Asianet Suvarna News Asianet Suvarna News

Karnataka Politics: ಅಲ್ಪಸಂಖ್ಯಾತರ ಮತ ‘ಕೈ’ ತಪ್ಪದಂತೆ ಡಿಕೆಶಿ ಕಾರ್ಯತಂತ್ರ

*  ತಲೆಕೆಟ್ಟವರ ಮಾತಿಗೆಲ್ಲಾ ಉತ್ತರಿಸಲ್ಲ-ಡಿಕೆಶಿ
*  ರಾಜ್ಯ ಸಂಪುಟ ವಿಸ್ತರಣೆ ಅವರ ಸರ್ಕಾರಕ್ಕೆ, ಅವರ ಪಕ್ಷಕ್ಕೆ ಬಿಟ್ಟಿದ್ದು
*  ಗೋವಾ ಕನ್ನಡಿಗ ಮತದಾರರನ್ನು ಸೆಳೆಯಲು ಡಿಕೆಶಿ ತಂತ್ರಗಾರಿಕೆ 

DK Shivakumar strategy For Minority Votes in Karnataka  grg
Author
Bengaluru, First Published Jan 29, 2022, 7:51 AM IST

ಬೆಂಗಳೂರು(ಜ.29):  ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅಲ್ಪಸಂಖ್ಯಾತ ಮತಗಳು(Minority Votes) ‘ಕೈ’ ತಪ್ಪದಂತೆ ಕಾಂಗ್ರೆಸ್‌(Congress) ಪಕ್ಷದಿಂದ ಕಾರ್ಯತಂತ್ರ ಹೆಣೆದಿದ್ದು, ರಾಜ್ಯಾದ್ಯಂತ(Karnataka) ಅಲ್ಪಸಂಖ್ಯಾತರು ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ನೋಂದಣಿ ಕುರಿತು ಅರಿವು ಮೂಡಿಸಲು ಕೆಪಿಸಿಸಿ ಅಲ್ಪಸಂಖ್ಯಾತರ ಸಮಿತಿಯನ್ನು ರಚಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಆದೇಶ ಹೊರಡಿಸಿದ್ದಾರೆ.

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಹಾಗೂ ವಿಧಾನಪರಿಷತ್‌ ಸದಸ್ಯ ನಸೀರ್‌ ಅಹಮದ್‌ರನ್ನು(Najeer Ahmed) ಈ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಮಿತಿಯಲ್ಲಿ ಅಧ್ಯಕ್ಷರೂ ಸೇರಿದಂತೆ 39 ಮಂದಿ ಸದಸ್ಯರು ಇದ್ದಾರೆ.

Karnataka Politics: ಬಿಜೆಪಿಗೆ ಬರುವವರನ್ನು ಡಿಕ್ಕೀಲಿ ಕೂರಿಸ್ತಾರಾ?: ಸತೀಶ್‌ ವ್ಯಂಗ್ಯ

ಕೆಪಿಸಿಸಿ(KPCC) ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ವೈ.ಸಯೀದ್‌ ಅಹಮದ್‌ ಅವರನ್ನು ಸಂಯೋಜಕರನ್ನಾಗಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಅಬ್ದುಲ್‌ ಜಬ್ಬಾರ್‌, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಾಜಿ ಶಾಸಕರಾದ ಮೊಯಿದ್ದೀನ್‌ ಬಾವ, ಐವಾನ್‌ ಡಿಸೋಜಾ, ಜಿ.ಎ.ಬಾವಾ, ಡಾ.ರಫೀಕ್‌ ಅಹಮದ್‌ ಸೇರಿದಂತೆ 39 ಮಂದಿ ಸದಸ್ಯರನ್ನು ನೇಮಿಸಿದ್ದು, ಅಲ್ಪಸಂಖ್ಯಾತರ ಮತಗಳು ಮತದಾರರ ಪಟ್ಟಿಯಿಂದ ಕೈತಪ್ಪಬಾರದು. ಈ ನಿಟ್ಟಿನಲ್ಲಿ ಸಮಿತಿಯು ರಾಜ್ಯಾದ್ಯಂತ ಅಲ್ಪಸಂಖ್ಯಾತ ಮತದಾರರು ಹೆಚ್ಚಿರುವ ಜಿಲ್ಲೆಗಳಲ್ಲಿ ಸಂಚರಿಸಿ ಅರಿವು ಮೂಡಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಆದೇಶದಲ್ಲಿ ತಿಳಿಸಿದ್ದಾರೆ.

ತಲೆಕೆಟ್ಟವರ ಮಾತಿಗೆಲ್ಲಾ ಉತ್ತರಿಸಲ್ಲ-ಡಿಕೆಶಿ

ಬೆಳಗಾವಿ(Belagavi): ಡಿ.ಕೆ.ಶಿವಕುಮಾರ ಜೊತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Laxman Savadi) ಸಂಪರ್ಕದಲ್ಲಿದ್ದಾರೆಂಬ ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ(Lakhan Jarkiholi) ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಯಾರೋ ತಲೆಕೆಟ್ಟವರು ಮಾತನಾಡಿದ್ದಕ್ಕೆ ನಾನು ಉತ್ತರ ನೀಡಲು ಸಿದ್ಧನಿಲ್ಲ ಎಂದು ಹೇಳಿದರು.

