ಬೆಂಗಳೂರು, (ಸೆ.18): ಇಷ್ಟು ದಿನ ಸ್ಯಾಂಡಲ್‌ವುಡ್‌ನಲ್ಲಿ ಕಿಕ್ಕೇರಿಸಿದ್ದ ಡ್ರಗ್ಸ್ ಮಾಫಿಯಾ ಪ್ರಕರಣ ಇದೀಗ ರಾಜಕೀಯ ಕ್ಷೇತ್ರಕ್ಕೆ ದಾಪುಗಾಲಿಟ್ಟಿದೆ.

 ಡ್ರಗ್ಸ್​ ಕೇಸ್​ ಸಂಬಂಧ ಇಷ್ಟು ದಿನ ನಟ-ನಟಿಯರ ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ಇದೀಗ ಕಾಂಗ್ರೆಸ್​ನ ಮಾಜಿ ಶಾಸಕ ಆರ್​.ವಿ.ದೇವರಾಜ್​ ಪುತ್ರ ಆರ್​.ವಿ.ಯುವರಾಜ್​ಗೆ ನೋಟಿಸ್​ ಕೊಟ್ಟಿದ್ದಾರೆ. 

ಬೀಗರಾಗಲಿದ್ದಾರೆ ಬಿಜೆಪಿ ಸಂಸದ ಮೋಹನ್‌, ಕಾಂಗ್ರೆಸ್ಸಿಗ ಆರ್.ವಿ ದೇವರಾಜ್‌!

ಬಂಧಿತ ಆರೋಪಿಗಳ ಜೊತೆ ಲಿಂಕ್ ಹೊಂದಿದ್ದಾರೆ ಎನ್ನುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ಸಿಸಿಬಿ ಅಧಿಕಾರಿಗಳು  ಸುಧಾಮನಗರ ವಾರ್ಡ್​ನ ಕಾರ್ಪೋರೇಟರ್ ಆಗಿರುವ ಯುವರಾಜ್​ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ಲ್ಲಿ ತಿಳಿಸಿದ್ದಾರೆ.

ಯುವರಾಜ್ ಬಿಜೆಪಿ ಸಂಸದ ಪಿ.ಸಿ.ಮೋಹನ್​ರ ಭಾವಿ ಅಳಿಯ. ಅಂದ್ರೆ ಪಿ.ಸಿ.ಮೋಹನ್ ಅವರ ಪುತ್ರಿಯನ್ನು ಮದುವೆ ಮಾಡಿಕೊಳ್ಳಲಿದ್ದಾರೆ. ಈಗಾಗಲೇ ಎಂಗೇಜ್‌ಮೆಂಟ್‌ ಸಹ ಮುಗಿದಿದೆ. ಸಿಸಿಬಿ ನೋಟಿಸ್‌ ಹಿನ್ನೆಲೆಯಲ್ಲಿ ಇದೀಗ ಎರಡೂ ಕುಟುಂಬದಲ್ಲೂ ಆತಂಕ ಮೂಡಿಸಿದೆ.

ತಂದೆಯ ಪ್ರತಿಕ್ರಿಯೆ
ಪುತ್ರ ಯುವರಾಜ್‌ಗೆ ಸಿಸಿಬಿ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಆರ್‌.ವಿ ದೇವರಾಜ್ ಪ್ರತಿಕ್ರಿಯಿಸಿದ್ದು, ನನ್ನ ಮನಗನಿಗೆ ಸಿಸಿಬಿ ನೋಟಿಸ್ ನೀಡಿದೆ. 101% ಯುವಾಜ್ ಡ್ರಗ್ಸ್ ಅಡಿಕ್ಟ್ ಅಲ್ಲ. ನಾವು ಆ ರೀತಿ ಬೆಳೆಸಿಲ್ಲ. ಡ್ರಗ್ಸ್ ತಗೋಳೋದು ಇರಲಿ. ಸಿಗರೇಟ್ ಕೂಡ ಸೇದಲ್ಲ ಎಂದು ಹೇಳಿದರು.

ನನ್ನ ಹೊಟ್ಟೆಯಲ್ಲಿ ಹುಟ್ಟಿರೋದು ನನ್ನ ಅದೃಷ್ಟ. ಕೆಟ್ಟ ಹೆಸರು ತರಲಿಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ದೇವರಾಜ್ ಆರೋಪಿಸಿದರು.