Asianet Suvarna News Asianet Suvarna News

ಡಿ.ಕೆ.ಸುರೇಶ್‌ ದೇಶದ್ರೋಹಿ: ಅಪ್ಪಚ್ಚು ರಂಜನ್‌ ಆಕ್ರೋಶ

ಯಾರೂ ಇದುವರೆಗೆ ಪ್ರತ್ಯೇಕ ದೇಶ ಕೊಡಿ ಎಂದು ಕೇಳಲಿಲ್ಲ. ಆದರೆ ಡಿ.ಕೆ. ಸುರೇಶ್ ಅವರು ಪ್ರಚಾರಕ್ಕಾಗಿ ಅವರ ಮಾತಿನ ಚಪಲಕ್ಕಾಗಿ ಈ ರೀತಿ ಹೇಳಿರಬಹುದು. ಅವರನ್ನು ದೇಶದಿಂದ ಅರಬ್ ದೇಶಗಳಿಗೆ ಕಳುಹಿಸಲಿ ಎಂದು ಒತ್ತಾಯಿಸಿದ ಅಪ್ಪಚ್ಚು ರಂಜನ್ 

DK Suresh is a traitor Says BJP Former MLA Appachu Ranjan grg
Author
First Published Feb 3, 2024, 11:24 PM IST

ಮಡಿಕೇರಿ(ಫೆ.03):  ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎನ್ನುವ ಸಂಸದ ಡಿ.ಕೆ. ಸುರೇಶ್ ಅವರು ದೇಶ ದ್ರೋಹಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ದೇಶ ದ್ರೋಹಿ ಎಂದು ದೇಶದಿಂದ ಹೊರಗಟ್ಟಿ ಎಂದು ಮಾಜಿ ಸಚಿವ ಮಡಿಕೇರಿಯ ಮಾಜಿ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕಾವೇರಿ ಹಾಲ್ ನಲ್ಲಿ ನಡೆದ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಸಿದ್ದರಾಮಯ್ಯನವರು ಏನೂ ಕಡಿದು ಕಟ್ಟೆಹಾಕಿಲ್ಲ: ಸಂಸದ ಪ್ರತಾಪ್ ಸಿಂಹ

ಯಾರೂ ಇದುವರೆಗೆ ಪ್ರತ್ಯೇಕ ದೇಶ ಕೊಡಿ ಎಂದು ಕೇಳಲಿಲ್ಲ. ಆದರೆ ಡಿ.ಕೆ. ಸುರೇಶ್ ಅವರು ಪ್ರಚಾರಕ್ಕಾಗಿ ಅವರ ಮಾತಿನ ಚಪಲಕ್ಕಾಗಿ ಈ ರೀತಿ ಹೇಳಿರಬಹುದು. ಅವರನ್ನು ದೇಶದಿಂದ ಅರಬ್ ದೇಶಗಳಿಗೆ ಕಳುಹಿಸಲಿ ಎಂದು ಅಪ್ಪಚ್ಚು ರಂಜನ್ ಒತ್ತಾಯಿಸಿದರು.

Follow Us:
Download App:
  • android
  • ios