ಗೋವಾದ(Goa) ಪಣಜಿಯಲ್ಲಿ(Panajim) ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಂಪುಟ ವಿಸ್ತರಣೆ ಅವರ ಸರ್ಕಾರಕ್ಕೆ, ಅವರ ಪಕ್ಷಕ್ಕೆ ಬಿಟ್ಟಿದ್ದು. ಯಾರನ್ನೂ ಬೇಕಾದರೂ ತೆಗೆದುಕೊಳ್ಳಲಿ, ಬಿಡಲಿ. ಆದರೆ, ದಿನಕ್ಕೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಯಾಗಲಿ, ಅವರ ಪಕ್ಷದ ಅಧ್ಯಕ್ಷರಿಗಾಗಲಿ ಕಂಟ್ರೋಲ್‌ (ನಿಯಂತ್ರಣ) ಮಾಡಲಾಗುತ್ತಿಲ್ಲ. ರಾಜ್ಯ ಬಿಡಿ ಬಿಜೆಪಿಯ ಕೇಂದ್ರದ ನಾಯಕರಿಂದಲೂ ಕಂಟ್ರೋಲ್‌ ಮಾಡಲಾಗುತ್ತಿಲ್ಲ ಎಂದು ದೂರಿದರು.

ಫೆಬ್ರವರಿ 14 ರಂದು ಗೋವಾ ವಿಧಾನಸಭೆ ಚುನಾವಣೆ(Goa Assembly Elections) ಹಿನ್ನೆಲೆಯಲ್ಲಿ ಗೋವಾಕ್ಕೆ ಭೇಟಿ ನೀಡಿದ ಅವರು, ಗೋವಾ ಕನ್ನಡಿಗ ಮತದಾರರನ್ನು ಸೆಳೆಯಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಗೋವಾ ಕಾಂಗ್ರೆಸ್‌ ಉಸ್ತುವಾರಿ ದಿನೇಶ ಗುಂಡೂರಾವ್‌(Dinesh Gundurao) ಸೇರಿ ಸ್ಥಳೀಯ ಕಾಂಗ್ರೆಸ್‌ ನಾಯಕರ ಜೊತೆಗೆ ಚರ್ಚೆ ನಡೆಸಿದರು.

ಡಿಕೆಶಿ ಜೊತೆ ಸೇರಿ ಲಕ್ಷ್ಮಣ ಸವದಿ ಕುತಂತ್ರ: ಲಖನ್‌ ಜಾರಕಿಹೊಳಿ ವಾಗ್ದಾಳಿ

ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ(Assembly Election) ಸೋತರೂ ಉನ್ನತ ಹುದ್ದೆಗೇರಿ ಅಧಿಕಾರ ಅನುಭವಿಸಿದವರು, ಇದೀಗ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜೊತೆ ಸೇರಿ ಕುತಂತ್ರ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು. 

Goa Elections: ಕಾಂಗ್ರೆಸ್‌ ಅಭ್ಯರ್ಥಿಗಳ ಆಣೆ, ಪ್ರಮಾಣ: ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋತ ನಾಯಕರನ್ನು ಪಕ್ಷದ ಉಪಾಧ್ಯಕ್ಷ, ಡಿಸಿಎಂ ಮಾಡಿದರೆ ಒಳ್ಳೆಯದಾಗುವುದಿಲ್ಲ. ರಮೇಶ ಜಾರಕಿಹೊಳಿ(Ramesh Jarkiholi) ವಿರುದ್ಧ ಲಕ್ಷ್ಮಣ ಸವದಿ(Laxman Savadi) ಕತ್ತಿ ಮಸೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಜಾರಕಿಹೊಳಿ ಸಹೋದರರನ್ನು ಹೊರಗಿಟ್ಟು ಸಚಿವ ಉಮೇಶ ಕತ್ತಿ(Umesh Katti) ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ನಡೆಸಿದ್ದಾರೆ. ಅಥಣಿ, ಬೆಳಗಾವಿ(Belagavi) ನಾಯಕರು ಸೇರಿ ಕುತಂತ್ರ ಮಾಡಿ ಬಿಜೆಪಿ(BJP) ಸರ್ಕಾರ ಬಲಿ ಕೊಡಲು ಯತ್ನಿಸುತ್ತಿದ್ದಾರೆ. ಈಗಾಗಲೇ ಬಿಜೆಪಿಯಲ್ಲಿ ಉನ್ನತ ಹುದ್ದೆ ಅನುಭವಿಸಿ ಮತ್ತೆ ಅಧಿಕಾರ ಸಿಗಲೆಂದು ಕುತಂತ್ರ ನಡೆಸಿದ್ದಾರೆ. ಈ ರೀತಿ ಮೀಟಿಂಗ್‌ ಎಲ್ಲಾ ಮಾಡಿ ಅಧಿಕಾರ ಗಿಟ್ಟಿಸುವ ಫಾರ್ಮುಲಾ ಇದಾಗಿದೆ. ಸಚಿವ ಉಮೇಶ ಕತ್ತಿ ಅವರು ಸಭೆಯಲ್ಲಿ ಮೇಯರ್‌ ಚುನಾವಣೆ, ಪಕ್ಷದ ಸಂಘಟನೆ ಕುರಿತು ಚರ್ಚಿಸಿರುವುದಾಗಿ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸಭೆ ನಡೆದರೆ, ಅದು ಅಧಿಕೃತ ಸಭೆ ಎನ್ನುವ ಮೂಲಕ ಇದೊಂದು ಅನಧಿಕೃತ ಸಭೆ ಎಂದು ಜರಿದರು.
 

Follow Us:
Download App:
  • android
  • ios