ರಾಮನಗರ, (ಡಿ.12):  ಪ್ರಬಲರು ಅಂತಾ ಯಾರು ಇಲ್ಲ. ಜನ ಶಕ್ತಿ ತುಂಬಿ ಆಶೀರ್ವಾದ ಮಾಡಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್‌ಗೆ ಅಶ್ವಥ್ ನಾರಾಯಣ ಟಾಂಗ್ ಕೊಟ್ಟರು.

ಮಾಗಡಿಯಲ್ಲಿ ಮಾತನಾಡಿ ಅಶ್ವಥ್ ನಾರಾಯಣ, ಜನರ ವಿಶ್ವಾಸ ಪಡೆಯಲು ನಾವು ಕೆಲಸ ಮಾಡುತ್ತೇವೆ. ವಿಶ್ವಾಸ ಪಡೆಯಲು ನಾನಿದ್ದೀನಿ. ಒಂದು‌ ಕಾಲದಲ್ಲಿ ಬೇರೆಯವರಿಗೆ ಕೊಟ್ಟಿದ್ರು. ಆದರೆ ಈಗ ನಾವು ಅವರ ಮನೆ ಮಗನಾಗಿ ಕೆಲಸ ಮಾಡುತ್ತೇನೆ ಎಂದು ಪರೋಕ್ಷವಾಗಿ ಎಚ್‌ಡಿಕೆಗೆ ವಿರುದ್ಧ ಕಿಡಿಕಾರಿದರು.

ದೇವೇಗೌಡ್ರನ್ನ ಭೇಟಿ ಮಾಡಿದ KPCC ಅಧ್ಯಕ್ಷ ಆಕಾಂಕ್ಷಿ ನಡೆಗೆ ಕಾಂಗ್ರೆಸ್‌ ಆಕ್ರೋಶ

ರಾಜ್ಯ ಸಂಪುಟದಲ್ಲಿ ಸ್ಥಾನ ಪಲ್ಲಟವಾಗುವ ವಿಚಾರಕ್ಕೆ ಪ್ರಕ್ರಿಯಿಸಿದ ಅವರು, ರಾಜಕೀಯದಲ್ಲಿ ಸೇಫ್ ಮತ್ತು ರಿಸ್ಕ್ ಅಂತೇನು ಇಲ್ಲ. ಎಲ್ಲಾ ಮುಖ್ಯಮಂತ್ರಿಯವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು. 

ಇದೇ ವೇಳೆ ಹುಣಸೂರಲ್ಲಿ ವಿಶ್ವನಾಥ್ ಸೋಲಿಗೆ ಯೋಗೇಶ್ವರ್ ಕಾರಣ ಎನ್ನುವುದರ ಬಗ್ಗೆ ಮಾತನಾಡಿ,  ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಪ್ರಾಮಾಣಿಕವಾಗಿ ಹುಣಸೂರು ನಲ್ಲಿ ಕೆಲಸ ಮಾಡಿದ್ದಾರೆ. ವಿಶ್ವನಾಥ್ ಪರವಾಗಿ ಕೆಲಸ ಮಾಡಿದಕ್ಕೆ ನಾನು ಅಭಿನಂದಿಸುತ್ತೇನೆ. ಯೋಗೇಶ್ವರ್ ನಮ್ಮ ನಾಯಕರು ಮುಂದೆ ಅವರಿಗೆ ಒಳ್ಳೆಯದಾಗಲಿದೆ ಭವಿಷ್ಯ ನುಡಿದರು.