Asianet Suvarna News Asianet Suvarna News

ನೆರೆ ಸಂತ್ರ​ಸ್ತರ ನೆರ​ವಿಗೆ ಸಿಎಂ ಬೊಮ್ಮಾಯಿ ಧಾವಿಸಲಿ: ಡಿಕೆಶಿ

ಜಿಲ್ಲೆಯಲ್ಲಿ ಮಹಾ ಮಳೆಯಿಂದ ನಷ್ಟ ಅನುಭವಿಸುತ್ತಿದ್ದು, ಮುಖ್ಯಮಂತ್ರಿಗಳು ಸಂತ್ರಸ್ತರ ನೆರವಿಗೆ ಧಾವಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದರು. 

Dk Shivakumar Performs Pooja In Kanakapura Comments On Ramanagara Rains Damage gvd
Author
First Published Sep 2, 2022, 11:31 PM IST

ಕನ​ಕ​ಪುರ (ಸೆ.02): ಜಿಲ್ಲೆಯಲ್ಲಿ ಮಹಾ ಮಳೆಯಿಂದ ನಷ್ಟ ಅನುಭವಿಸುತ್ತಿದ್ದು, ಮುಖ್ಯಮಂತ್ರಿಗಳು ಸಂತ್ರಸ್ತರ ನೆರವಿಗೆ ಧಾವಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದರು. ತಮ್ಮ ಸ್ವಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅದರಲ್ಲೂ ರಾಮನಗರ - ಚನ್ನಪಟ್ಟಣ ತಾಲೂಕಿನಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ನೆರೆ ಬಂದು ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. 

ನೂರಾರು ಜನರು ತಮ್ಮ ಮನೆ, ಮಠ, ಜಾನುವಾರು ಕಳೆದುಕೊಂಡು ಸುಮಾರು 50 ಸಾವಿರದಿಂದ 15 ಲಕ್ಷ​ದ​ವ​ರೆಗೂ ಹಾಗೂ ರೇಷ್ಮೆ ತಯಾರಕರಿಗೆ ಸುಮಾರು 50 ಲಕ್ಷದಿಂದ 1-2 ಕೋಟಿಯಷ್ಟು ನಷ್ಟ ಉಂಟಾಗಿದೆ. ಸಂತ್ರಸ್ತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ತಿಳಿಸಿದರು. ಕೈಗಾರಿಕೆಗಳು ಸಂಪೂರ್ಣ ನಾಶವಾಗಿವೆ. ಸರ್ಕಾರ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಸರ್