* ಸಿದ್ದರಾಮಯ್ಯರ ಭೇಟಿಯಾದ ಶಿಕ್ಷಣ ಸಚಿವ ಬಿಸಿ ನಾಗೇಶ್* ಬೆಂಗಳೂರಿನಲ್ಲಿ ದಿಢೀರ್ ಸಿದ್ದರಾಮಯ್ಯ ಭೇಟಿಯಾದ ಬಿಸಿ ನಾಗೇಶ್* ಶಿಕ್ಷಣ ಸಚಿವರ ಈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ

ಬೆಂಗಳೂರು, (ಸೆ.03): ಅಚ್ಚರಿ ಬೆಳವಣಿಗೆಯೊಂದರಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿ.ಸಿ. ನಾಗೇಶ್ ಅವರು ಇಂದು (ಸೆ.03) ಬೆಂಗಳೂರಿನ ಅವರ ನಿವಾಸಕ್ಕೆ ಭೇಟಿ ನೀಡಿ ಸಿದ್ದರಾಮಯ್ಯನವರ ಜೊತೆ ಮಾತುಕತೆ ನಡೆಸಿದರು. ಇದು ಅಚ್ಚರಿಗೆ ಕಾರಣವಾಗಿದೆ. 

ಕೋವಿಡ್ ಮೃತರಿಗೆ 1 ಲಕ್ಷ ರೂ ಪರಿಹಾರ, ರಾಜ್ಯದಲ್ಲಿ 2 ದಿನ ಮಳೆ ಅಬ್ಬರ; ಸೆ.3ರ ಟಾಪ್ 10 ಸುದ್ದಿ!

ಸಿದ್ದರಾಮಯ್ಯರ ಆರೋಗ್ಯ ವಿಚಾರಿಸುವುದರ ಜೊತೆಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿ.ಸಿ.ನಾಗೇಶ್​, ಇದೊಂದು ಸೌಜನ್ಯದ ಭೇಟಿ ಎಂದು ಸ್ಪಷ್ಟಪಡಿಸಿದರು.

Scroll to load tweet…

ನಾಗೇಶ್ ಅವರು ಭೇಟಿ ಮಾಡಿರುವುದನ್ನು ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಫೋಟೋ ಸಮೇತ ಹಾಕಿಕೊಂಡಿದ್ದಾರೆ. ಏದ್ರೆ, ಏಕೆ ಭೇಟಿ ಮಾಡಿದ್ರು? ಏನು ಮಾತುಕತೆ ನಡೆಸಿದ್ರು? ಎನ್ನುವುದನ್ನು ಮಾತ್ರ ಹೇಳಿಕೊಂಡಿಲ್ಲ.

ಸಿದ್ದರಾಮಯ್ಯನವರನ್ನ ಏಕೆ ಭೇಟಿ ಮಾಡಿದು..? ಏನೆಲ್ಲಾ ಚರ್ಚೆ ಮಾಡಿದ್ರು? ಬರೀ ಆರೋಗ್ಯ ವಿಚಾರಿಸಲು ಬಂದಿದ್ರಾ..? ಅಥವಾ ರಾಜಕೀಯ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡಿದ್ರಾ..? ಹೀಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.

ಒಟ್ಟಿನಲ್ಲಿ ಶಿಕ್ಷಣ ಸಚಿವರ ಈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.