Asianet Suvarna News Asianet Suvarna News

ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ಭರ್ಜರಿ ಶಾಕ್,  ಮರ್ಯಾದೆ ಮೂರು ಕಾಸು!

ಕ್ರಿಮಿನಲ್ ಹಿನ್ನಲೆ ಆರೋಪಿಗಳಿಗೆ ಶಾಕ್ ಕೊಟ್ಟ ಚುನಾವಣಾ ಆಯೋಗ/ ಮೂರು ಸಾರಿ  ಜನರ ಮುಂದೆ ತಮ್ಮ ಅಪರಾಧ ಪ್ರಕರಣಗಳನ್ನು ಹೇಳಬೇಕು/ ತಮ್ಮನ್ನು ತಾವೇ ಜಾಹೀರಾತು ಮಾಡಿಕೊಳ್ಳಬೇಕು/ ಜನರ ಮನಸ್ಥಿತಿ ಮೇಲೆ ಪರಿಣಾಮ ಬೀರಲಿದೆಯಾ?

EC Directs candidates should publish details of criminal antecedents 3 times
Author
Bengaluru, First Published Sep 11, 2020, 8:26 PM IST

ನವದೆಹಲಿ (ಸೆ. 11) ಸದ್ದಿಲ್ಲದೆ ಚುನಾವಣಾ ಆಯೋಗ ಶಾಕ್ ನೀಡಿದೆ.  ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಆಘಾತ  ನೀಡಿದೆ.

ಚುನಾವಣೆಗೂ ಮುನ್ನ ಮೂರು ಬಾರಿ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಆರೋಪಗಳನ್ನು ಜನರ ಮುಂದೆ ಇಡಬೇಕಾಗುತ್ತದೆ. ನಾಮಪತ್ರ ಹಿಂಪಡೆಯುವ ನಾಲ್ಕು ದಿನಗಳ ಮುಂಚೆ ಇದಾದ ಮೇಲೆ ನಾಮಪತ್ರ ಹಿಂಪಡೆಯುವ  ಕೊನೆಯ ದಿನಕ್ಕೆ 5 ರಿಂದ 8 ದಿನಗಳ ನಡುವೆ ಮತ್ತು ಕೊನೆಯದಾಗಿ   ಬಹಿರಂಗ ಪ್ರಚಾರ ಅಂತ್ಯ ಮಾಡುವ  ಮುನ್ನ 9 ದಿನದಿಂದ ಹಿಡಿದು ಕೊನೆಯವರೆಗೆ ತಮ್ಮ ಪ್ರಕರಣ ತಾವೇ ಪ್ರಚಾರ ಮಾಡಿಕೊಳ್ಳಬೇಕಾಗುತ್ತದೆ.

ಕೊರೋನಾ ಕಾರಣ; ಚುನಾವಣಾ ನಿಯಮಗಳೆಲ್ಲ ಅದಲು ಬದಲು

ಸಹಜವಾಗಿಯೇ ಚುನಾವಣಾ ಆಯೋಗದ ಈ ಕ್ರಮ ಅಪರಾಧ ಲೋಕದಲ್ಲಿ ಕಾಣಿಸಿಕೊಂಡು ರಾಜಕಾರಣದ ಕಡೆ ಹೆಜ್ಜೆ ಇಡುತ್ತಿದ್ದವರಿಗೆ ಆಘಾತ ತಂದಿದೆ. ಮುಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಗಳು ತಮ್ಮ ಪ್ರಚಾರಕ್ಕಾಗಿ ಮಾಡುವ ಖರ್ಚಿನ ಮಿತಿಯನ್ನು ಶೇ.10ರಷ್ಟು ಹೆಚ್ಚಿಸಬೇಕೆಂಬ ಪ್ರಸ್ತಾವನೆಯೊಂದನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಕೇಂದ್ರ ಚುನಾವಣಾ ಆಯೋಗ ಸಲ್ಲಿಕೆ ಮಾಡಿತ್ತು.

ಬಿಹಾರ ವಿಧಾನಸಭೆ ಚುನಾವಣೆ ಎದುರಾಗಲಿದೆ. ಕರ್ನಾಟಕದ ಶಿರಾ, ಮಧ್ಯಪ್ರದೇಶದ ಸ್ಥಾನಗಳು ಸೇರಿದಂತೆ ದೇಶದ ಹಲವು ಕಡೆ ಬಾಕಿ ಇರುವ ಚುನಾವಣೆಯನ್ನು ಮುಗಿಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ. 

Follow Us:
Download App:
  • android
  • ios