೈಯಿಂಗ್ ಸ್ಕ್ವಾಡ್ ನಿಂದ ಪರಿಶೀಲನೆ ಮಾಡಲಾಯ್ತು. ಸೀರೆಗಳು , ಚುನಾವಣಾ ಸಂಬಂಧಿತ ಫಾರಂಗಳು ಸಿಕ್ಕಿದೆ. ಸೀರೆಗಳ ಬಗ್ಗೆ ತಪಾಸಣೆ ಮಾಡಲಾಯ್ತು. ಸಾಕಷ್ಟು ಅನುಮಾನವಿದೆ. ನವೆಂಬರ್ ನಲ್ಲಿ ಸೀರೆಗಳು ತಂದಿದ್ದಾರೆ. ಅವತ್ತು ತಂದಿರೋದು, ಇದುವರೆಗೂ ಸೇಲ್ ಆಗಿಲ್ಲ. ಒಂದ್ಕಡೆ ಸೀರೆ ಮತ್ತೊಂದ್ಕಡೆ ಫಾರಂ ಗಳು ಸಿಕ್ಕಿವೆ. ಸದ್ಯ ಪರಿಶೀಲನೆ ನಡೆಸ್ತಿದ್ದು, ಜಪ್ತಿ ಮಾಡಿ ತನಿಖೆ ಮಾಡ್ತಿದ್ದೇವೆ. ಬ್ಯಾಟರಾಯನಪುರ ಚುನಾವಣಾ ನೋಡೆಲ್ ಅಧಿಕಾರಿ ಸತೀಶ್ ಹೇಳಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios