ಬೆಳಗಾವಿ(ನ. 27) ಚುನಾವಣಾ ಪ್ರಚಾರ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಸಿಎಂ ಬಿಎಸ್ ಯಡಿಯೂರಪ್ಪ ಮೇಲೆ ದೂರು ದಾಖಲಾಗಿದೆ. 

ಬೆಳಗಾವಿ ಜಿಲ್ಲೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಐದು ದೂರು ದಾಖಲಾಗಿದೆ. ವೀರಶೈವ ಸಮಾಜದ ಹೆಸರು ಹೇಳಿ ಬಿಎಸ್‌ವೈ ಮತಯಾಚನೆ ಮಾಡಿದ  ಆರೋಪ ಕೇಳಿ ಬಂದಿದೆ.

ಬೆಳಗಾವಿ ಜಿಲ್ಲೆ ಶಿರಗುಪ್ಪಿ, ಗೋಕಾಕ್‌ನಲ್ಲಿ ಪ್ರಚಾರ ವೇಳೆ ಭಾಷಣ ಮಾಡುವಾದ ವೀರಶೈವ ಸಮಾಜದ ಹೆಸರು ಹೇಳಿ ಮತಯಾಚನೆ ಮಾಡಿದ್ದಾರೆ ಎನ್ನಲಾಗಿದೆ.  ಖಾವಿ ಜೋಳಿಗೆ ಹಿಡಿದು ಜನರಿಂದ ಹಣ ಕೇಳಿದ್ದಾರೆ ಎನ್ನಲಾಗಿದೆ.

17 ಅನರ್ಹರನ್ನು ಬರಮಾಡಿಕೊಂಡ ಬಿಎಸ್ ವೈಗೆ ಹೊಸ ಸಂಕಷ್ಟ

ಗೋಕಾಕ್ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ವಿರುದ್ಧವೂ ದೂರು ದಾಖಲಾಗಿದೆ.  ಮಹೇಶ್ ಕುಮಟಳ್ಳಿ ನಿವಾಸದಲ್ಲಿ ಡಿಸಿಎಂ ಗೋವಿಂದ್ ಕಾರಜೋಳ ಹಣಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಸಹ ಬಂದಿದೆ.

ಮಾಧ್ಯಮ ವರದಿ ಆಧರಿಸಿ ಪ್ರತ್ಯೇಕ ದೂರು ದಾಖಲಿಸಿಕೊಳ್ಳಲಾಗಿದೆ. ಅನುಮತಿ ಪಡೆಯದೇ ಖಿಳೇಗಾಂವದಲ್ಲಿ ಪ್ರಚಾರ  ಮಾಡಿದ್ದಕ್ಕೆ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ವಿರುದ್ಧವೂ ದೂರು ಸಲ್ಲಿಕೆಯಾಗಿದೆ. ಈ ರೀತಿ  ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 5 ಮಾದರಿ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ.