ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ 'ಬಾಂಬೆ ಬಾಯ್ಸ್' ಅನ್ನಬೇಡಿ: ಬಿ.ಎಲ್‌.ಸಂತೋಷ್‌

ಹಿಂದಿನ ಸರ್ಕಾರ ರಚಿಸುವ ವೇಳೆ ಕಾಂಗ್ರೆಸ್‌ನಿಂದ ವಲಸೆ ಬಂದ ಶಾಸಕರಿಗೆ ‘ಬಾಂಬೆ ಬಾಯ್ಸ್’ ಎಂಬುದಾಗಿ ಪಕ್ಷದ ಯಾರೊಬ್ಬರೂ ಹೇಳಬಾರದು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ. 
 

Dont call those who migrated from Congress Bombay Boys Says BL Santosh gvd

ಬೆಂಗಳೂರು (ಸೆ.01): ಹಿಂದಿನ ಸರ್ಕಾರ ರಚಿಸುವ ವೇಳೆ ಕಾಂಗ್ರೆಸ್‌ನಿಂದ ವಲಸೆ ಬಂದ ಶಾಸಕರಿಗೆ ‘ಬಾಂಬೆ ಬಾಯ್ಸ್’ ಎಂಬುದಾಗಿ ಪಕ್ಷದ ಯಾರೊಬ್ಬರೂ ಹೇಳಬಾರದು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್‌ನಿಂದ ವಲಸೆ ಬಂದ ಶಾಸಕರ ಪೈಕಿ ಕೆಲವರು ಮತ್ತೆ ವಾಪಸ್‌ ಆ ಪಕ್ಷಕ್ಕೆ ತೆರಳುತ್ತಾರೆ ಎಂಬ ವದಂತಿಗಳ ನಡುವೆಯೇ ಸಂತೋಷ್‌ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಮತದಾರರ ಚೇತನ ಅಭಿಯಾನದ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವರು ನಮ್ಮವರೇ ಬಾಂಬೆ ಬಾಯ್ಸ್‌ ಎಂದು ಅವರನ್ನು ಕರೆಯುತ್ತಾರೆ. ಅದು ಆ ಶಾಸಕರಿಗೆ ನೋವು ಉಂಟು ಮಾಡಿದೆ. ಪ್ರತಿಪಕ್ಷದ ಮುಖಂಡರು ಏನಾದರೂ ಹೇಳಿಕೊಳ್ಳಲಿ. ಆದರೆ, ನಮ್ಮವರೇ ಆ ರೀತಿ ಕರೆಯುವುದು ಸರಿಯಲ್ಲ. ಯಾರು ಹಾಗೆ ಹೇಳಿದ್ದಾರೆ ಎಂಬುದೂ ನನಗೆ ಗೊತ್ತಿದೆ ಎಂದರು ಎನ್ನಲಾಗಿದೆ.

ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ: ವಿಮಾನ ಹತ್ತಿ ಸಂತಸಪಟ್ಟ ಬಿಎಸ್​ವೈ, ಪಾಟೀಲ್​, ಈಶ್ವರಪ್ಪ

ಅದೇ ರೀತಿ ಬಂದವರು ವಾಪಸ್‌ ಹೋದರೆ ಹೋಗಲಿ ಎಂಬರ್ಥದಲ್ಲಿ ಕೆಲವರು ಮಾತನಾಡುತ್ತಿದ್ದಾರೆ. ಹಾಗೆ ಹೇಳುವುದನ್ನು ಒಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ. ಅವರು ಆಗ ನಮ್ಮ ಪಕ್ಷಕ್ಕೆ ಬಂದಿದ್ದರಿಂದಲೇ ಸರ್ಕಾರ ರಚಿಸಲು ಸಾಧ್ಯವಾಯಿತು ಎಂಬುದನ್ನು ಮರೆಯಬಾರದು ಎಂದು ಸಂತೋಷ್‌ ತೀಕ್ಷ್ಣವಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಕರೆಂಟ್ ಕಂಬವೇರಿದ್ದ ಎಲೆಕ್ಟ್ರಿಶಿಯನ್‌ ಸಾವು, ರುಂಡ -ಮುಂಡ ಬೇರ್ಪಟ್ಟು ಘೋರ ದುರಂತ: ಕುಟುಂಬಸ್ಥರ ಅಕ್ರಂದನ

ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನ ನೇಮಕ ಆಗುವಾಗ ಆಗುತ್ತೆ: ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ನೇಮಕ ಆಗುವಾಗ ಆಗುತ್ತದೆ ಎಂದು ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಈ ಎರಡೂ ಸ್ಥಾನಗಳಿಗೆ ಆಯ್ಕೆ ತಡವಾಗಿದೆ ನಿಜ. ಇಷ್ಟರೊಳಗಾಗಿ ಆಗಬೇಕಿತ್ತು. ಆದರೆ, ಮಾಧ್ಯಮದವರ ಒತ್ತಡಕ್ಕೆ ಮಾಡುವುದಕ್ಕೆ ಆಗುವುದಿಲ್ಲ. ಪ್ರತಿಪಕ್ಷ ನಾಯಕ ಇಲ್ಲದೇ ಇದ್ದರೂ ಎಲ್ಲ ಶಾಸಕರೂ ಪ್ರತಿಪಕ್ಷದ ನಾಯಕನ ರೀತಿಯಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದರು.

Latest Videos
Follow Us:
Download App:
  • android
  • ios