Asianet Suvarna News Asianet Suvarna News

ಡಿಕೆಶಿ ದುಬೈಗೆ ಹೋಗಲು ಗ್ರೀನ್‌ ಸಿಗ್ನಲ್‌ ನೀಡಿದ ಇಡಿ ಕೋರ್ಟ್

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿದೇಶಿ ಪ್ರವಾಸಕ್ಕೆ ಶನಿವಾರ ದೆಹಲಿಯ ಇಡಿ ಕೋರ್ಟ್ ಷರತ್ತುಬದ್ದ ಹಸಿರು ನಿಶಾನೆ ತೋರಿದೆ. ಡಿಸೆಂಬರ್ 1 ರಿಂದ 8 ರತನಕ ವಿವಿಧ ಕಾರ್ಯಕ್ರಮಗಳು, ಬಿಜಿನೆಸ್ ಮೀಟ್ ಭಾಗಿಯಾಗಬೇಕಿರುವ ಕಾರಣಕ್ಕೆ ದುಬೈಗೆ ತೆರಳಲು ಅವಕಾಶ ಕೊಡಿ ಅಂತ ಡಿ.ಕೆ.ಶಿವಕುಮಾರ್ ನವೆಂಬರ್ 23 ರಂದು ಅರ್ಜಿ ಸಲ್ಲಿಸಿದ್ದರು.

ED court gave green signal to DK Shivakumar to go to Dubai
Author
First Published Nov 26, 2022, 7:12 PM IST

ನವದೆಹಲಿ (ನ.26) : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿದೇಶಿ ಪ್ರವಾಸಕ್ಕೆ ಶನಿವಾರ ದೆಹಲಿಯ ಇಡಿ ಕೋರ್ಟ್ ಷರತ್ತುಬದ್ದ ಹಸಿರು ನಿಶಾನೆ ತೋರಿದೆ. ಡಿಸೆಂಬರ್ 1 ರಿಂದ 8 ರತನಕ ವಿವಿಧ ಕಾರ್ಯಕ್ರಮಗಳು, ಬಿಜಿನೆಸ್ ಮೀಟ್ ಭಾಗಿಯಾಗಬೇಕಿರುವ ಕಾರಣಕ್ಕೆ ದುಬೈಗೆ ತೆರಳಲು ಅವಕಾಶ ಕೊಡಿ ಅಂತ ಡಿ.ಕೆ.ಶಿವಕುಮಾರ್ ನವೆಂಬರ್ 23 ರಂದು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ವೇಳೆ ಆರೋಪಿ ಡಿ.ಕೆ. ಶಿವಕುಮಾರ್ (Shivakumar) ಬಹಳ ಪ್ರಭಾವಶಾಲಿಗಳಾಗಿದ್ದು ಸಾಕ್ಷ್ಯಗಳ (witness) ಮೇಲೆ ಪ್ರಭಾವಬೀರುವ ಮತ್ತು ಸಾಕ್ಷ್ಯಗಳನ್ನು ನಾಶ ಮಾಡುವ (Destroy the evidence) ಸಾಧ್ಯತೆ ಇದೆ. ಅವರು ಸಲ್ಲಿಸಿರುವ ಅರ್ಜಿಯಲ್ಲಿ ತುರ್ತಾಗಿ ಹೋಗಲೇಬೇಕು ಎನ್ನುವ ಅಂಶ ಕಾಣುತ್ತಿಲ್ಲ. ಅಲ್ಲದೇ ದುಬೈ (Dubai) ಪ್ರವಾಸದ ಬಗ್ಗೆ ಸ್ಪಷ್ಟ ವಿವರಗಳು ಅರ್ಜಿಯಲ್ಲಿ ಉಲ್ಲೇಖ ಮಾಡದಿರುವುದರಿಂದ ಅರ್ಜಿಯನ್ನು ತಿರಸ್ಕರಿಸಬೇಕು ಅಂತ ಇಡಿ ಪರ ವಕೀಲರು ವಾದ ಮಂಡಿಸಿದರು. ಬೆಂಗಳೂರಿನ ವಿಶೇಷ ನ್ಯಾಯಾಲಯ (Bangalore Special Court) ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದೆ.

ಸದ್ಯಕ್ಕೆ ಡಿಕೆಶಿ ಬಂಧನ ಮಾಡುವ ಉದ್ದೇಶ ಇಲ್ಲ: ಕೋರ್ಟ್‌ಗೆ ಇ.ಡಿ.

