ಲೋಕಸಭಾ ಚುನಾವಣಾ ಅಖಾಡಕ್ಕಿಳಿಯಲು ಸರ್ಕಾರಿ ಹುದ್ದೆಗೆ ಗುಡ್‌ಬೈ ಹೇಳಿದ ಸಂಸದ ಶ್ರೀನಿವಾಸ ಪ್ರಸಾದ್ ಅಳಿಯ!
ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದ ಕಾವೇರುತ್ತಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ವೈದ್ಯರೊಬ್ಬರು ಸರ್ಕಾರಿ ಹುದ್ದೆಗೆ ಗುಡ್‌ಬೈ ಹೇಳಿದ್ದಾರೆ. ಡಾ.ಎನ್.ಎಸ್. ಮೋಹನ್, ಸರ್ಕಾರಿ ಹುದ್ದೆ ತೊರೆದ ವೈದ್ಯರು. ಸಂಸದ ವಿ.ಶ್ರೀನಿವಾಸಪ್ರಸಾದ್ ಅಳಿಯನಾಗಿ ಡಾ.ಎನ್‌ಎಸ್ ಮೋಹನ್ ಬೆಂಗಳೂರು ಸಂಜಯ್‌ಗಾಂಧಿ ಆಸ್ಪತ್ರೆಯ ಖ್ಯಾತ ಬೆನ್ನುಹುರಿ ತಜ್ಞ ಹಾಗು ಪ್ರಾಧ್ಯಾಪಕರಾಗಿದ್ದರು.
ಚಾಮರಾಜನಗರ (ಜ.6): ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದ ಕಾವೇರುತ್ತಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ವೈದ್ಯರೊಬ್ಬರು ಸರ್ಕಾರಿ ಹುದ್ದೆಗೆ ಗುಡ್‌ಬೈ ಹೇಳಿದ್ದಾರೆ.
ಡಾ.ಎನ್.ಎಸ್. ಮೋಹನ್, ಸರ್ಕಾರಿ ಹುದ್ದೆ ತೊರೆದ ವೈದ್ಯರು. ಸಂಸದ ವಿ.ಶ್ರೀನಿವಾಸಪ್ರಸಾದ್ ಅಳಿಯನಾಗಿ ಡಾ.ಎನ್‌ಎಸ್ ಮೋಹನ್ ಬೆಂಗಳೂರು ಸಂಜಯ್‌ಗಾಂಧಿ ಆಸ್ಪತ್ರೆಯ ಖ್ಯಾತ ಬೆನ್ನುಹುರಿ ತಜ್ಞ ಹಾಗು ಪ್ರಾಧ್ಯಾಪಕರಾಗಿದ್ದರು. ಮುಂದಿನ ಲೋಕಸಭಾ ಚುನಾವಣೆಗೆ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಕಸರತ್ತು ನಡೆಸುತ್ತಿರುವ ಮೋಹನ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಯಾವುದೇ ಸರ್ಕಾರಿ ಹುದ್ದೆಯಲ್ಲಿರಬಾರದು ಈ ಹಿನ್ನೆಲೆ ಲಕ್ಷಾಂತರ ರೂಪಾಯಿ ವೇತನದ, ಇನ್ನೂ ಉನ್ನತ ಹುದ್ದೆಗೇರುವ ಅವಕಾಶವಿದ್ದ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ವಿಕಸಿತ ಭಾರತ್ ಯಾತ್ರೆಗೆ ಹೋಗದಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ? ಬಿಜೆಪಿ ಆರೋಪವೇನು?
ಕಳೆದ 15 ವರ್ಷಗಳಿಂದ ಹುದ್ದೆಯಲ್ಲಿದ್ದ ಡಾ ಮೋಹನ್. ಅಷ್ಟೊಂದು ಮಹತ್ವದ ಸರ್ಕಾರಿ ಹುದ್ದೆ ತೊರೆದಿರುವ ಇವರಿಗೆ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ನೀಡಿದೆಯಾ ಬಿಜೆಪಿ? ಆರ್‌ಎಸ್‌ಎಸ್ ಮುಖಂಡರೊಂದಿಗೆ ನೇರ ಸಂಪರ್ಕ ಡಾ ಮೋಹನ್ ಟಿಕೆಟ್ ಸಿಕ್ಕೇ ಸಿಗುತ್ತದೆಂಬ ವಿಶ್ವಾಸದಲ್ಲಿದ್ದಾರೆ. 'ವರಿಷ್ಠರು ನನಗೇ ಟಿಕೆಟ್ ಕೊಟ್ಟು ಗೆಲ್ಲಿಸುವ ಭರವಸೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.
ಸಂಕಷ್ಟಕ್ಕೆ ಸಿಲುಕಿದ್ದ ಶಬರಿಮಲೆ ಭಕ್ತರಿಗೆ ಆಶ್ರಯ; ಕೋಮು ಸೌಹಾರ್ದತೆಗೆ ಸಾಕ್ಷಿಯಾದ ತಿತಿಮತಿ ಜಾಮಾ ಮಸೀದಿ!
ಈಗಾಗಲೇ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿರುವ ಸಂಸದ ವಿ.ಶ್ರೀನಿವಾಸಪ್ರಸಾದ್. ಲೋಕಸಭಾ ಚುನಾವಣೆಯಲ್ಲಿ ಯಾರ ಪರವು ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ. ಇತ್ತ ಅಳಿಯ ಡಾ ಮೋಹನ್‌ಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಅಳಿಯನ ಪರವಾಗಿ ಪ್ರಚಾರಕ್ಕೆ ಇಳಿಯುತ್ತಾರಾ? ಈ ಹಿಂದೆ ನಂಜನಗೂಡು ಶಾಸಕರಾಗಿದ್ದ ಮೊದಲನೇ ಅಳಿಯ ಹರ್ಷವರ್ಧನ್. ಹರ್ಷವರ್ಧನ್ ಪರವಾಗಿಯೂ ಈ ಹಿಂದೆ ಲಾಭಿ ನಡೆಸಿದ್ದ ಸಂಸದರು. ಇದೀಗ ಎರಡನೇ ಅಳಿಯನ ಪರವಾಗಿ ಬ್ಯಾಟಿಂಗ್ ಮಾಡ್ತಾರಾ? ಒಟ್ಟಿನಲ್ಲಿ ಈ ಬಾರಿ ಚಾಮರಾಜನಗರ ಲೋಕಸಭಾ ಚುನಾವಣೆ ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯಲಿದ್ದು, ಅಳಿಯನಿಗೆ ಟಿಕೆಟ್ ಸಿಕ್ಕರೆ. ಸಂಸದ ಶ್ರೀನಿವಾಸ ಪ್ರಸಾದ ಅಳಿಯನ ಪರವಾಗಿ ಪ್ರಚಾರ ನಡೆಸುವುದು ಗ್ಯಾರೆಂಟಿ ಎನ್ನಲಾಗುತ್ತಿದೆ.