ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜನಪರ ಗ್ಯಾರಂಟಿ ಯೋಜನೆಗಳ ಜಾರಿ ಜೊತೆಗೆ ರಾಜ್ಯದ ಅಭಿವೃದ್ಧಿ ಕೆಲಸಗಳಿಗೂ ಆದ್ಯತೆ ನೀಡುತ್ತಿದೆ. ಇದರ ಪರಿ​ಣಾ​ಮ ಬಿಜೆಪಿಗರು ಸೋಲಿನ ಹತಾಶೆಯಿಂದ ಟೀಕಿಸುತ್ತಿದ್ದಾರೆ. ಇನ್ನೂ ಐದು ವರ್ಷ ಅವರಿಗೆ ಸರ್ಕಾರವನ್ನು ಟೀಕೆ ಮಾಡುವುದೇ ಕೆಲಸ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿ​ದರು. 

ಆನವಟ್ಟಿ (ಆ.06): ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜನಪರ ಗ್ಯಾರಂಟಿ ಯೋಜನೆಗಳ ಜಾರಿ ಜೊತೆಗೆ ರಾಜ್ಯದ ಅಭಿವೃದ್ಧಿ ಕೆಲಸಗಳಿಗೂ ಆದ್ಯತೆ ನೀಡುತ್ತಿದೆ. ಇದರ ಪರಿ​ಣಾ​ಮ ಬಿಜೆಪಿಗರು ಸೋಲಿನ ಹತಾಶೆಯಿಂದ ಟೀಕಿಸುತ್ತಿದ್ದಾರೆ. ಇನ್ನೂ ಐದು ವರ್ಷ ಅವರಿಗೆ ಸರ್ಕಾರವನ್ನು ಟೀಕೆ ಮಾಡುವುದೇ ಕೆಲಸ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿ​ದರು. ಇಲ್ಲಿಗೆ ಸಮೀ​ಪದ ತಲಗಡ್ಡೆ ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ ನೂತನ ಸ್ವಚ್ಛ ಸಂಕೀರ್ಣ ಘಟಕ ಹಾಗೂ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಸಾಕಾಷ್ಟುಶಾಲೆಗಳಲ್ಲಿ ಶೌಚಾಲಯ, ಕೊಠಡಿಗಳ ಕೊರತೆ, ಜೊತೆಗೆ ಶಿಥಿಲ ಕಟ್ಟಡಗಳು ಇವೆ. ಅವುಗಳನ್ನು ಪಟ್ಟಿಮಾಡಿದ್ದು, ಅದಷ್ಟುಬೇಗ ಸುಸರ್ಜಿತ ಕಟ್ಟಡಗಳನ್ನು ಒದಗಿಸಲಾಗುವುದು ಎಂದರು.

ಸೊರಬ 100 ಸರ್ಕಾರಿ ಬಸ್‌ಗೆ ಮನವಿ: ಮಲೆನಾಡು ಹೆಬ್ಬಾಗಿಲಾದ ಶಿವಮೊಗ್ಗದಲ್ಲಿ ಸರ್ಕಾರಿ ಬಸ್‌ಗಳ ಕೊರತೆ ಇದೆ. ಅದರಲ್ಲೂ ನನ್ನ ಕ್ಷೇತ್ರ ಸೊರಬದ ಬಹುತೇಕ ಹಳ್ಳಿಗಳಲ್ಲಿ ಸರ್ಕಾರಿ ಬಸ್‌ಗಳ ಸಂಚಾರವೇ ಇಲ್ಲದಿರುವುದನ್ನು ಪಟ್ಟಿಮಾಡಿದ್ದೇವೆ. ಸರ್ಕಾರದ ‘ಶಕ್ತಿ’ ಯೋಜನೆ ಪರಿಣಾಮಕಾರಿಯಾಗಿ ಎಲ್ಲರನ್ನು ತಲುಪಿಸುವ ನಿಟ್ಟಿನಲ್ಲಿ, ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು 3ರಿಂದ 4 ಸಾವಿರ ಬಸ್‌ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದರಲ್ಲಿ ಕನಿಷ್ಠ 100 ಬಸ್‌ಗಳನ್ನು ಸೊರಬಕ್ಕೆ ಕೊಡುವಂತೆ ಮನವಿ ಸಲ್ಲಿಸಿದ್ದೇನೆ. ಸಿರಸಿ, ಹಾನಗಲ್‌, ಶಿವಮೊಗ್ಗ, ಸಾಗರ ಡಿಪೋಗಳಿಂದ ಸಧ್ಯಕ್ಕೆ 10ರಿಂದ 15 ಬಸ್‌ಗಳನ್ನು ಬಿಡಲು ಈಗಾಗಲೇ ಕ್ರಮ ಕೈಗೊಂಡಿದ್ದೇನೆ ಎಂದರು.

