ಬೆಂಗಳೂರು, (ಫೆ.07): ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಕನಕಗುರುಪೀಠ ಶ್ರೀ ಕ್ಷೇತ್ರ ಕಾಗಿನೆಲೆ ಇವರ ನೇತೃತ್ವದಲ್ಲಿ ಕುರುಬರಿಗೆ ಎಸ್‌ಟಿ ಮೀಸಲಾತಿ ಪಾದಯಾತ್ರೆ ಸಮಾರೋಪ ಸಮಾರಂಭ ಅದ್ಧೂರಿಯಾಗಿ ನಡೆಯಿತು.

ಕಾಗಿನೆಲೆಯಿಂದ ಸುಮಾರು 21 ದಿನಗಳ ಪಾದಯಾತ್ರೆಯ ಅಂತಿಮ ಸಮಾವೇಶ ಇಂದು (ಭಾನುವಾರ) ಬೆಂಗಳೂರಿನ ಮಾದವರದಲ್ಲಿ ಮುಕ್ತಾಯಗೊಂಡಿದ್ದು, ಸುಮಾರ್ 10 ಲಕ್ಷ ಕುರುಬರು ಸೇರಿ ಶಕ್ತಿ ಪ್ರದರ್ಶನ ಮಾಡಿದರು.

ಕುರುಬರ ರಣಕಹಳೆಯಲ್ಲಿ ಗುಡುಗಿದ ಸಚಿವ ಈಶ್ವರಪ್ಪ

ಇನ್ನು ಈ ಬಗ್ಗೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ.. ಮೀಸಲಾತಿ ಬಗ್ಗೆ ನಾನು ಮಾತನಾಡಲ್ಲ, ಆದ್ರೆ ಸ್ವತಃ ಸರ್ಕಾರದ ಸಚಿವರೇ ಸಮಾವೇಶ ಮಾಡುತ್ತಿರುವುದು ಕೇಳಿ ನನಗೆ ಶಾಕ್ ಆಗಿದೆ ಎಂದರು.

 ಇವರ ಹತ್ರ ಪೆನ್ನಿದೆ, ಪೇಪರ್ ಇದೆ.. ಇವರು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ..? ಎಂದು ಸಚಿವ ಈಶ್ವರಪ್ಪಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು.

ಇನ್ನು ಯೂತ್ ಕಾಂಗ್ರೆಸ್ ಚುನಾವಣೆ ಬಗ್ಗೆ ಮಾತನಾಡಿದ ಡಿಕೆಶಿ, ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಸೋತವರು ಗೆದ್ದವರು ಎಲ್ಲ ನಮ್ಮವರೇ. ಸೋತವರು ಪಕ್ಷಕ್ಕೆ ದುಡಿಯಬೇಕು, ಗೆದ್ದವರೂ ಕೆಲಸ ಮಾಡಬೇಕು. ಎಲ್ಲ ಯುವ ಕಾಂಗ್ರೆಸ್ ಕಾರ್ಯಕರ್ತರೂ ನಮ್ಮವರೇ.. ಹೈಕಮಾಂಡ್ ನನಗೆ ಏನು ಸೂಚನೆ ಕೊಡುತ್ತದೋ ಅದನ್ನು ಪಾಲನೆ ಮಾಡ್ತೇವೆ. ಸೋತವರೂ ಕೂಡ ಅವರಿಗೆ ಪಕ್ಷ ಏನಾದ್ರೂ ಜವಾಬ್ದಾರಿ ಕೊಡಬಹುದು ಎಂದರು.