ದತ್ತಾ ಜೆಡಿಎಸ್ ಸೇರ್ಪಡೆಯ ಬಗ್ಗೆ ಗೊತ್ತಿಲ್ಲ: ಕುಮಾರಸ್ವಾಮಿ
ದತ್ತಾ ಅವರು ದೊಡ್ಡವರು, ಅವರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರ ವಿಚಾರದಲ್ಲಿ ದೇವೇಗೌಡರು, ರೇವಣ್ಣ ನಿರ್ಧಾರ ಮಾಡುತ್ತಾರೆ ಎಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಕಲಬುರಗಿ/ಹಾವೇರಿ(ಏ.14): ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಇದೀಗ ಮಾಜಿ ಸಚಿವ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಪಕ್ಷಕ್ಕೆ ವಾಪಸಾಗುತ್ತಿರುವ ಮಾಜಿ ಸಚಿವ ದತ್ತಾ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.
ದತ್ತಾ ಅವರು ದೊಡ್ಡವರು, ಅವರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರ ವಿಚಾರದಲ್ಲಿ ದೇವೇಗೌಡರು, ರೇವಣ್ಣ ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ.
ಅಂದು ಭವಾನಿ ರೇವಣ್ಣಗಾಗಿ ಇಂದು ವೈಎಸ್‌ವಿ ದತ್ತಾಗಾಗಿ, ದಳಪತಿಗಳ ನಡುವೆ ಕಿಚ್ಚು!
ದತ್ತಾ ಪಕ್ಷ ಸೇರ್ಪಡೆ ಕುರಿತು ಕಲಬುರಗಿ ಹಾಗೂ ಹಾವೇರಿಯಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ದತ್ತಾ ಅವರ ಜೆಡಿಎಸ್ ಸೇರ್ಪಡೆ ವಿಚಾರ ದೇವೇಗೌಡರಿಗೆ ಬಿಟ್ಟದ್ದು, ಶಾಸಕರಾಗಿದ್ದಾಗಲೂ ತಮ್ಮ ಜತೆ ಸಂಪರ್ಕದಲ್ಲಿರಲಿಲ್ಲ. ದತ್ತಾಗೆ ನನ್ನ ಅವಶ್ಯಕತೆ ಇಲ್ಲ. ಅವರು ನನಗೆ ಬೇಕಾಗಿಲ್ಲ. ರೇವಣ್ಣ ಮತ್ತು ಪ್ರಜ್ವಲ್ ಅವರು ಅವರ ಜತೆಗೆ ಸಂಪರ್ಕದಲ್ಲಿದ್ದಾರೆ. ಕಡೂರು ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಬರುವುದರಿಂದ ದತ್ತಾ ಅವರ ಮನೆಗೆ ಭೇಟಿ ನೀಡಿದ್ದಾರೆ ಎಂದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.