ಅಲ್ಲದೇ ಶಿವಕುಮಾರ್ ಅವರು ನಪ್ರತಿನಿಧಿಯಾಗಿದ್ದು, 7 ಬಾರಿ ಶಾಸಕರಾಗಿದ್ದಾರೆ. ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರೂ (KPCC President) ಕೂಡ ಹೌದು. ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿದೆ. ಹಾಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡಿ ಅಂಥ ಡಿಕೆ ಶಿವಕುಮಾರ್ ಪರ ವಕೀಲರು ಕೂಡ ವಾದ ಮಂಡಿಸಿದರು. ವಾದ-ಪ್ರತಿವಾದ ಕೇಳಿದ ನ್ಯಾ. ವಿಕಾಸ್ ಧುಲ್ (Vikas Dhul), ವಿದೇಶಕ್ಕೆ ತೆರಳಲು ಷರತ್ತು ಬದ್ಧ ಅನುಮತಿಯನ್ನು ನೀಡಿ ಆದೇಶಿಸಿದರು.

ಷರತ್ತುಬದ್ಧ ಅನುಮತಿ: ವಿದೇಶಕ್ಕೆ ತೆರಳುವ ಮುನ್ನ ಆರೋಪಿ ಡಿ.ಕೆ. ಶಿವಕುಮಾರ್ 5 ಲಕ್ಷ ರುಪಾಯಿ ಎಫ್‌ಡಿ ಇಡಬೇಕು, ದುಬೈನಲ್ಲಿ ಉಳಿದುಕೊಳ್ಳುವ ಸ್ಥಳ (Place), ಮೊಬೈಲ್ ಸಂಖ್ಯೆ (Mobile Number), ವಿಳಾಸ (Address), ಪ್ರವಾಸದ ವಿವರಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು. ವಿದೇಶದಲ್ಲಿರುವ ವೇಳೆ ಯಾವುದೇ ಆರೋಪಿಗಳನ್ನು ಸಹ ಸಂಪರ್ಕ (Contact) ಮಾಡಬಾರದು ಮತ್ತು ಸಾಕ್ಷ್ಯಗಳ ಮೇಲೆ ಪ್ರಭಾವಬೀರಬಾರದು, ವಿದೇಶಿ ಪ್ರವಾಸದಿಂದ ಭಾರತಕ್ಕೆ ಹಿಂದಿರುಗಿದ ಕೂಡಲೇ ಕೋರ್ಟಿಗೆ ಮಾಹಿತಿ ನೀಡಬೇಕು ಎಂಬ ಷರತ್ತುಗಳನ್ನು (conditions) ನ್ಯಾಯಾಲಯ ವಿಧಿಸಿದೆ.

ಮೂರು ವರ್ಷಗಳಿಂದ ಪ್ರವಾಸವಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‍‌ ಅವರು ಅಕ್ರಮ ಆಸ್ತಿ ಗಳಿಕೆ ಮತ್ತು ಅನಧಿಕೃತವಾಗಿ ಹಣ ವರ್ಗಾವಣೆ ಕುರಿತ ಪ್ರಕರಣಗಳ ಕುರಿತು 2019ರ ಸೆಪ್ಟಂಬರ್‍‌ ತಿಂಗಳಿಂದ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಎದುರಿಸುತ್ತಿದ್ದಾರೆ. ಜೊತೆಗೆ ಹಲವು ಪ್ರಕರಣಗಳು ಅವರ ಮೇಲಿದ್ದು, ಕಳೆದ ಮೂರು ವರ್ಷಗಳಿಂದ ಯಾವುದೇ ವಿದೇಶಗಳಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಅವರ ಉದ್ಯಮದ ಕುರಿತು ವಿದೇಶಗಳಿಗೆ ಹೋಗಿ ಬರಲು ಕೂಡ ಅನುಕೂಲ ಆಗುತ್ತಿಲ್ಲ ಎಂಬ ಕೊರಗಿತ್ತು. ಆದರೆ, ಇತ್ತೀಚೆಗೆ ತಮ್ಮ ವೈಯಕ್ತಿಕ ಕಾರ್ಯಕ್ರಮಗಳು ಮತ್ತು ಸಭೆಗಳಿಗೆ ಹಾಜರಾಗುವ ನಿಟ್ಟಿನಲ್ಲಿ ದುಬೈಗೆ ಹೋಗಲು ಅನುಮತಿ ಕೇಳಿದ್ದು, ಇಡಿ ನ್ಯಾಯಾಲಯ ಅನುಮತಿ ಕೊಟ್ಟಿದೆ.

Follow Us:
Download App:
  • android
  • ios