Asianet Suvarna News Asianet Suvarna News

ರಾಜ್ಯದಲ್ಲಿ 3ನೇ ಸಿಎಂ: ಬಿಜೆಪಿ ಮುಖಂಡರೇ ಹೇಳಿಕೆ ಕೊಟ್ಟಿದ್ದು, ಡಿಕೆಶಿ

ಮುಂಬ​ರುವ ಚು​ನಾ​ವ​ಣೆ​ಯಲ್ಲಿ ಕಾಂಗ್ರೆಸ್‌ 136 ಕ್ಷೇ​ತ್ರ​ಗ​ಳಲ್ಲಿ ಗೆಲುವು ಸಾಧಿಸಲಿದೆ: ಡಿ.ಕೆ. ಶಿವಕುಮಾರ್‌

DK Shivakumar Talks Over CM Change in Karnataka grg
Author
Bengaluru, First Published Aug 11, 2022, 1:43 PM IST

ಮದ್ದೂರು(ಆ.12): ಮು​ಖ್ಯ​ಮಂತ್ರಿ ಬದಲಾವಣೆಯಾಗುತ್ತಾರೆಂದು ನಾವು ಹೇಳಿದ್ದಲ್ಲ. ಬಿಜೆಪಿಯ ಹಲವು ಮುಖಂಡರೇ ಆ ಬಗ್ಗೆ ಹೇಳಿಕೆ ಕೊಟ್ಟಿದ್ದರು ಎಂದು ಕೆ​ಪಿ​ಸಿಸಿ ಅ​ಧ್ಯಕ್ಷ ಡಿ.ಕೆ. ಶಿ​ವ​ಕು​ಮಾರ್‌ ಬಿ​ಜೆ​ಪಿ ಮು​ಖಂಡ​ರಿಗೆ ತಿ​ರು​ಗೇಟು ನೀ​ಡಿದರು. ಪ​ಟ್ಟ​ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿ​ಜೆ​ಪಿಯ ಹ​ಲವು ಮು​ಖಂಡರ ಹೇಳಿಕೆಯನ್ನಾಧರಿಸಿ ಮೂ​ರನೇ ಸಿಎಂ ಬ​ರು​ತ್ತಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾ​ಡಿದೆ. ಇಂತ​ಹ ಗೊಂದಲ ನ​ಮ್ಮಲ್ಲಿ ಇಲ್ಲ. ಎಲ್ಲ ಗೊಂದ​ಲ​ಗಳೂ ಮು​ಗಿ​ದಿವೆ ಎಂದು ತಿ​ಳಿ​ಸಿ​ದರು.

136 ಕ್ಷೇ​ತ್ರ​ದಲ್ಲಿ ಕಾಂಗ್ರೆಸ್‌ ಗೆ​ಲುವು: 

ಮುಂಬ​ರುವ ಚು​ನಾ​ವ​ಣೆ​ಯಲ್ಲಿ ಕಾಂಗ್ರೆಸ್‌ 136 ಕ್ಷೇ​ತ್ರ​ಗ​ಳಲ್ಲಿ ಗೆಲುವು ಸಾಧಿಸಲಿದೆ. ಈ​ಗಾ​ಗಲೇ ಎಲ್ಲಾ ಕ್ಷೇತ್ರಗಳಲ್ಲಿ ಸರ್ವೆ ಮಾ​ಡಿ​ಸಿ​ದ್ದೇನೆ. ಮ​ದ್ದೂರು, ಮ​ಳ​ವಳ್ಳಿ, ಮಂಡ್ಯ, ನಾ​ಗ​ಮಂಗಲ, ಶ್ರೀ​ರಂಗ​ಪ​ಟ್ಟಣ ಕ್ಷೇ​ತ್ರ​ಗ​ಳಲ್ಲಿ ಕಾಂಗ್ರೆಸ್‌ ಅ​ಭ್ಯರ್ಥಿಗಳು ಗೆಲ್ಲಲಿದ್ದಾರೆ. ಉ​ಳಿದ ಕ್ಷೇ​ತ್ರ​ಗ​ಳಲ್ಲಿ ಅ​ಭ್ಯರ್ಥಿಗಳ ಆಯ್ಕೆ ವಿ​ಚಾರ ಚರ್ಚೆ ಮಾ​ಡು​ತ್ತಿ​ದ್ದೇವೆ ಎಂದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ: ಮೋದಿಗೆ ಸಂಸಾರದ ನಿರ್ವಹಣೆ ಗೊತ್ತಿಲ್ಲ, ರಮೇಶ್‌ ಕುಮಾರ್‌

ಹಣ ಪ​ಡೆದು ಧ್ವಜ ಹಂಚಿಕೆ: 

