ಡಬಲ್ ಎಂಜಿನ್ ಸರ್ಕಾರ ನನಗೆ ಸಾಕಷ್ಟು ನೋವುಗಳನ್ನು ನೀಡಿದೆ. ಇದನ್ನು ಹೈಕಮಾಂಡ್ ಗಮನಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಈ ಮೂಲಕ ಪರೋಕ್ಷವಾಗಿ ನನಗೆ ಸಿಎಂ ಸ್ಥಾನ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು (ಮೇ 15 2023): ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ತಮ್ಮ ಪ್ರಯತ್ನಗಳನ್ನು ಸಡಿಲಿಸುವ ಹಾಗೆ ಕಾಣುತ್ತಿಲ್ಲ. ರಾಜ್ಯ ರಾಜಧಾನಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರು, ನಾನು ದೆಹಲಿಗೆ ಹೋಗಲ್ಲ. ನನ್ನ ಹುಟ್ಟುಹಬ್ಬದ ಹಿನ್ನೆಲೆ ದೇವಸ್ಥಾನಕ್ಕೆ ಹೋಗ್ತಿದ್ದೇನೆ ಎಂದಿದ್ದಾರೆ. ಅಲ್ಲದೆ, ನಿನ್ನೆಯ ಸಭೆಯಲ್ಲಿ ಒನ್ ಲೈನ್ ಅಜೆಂಡಾವನ್ನು ತೆಗೆದುಕೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಡಬಲ್ ಎಂಜಿನ್ ಸರ್ಕಾರ ನನಗೆ ಸಾಕಷ್ಟು ನೋವುಗಳನ್ನು ನೀಡಿದೆ. ಇದನ್ನು ಹೈಕಮಾಂಡ್ ಗಮನಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಈ ಮೂಲಕ ಪರೋಕ್ಷವಾಗಿ ನನಗೆ ಸಿಎಂ ಸ್ಥಾನ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದರೂ, ಒನ್ ಲೈನ್ ನಿರ್ಣಯ ಪಾಸ್ ಮಾಡಿದ್ದು, ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ, ನನ್ನ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.
ಇದನ್ನು ಓದಿ: ‘ಕೈ’ ಹೈಕಮಾಂಡ್ ಮುಂದೆ ಸಿಎಂ ಆಯ್ಕೆ ಸವಾಲು: ಮೂವರು ವೀಕ್ಷಕರನ್ನು ನೇಮಿಸಿದ ಎಐಸಿಸಿ
ಇನ್ನು, ನಾನು ದೆಹಲಿಗೆ ಹೋಗುವ ತೀರ್ಮಾನ ಮಾಡಿಲ್ಲ. ನನ್ನ ಬೆಂಬಲಿಗರು ಬೇರೆ ಬೇರೆ ಕಡೆಯಿಂದ ಬಂದಿದ್ದಾರೆ. ಹಾಗೆ, ಇವತ್ತು ನನ್ನ ಹುಟ್ಟು ಹಬ್ಬ ಹಿನ್ನೆಲೆ ಪೂಜೆ ಇದೆ ಎಂದೂ ಹೇಳಿದ್ದಾರೆ.
ಕಾಂಗ್ರೆಸ್ ಸಂಪ್ರದಾಯದಂತೆ ಶಾಸಕರು ತಮ್ಮ ಅಭಿಪ್ರಾಯ ನೀಡಿದ್ದಾರೆ, ದೆಹಲಿಗೆ ಹೋಗಬೇಕು ಅಂತ ಇದೆ. ಆದರೆ ಇನ್ನೂ ನಿರ್ಧಾರ ಮಾಡಿಲ್ಲ, ಹೈಕಮಾಂಡ್ ಗಿಫ್ಟ್ ಕೊಡುತ್ತದೋ ಬಿಡುತ್ತದೋ. ರಾಜ್ಯದ ಜನತೆ ನನ್ನ ಮೇಲೆ ವಿಶ್ವಾಸ ಇಟ್ಟು ನನ್ನ ಅಧ್ಯಕ್ಷತೆಯಲ್ಲಿ ಮ್ಯಾಸಿವ್ ಮೆಜಾರಿಟಿ ಬಂದಿದೆ. ಎಲ್ಲ ಕಷ್ಟ, ಕಿರುಕುಳದ ನಡುವೆ ಹಾಗೂ ಡಬಲ್ ಎಂಜಿನ್ ಫೋರ್ಸ್ ನಡುವೆಯೂ ಜನತೆ 135 ಸೀಟುಗಳ ಗಿಫ್ಟ್ ಕೊಟ್ಟಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಏನು ಬೇಕು?. ಇದೇ ನನಗೆ ನನ್ನ ಬರ್ತ್ ಡೇ ಗಿಫ್ಟ್ ಎಂದೂ ಕೆಪಿಸಿಸಿ ಅಧ್ಯಕ್ಷರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇಂದು ಕಾಂಗ್ರೆಸ್ ಶಾಸಕಾಂಗ ಸಭೆ: ಸಿಎಂ ಆಗಲು ಡಿಕೆಶಿ - ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಹೀಗಿದೆ..
ಮುಖ್ಯಮಂತ್ರಿ ಆಗಲು ಹೊರಟ ಇಬ್ಬರಿಗೂ ಶಾಕ್
ರಾಜ್ಯದ ಮುಂದಿನ ಸಿಎಂ ಯಾರಾಗ್ಬೇಕು ಎಂದು ಕಾಂಗ್ರೆಸ್ ಶಾಸಕರ ಅಭಿಪ್ರಾಯ ಪಡೆಯಲಾಗಿದ್ದು, ಆದರೆ ಶಾಸಕರ ನಡೆಯಿಂದ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಶಾಕ್ ಆಗಿದೆ. ಏಕೆಂದರೆ, ಯಾರ ಪರವಾಗಿಯೂ ಮತ ಹಾಕದ ಶೇಕಡಾ 50% ಹೆಚ್ಚು ಶಾಸಕರು Left to Highcommand ಅಂತ ಬರೆದಿದ್ದು, ಈ ಮೂಲಕ ಅನಗತ್ಯ ಗೊಂದಲ ಬೇಡ ಅನ್ನೋ ನಿಲುವಿಗೆ ಬಂದಿದ್ದಾರೆ. ಅಲ್ಲದೆ, ಹೈಕಮಾಂಡ್ ಹೇಳಿದಂತೆ ಆಗಲಿ ಎಂದೂ ಹೇಳಿದ್ದಾರೆ. ಇನ್ನೊಂದೆಡೆ, ಎಐಸಿಸಿ ವೀಕ್ಷಕರು ಶಾಸಕರ ಅಭಿಪ್ರಾಯ ಪಡೆದು ದೆಹಲಿಗೆ ಹೋಗಿದ್ದಾರೆ.
ಇದನ್ನೂ ಓದಿ: Karnataka Assembly Election 2023: ಜನರ ಆಶೋತ್ತರಗಳನ್ನು ಕಾಂಗ್ರೆಸ್ ಈಡೇರಿಸಲಿಎಂದ ಮೋದಿ
