*  ನಮ್ಮ ಇಬ್ಬರು ಅ​ಧಿಕೃತ ಅಭ್ಯರ್ಥಿಗಳು ಗೆದ್ದ ನಂತರವೂ ನಮ್ಮ ಬಳಿ 32 ಮತಗಳು ಉಳಿಯುತ್ತದೆ*  ಕಾಂಗ್ರೆಸ್‌ನಲ್ಲಿ 19ರಿಂದ 20 ಮತಗಳು ಉಳಿಯುತ್ತದೆ*  ಜನತಾದಳದಿಂದ ಎಲ್ಲರೂ ವೋಟ್‌ ಹಾಕಿದರೆ 32 ವೋಟ್‌ ಉಳಿಯುತ್ತದೆ 

ಹಾಸನ(ಜೂ.02): ರಾಜ್ಯಸಭೆಗೆ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೂರು ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಮ್ಮ ಇಬ್ಬರು ಅ​ಧಿಕೃತ ಅಭ್ಯರ್ಥಿಗಳು ಗೆದ್ದ ನಂತರವೂ ನಮ್ಮ ಬಳಿ 32 ಮತಗಳು ಉಳಿಯುತ್ತದೆ. ಕಾಂಗ್ರೆಸ್‌ನಲ್ಲಿ 19ರಿಂದ 20 ಮತಗಳು ಉಳಿಯುತ್ತದೆ. ಜನತಾದಳದಿಂದ ಎಲ್ಲರೂ ವೋಟ್‌ ಹಾಕಿದರೆ 32 ವೋಟ್‌ ಉಳಿಯುತ್ತದೆ. ರಾಜಕಾರಣದಲ್ಲಿ ಕೆಲವೊಮ್ಮೆ ಅಧಿಕೃತ ಅಭ್ಯರ್ಥಿಗಳು ಸೋತಿರುವುದು, ಬಂಡಾಯ ಅಭ್ಯರ್ಥಿಗಳು ಗೆದ್ದಿರುವುದು ಎಲ್ಲಾ ನೋಡಿದ್ದೇವೆ. ರಣನೀತಿಯನ್ನು ಹೇಳಲು ಆಗುವುದಿಲ್ಲ. ನಮ್ಮ ಪಕ್ಷದ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಹೇಗೆ ಏನು ಅಂತ ಕೇಳಬೇಡಿ ಎಂದು ಮಾರ್ಮಿಕಾಗಿ ನುಡಿದರು.

ಸೋನಿಯಾ ಮೂಲ ಕೇಳೋ ಧೈರ್ಯ ಸಿದ್ದುಗೆ ಇದ್ಯಾ?: ಸಿ.ಟಿ.ರವಿ

ಬಿಜೆಪಿಗೆ ಬೇರೆ ಪಕ್ಷದ ಮತ ಬೇಡ, 3 ಮಂದಿಯೂ ಗೆಲ್ತಾರೆ: ಬಿಎಸ್‌ವೈ

ಬೆಂಗಳೂರು: ರಾಜ್ಯಸಭೆಯಲ್ಲಿ ನಮ್ಮ ಮೂರು ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ. ನಮಗೆ ಯಾರ ಮತವೂ ಬೇಡ. ನಮ್ಮ ಮತ ಒಂದೇ ಸಾಕು. ನಾವು ಚುನಾವಣೆ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ರಾಜ್ಯಸಭೆಗೆ ಮೂವರು ಅಭ್ಯರ್ಥಿಗಳನ್ನು ಹಾಕಿದ್ದೇವೆ. ನಮ್ಮ ಬಳಿ 122 ಮತಗಳಿವೆ. ಹೀಗಾಗಿ ಬೇರೆಯವರ ಸಹಾಯವಿಲ್ಲದೆ ನಮ್ಮ ಪಕ್ಷದ ಮೂರೂ ಅಭ್ಯರ್ಥಿಗಳು ನೂರಕ್ಕೆ ನೂರು ಗೆಲ್ಲುತ್ತಾರೆ ಎಂದು ಹೇಳಿದರು. ವಿವರಣೆ ನೀಡಲು ನಿರಾಕರಿಸಿದ ಅವರು, ಲೆಹರ್‌ ಸಿಂಗ್‌ ಸೇರಿ ಎಲ್ಲರೂ ಗೆಲ್ಲುತ್ತಾರೆ. ನಮ್ಮ ಮತಗಳಲ್ಲೇ ಮೂರೂ ಅಭ್ಯರ್ಥಿಗಳು ಗೆಲ್ಲಲಿದ್ದಾರೆ, ನೋಡುತ್ತಿರಿ ಎಂದರು.