ಕಾಂಗ್ರೆ​ಸ್ಸಿ​ಗರು ಅ​ಮೃತ ಮ​ಹೋ​ತ್ಸ​ವದ ಪಾ​ದ​ಯಾತ್ರೆ ಘೋ​ಷಣೆ ಮಾ​ಡಿದ ನಂತ​ರ ಬಿ​ಜೆಪಿ ನೇ​ತೃ​ತ್ವದ ಸರ್ಕಾರ ಹರ್‌ ಘರ್‌ ತಿ​ರಂಗ ಅ​ಭಿ​ಯಾನ ಘೋ​ಷಣೆ ಮಾ​ಡಿದೆ. ಪ್ರತಿ ಮನೆ ಮೇಲೂ ರಾಷ್ಟ್ರ ಧ್ವ​ಜ​ವನ್ನು ಹಾ​ರಿ​ಸು​ವಂತೆ ಸೂ​ಚಿ​ಸಿದೆ. ಆ​ದರೆ, ಅಂಗ​ಡಿ​ಗಳು ಮತ್ತು ಸೊ​ಸೈ​ಟಿ​ಗ​ಳಲ್ಲಿ 20 ರು. ಹಣ ಕೊಟ್ಟು ಧ್ವಜ ಖ​ರೀ​ದಿ ಮಾ​ಡು​ವಂತೆ ತಿ​ಳಿ​ಸಿ​ರು​ವುದು ನಾ​ಚಿ​ಕೆ​ಗೇ​ಡಿನ ಸಂಗತಿ ಎಂದು ದೂ​ರಿ​ದರು.

ನಮ್ಮ ಸರ್ಕಾರದ ಅ​ವ​ಧಿ​ಯಲ್ಲಿ ಉ​ಚಿ​ತ​ವಾಗಿ ಪ​ಡಿ​ತರ ಅ​ಕ್ಕಿ ಕೊಟ್ಟಿದ್ದೆವು. ಒಂದು ಕೆಜಿ ಅಕ್ಕಿ 22 ರಿಂದ 23 ರು. ಆ​ಗಿತ್ತು. ಒಂದು ಕೆಜಿ ಅ​ಕ್ಕಿ ದ​ರದಷ್ಟು ಬೆಲೆ ರಾಷ್ಟ್ರ ಧ್ವ​ಜಕ್ಕೆ. ಇ​ದನ್ನು ಉ​ಚಿ​ತ​ವಾ​ಗಿಯೇ ಕೊ​ಡ​ಬ​ಹು​ದಿತ್ತು. ಧ್ವ​ಜ​ವನ್ನೂ ಮಾ​ರಾಟ ಮಾ​ಡುವ ಮೂ​ಲಕ ಹಣ ಮಾ​ಡಿ​ಕೊ​ಳ್ಳು​ವ ದಂಧೆಗೆ ಬಿ​ಜೆಪಿ ಇ​ಳಿ​ದಿದೆ ಎಂದು ಟೀ​ಕಿ​ಸಿ​ದರು. ನಾನು ಈ​ಗಾ​ಗಲೇ ಒಂದೂ​ವರೆ ಲಕ್ಷ ಧ್ವ​ಜಕ್ಕೆ ಆರ್ಡರ್‌ ಕೊ​ಟ್ಟಿ​ದ್ದೇನೆ. ಖಾದಿ ಮಂಡಳಿ ಸೇ​ರಿ​ದಂತೆ ವಿ​ವಿಧ ಸಂಘ-ಸಂಸ್ಥೆ​ಗ​ಳು ಧ್ವ​ಜ​ ಖ​ರೀ​ದಿಗೆ ಮುಂದಾ​ಗಿದ್ದು, ಶೀಘ್ರ ಹಂಚಿಕೆ ಮಾ​ಡ​ಲಾ​ಗು​ವುದು ಎಂದು ಹೇ​ಳಿ​ದರು.

ಸ್ವಾತಂತ್ರ್ಯದ ಮೇಲೆ ನಮ್ಮ ಹಕ್ಕು ಹೆಚ್ಚು: ಡಿಕೆಶಿ

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್‌. ಹಾಗಾಗಿ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಗೀತೆ ಮೇಲೆ ನಮಗೆ ಹಕ್ಕು ಜಾಸ್ತಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಪ​ಟ್ಟ​ಣದ ಶಿ​ವ​ಪು​ರದ ವೆಂಕ​ಟೇ​ಶ್ವರ ಕ​ಲ್ಯಾಣ ಮಂಟ​ಪ​ದಲ್ಲಿ ಸ್ವಾ​ತಂತ್ರ್ಯೋ​ತ್ಸವ ಅ​ಮೃತ ಮ​ಹೋ​ತ್ಸವ ಪಾ​ದ​ಯಾ​ತ್ರೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಮ್ಮ ನಾಯಕರುಗಳ ತ್ಯಾಗ, ಹೋರಾಟ, ಬಲಿದಾನದಿಂದ ಸ್ವಾತಂತ್ರ್ಯ ಬಂದಿದೆ. 75ನೇ ಅಮೃತ ಮಹೋತ್ಸವವನ್ನು ನಾವೆಲ್ಲರೂ ಸಂಭ್ರಮಿಸಿಬೇಕು. ಪಾದಯಾತ್ರೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಧ್ವಜ ಹಿಡಿಯಲಿದ್ದಾರೆ ಎಂದು ಹೇಳಿದರು.