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು: ನಳಿನ್‌ ಕುಮಾರ್‌ ಕಟೀಲ್‌

ತಲಗಡ್ಡೆ ಗ್ರಾಪಂ ಅಧ್ಯಕ್ಷ ಆರ್‌.ಟಿ.ಮಂಜುನಾಥ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಪಕ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಪ್ರಾಥಮಿಕ ಶಾಲೆಗಳಲ್ಲಿ 100 ರಿಂದ 160 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರು ಪ್ರೌಢಶಾಲೆ ಶಿಕ್ಷಣಕ್ಕೆ 20 ಕಿಮೀ ದೂರದ ಪಟ್ಟಣಕ್ಕೆ ಹೋಗಬೇಕು. ಹಾಗಾಗಿ, ತಲಗಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರೌಢಶಾಲೆ ಮಂಜೂರು ಮಾಡಬೇಕು. ಆರೋಗ್ಯ ಕೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರು ಈ ಭಾಗಕ್ಕೆ ಬಂದಾಗ ವಿಶ್ರಾಂತಿ ಪಡೆಯುತ್ತಿದ್ದ ಪ್ರವಾಸಿ ಮಂದಿರ 1911 ರಲ್ಲಿ ಕಟ್ಟಿಸಿದ್ದು, ಅದನ್ನು ದುರಾಸ್ತಿ ಮಾಡುವ ಜೊತೆಗೆ ಅಭಿವೃದ್ಧಿಪಡಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್‌ ಸರ್ಕಾರದಿಂದ ಭ್ರಷ್ಟಾಚಾರ, ವರ್ಗಾವಣೆ ದಂಧೆ: ಪ್ರಲ್ಹಾದ್‌ ಜೋಶಿ

ಕಾಂಗ್ರೆಸ್‌ ಮುಖಂಡರಾದ ಗಣಪತಿ ಹುಲ್ತಿಕೊಪ್ಪ, ಕೆ.ಪಿ ರುದ್ರಗೌಡ, ಸದಾನಂದಗೌಡ ಬಿ. ಪಾಟೀಲ್‌, ಶಿವಲಿಂಗೇಗೌಡ, ಆರ್‌.ಸಿ ಪಾಟೀಲ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೂಪಾ, ತಹಶೀಲ್ದಾರ್‌ ಹುಸೇನ್‌ ಸರಕಾವಸ, ಪಿಡಿಒ ಶಿವರಾಜ್‌ ಇದ್ದರು. ಸಚಿವರ ಕಾರ್ಯಕ್ರಮ ತಲಗಡ್ಡೆಯಲ್ಲಿ ಆಯೋ​ಜಿ​ಸಿ​ರುವುದನ್ನು ಪತ್ರಿ​ಕೆ​ಗ​ಳಲ್ಲಿ ನೋಡಿರುವ ಜಡೆ ಶಾಲೆಗೆ ಹೋಗುವ ಸುತ್ತಲ ಹಳ್ಳಿಗಳ ವಿದ್ಯಾರ್ಥಿನಿಯರು ತಮ್ಮ ಹಳ್ಳಿಗಳಿಗೆ ಸರ್ಕಾರಿ ಬಸ್‌ ಸಂಚಾ​ರಕ್ಕೆ ಕ್ರಮ ಕೈಗೊ​ಳ್ಳು​ವಂತೆ ಮನವಿ ಸಲ್ಲಿಸಿದರು.