ಪಕ್ಷ ಸಂಘಟನೆ, ರಾಷ್ಟ್ರಪ್ರೇಮಕ್ಕಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ. 75ನೇ ವರ್ಷದ ಸಂಭ್ರಮವನ್ನು ಕಳೆದುಕೊಳ್ಳಬೇಡಿ. ನೂರನೇ ವರ್ಷಾಚರಣೆ ವೇಳೆಗೆ ನಾವು ಬದುಕಿರುತ್ತೇವೋ ಇಲ್ಲವೋ ಗೊತ್ತಿಲ್ಲ. ಈ ಸ್ವಾತಂತ್ರ್ಯದ ನಡಿಗೆ ಇತಿಹಾಸದ ನಡಿಗೆ ಎಂದರು.

ರಾಜ್ಯ ರಾಜಕಾರಣಕ್ಕೆ ಸಿ.ಟಿ.ರವಿ ವಾಪಸ್‌?: ರಾಜ್ಯಾಧ್ಯಕ್ಷರಾಗಿ ನೇಮಕವಾಗುತ್ತಾರಾ?

ಕೇಂದ್ರ ಮತ್ತು ರಾ​ಜ್ಯ​ದಲ್ಲಿ ಅ​ಧಿ​ಕಾರ ನ​ಡೆ​ಸು​ತ್ತಿ​ರುವ ಬಿ​ಜೆಪಿ ನೇ​ತೃ​ತ್ವದ ಸರ್ಕಾರ​ಗಳು ಜ​ನ​ವಿ​ರೋ​ಧಿ​ಯಾ​ಗಿವೆ. ರೈ​ತರ ಗೊ​ಬ್ಬರ ಪ​ರಿ​ಸ್ಥಿತಿ ಗೊ​ತ್ತಿದೆ. ರೈ​ತರ ಹಾಲಿನ ದರ 28 ರು.​ಗಿಂತ ಹೆಚ್ಚು ಕೊ​ಡು​ತ್ತಿಲ್ಲ. ಅ​ದಕ್ಕೂ ಜಿ​ಎಸ್‌ಟಿ ಹಾ​ಕಿ​ದ್ದಾರೆ. ಅ​ಡುಗೆ ಅ​ನಿಲ, ಪೆ​ಟ್ರೊಲ್‌, ಡೀ​ಸೆಲ್‌ ಬೆಲೆ ಏ​ರಿ​ಕೆ​ಯಾ​ಗಿದೆ. ರೈ​ತರ ಉ​ತ್ಪ​ನ್ನ​ಗಳ ಯಾ​ವುದೇ ಬೆ​ಲೆ​ಗಳು ಹೆ​ಚ್ಚ​ಳ​ವಾ​ಗಿಲ್ಲ ಎಂದು ಕಿ​ಡಿ​ಕಾ​ರಿ​ದರು.

ಶಾ​ಸಕ ಮಧು ಮಾ​ದೇ​ಗೌಡ, ಕೆ​ಪಿ​ಸಿಸಿ ಉ​ಪಾ​ಧ್ಯ​ಕ್ಷ​ರಾದ ಎನ್‌.ಚ​ಲು​ವ​ರಾ​ಯ​ಸ್ವಾ​ಮಿ, ಪಿ.ಎಂ.ನ​ರೇಂದ್ರ​ಸ್ವಾಮಿ, ಕೆ​ಪಿ​ಸಿಸಿ ಸ​ದಸ್ಯ ಎಸ್‌. ಗು​ರು​ಚ​ರಣ್‌, ಮು​ಖಂಡ​ ಡಾ.ಹೆಚ್‌.ಕೃಷ್ಣ, ಬ್ಲಾಕ್‌ ಕಾಂಗ್ರೆಸ್‌ ಅ​ಧ್ಯಕ್ಷ ಕ​ದ​ಲೂರು ರಾ​ಮ​ಕೃಷ್ಣ, ಮು​ಖಂಡ​ರಾದ ಸು​ರೇಶ್‌ ಕಂಠಿ, ಚಂದೂ​ಪುರ ಪಾ​ಪಣ್ಣ, ಜಿ​ಲ್ಲಾ​ಧ್ಯಕ್ಷ ಸಿ.ಡಿ.ಗಂಗಾ​ಧರ್‌, ಕಾ​ರ‍್ಯ​ದರ್ಶಿ ಅ​ಜ್ಜ​ಹಳ್ಳಿ ರಾ​ಮ​ಕೃಷ್ಣ, ಮೈಷು​ಗರ್‌ ಮಾಜಿ ಅ​ಧ್ಯಕ್ಷ ಸಿ​ದ್ದ​ರಾ​ಮೇ​ಗೌಡ, ಮ​ಮತಾ ಶಂಕ​ರೇ​ಗೌಡ ಇ​ತ​ರರರಿದ್ದರು.
 

Follow Us:
Download App:
  • android
  • ios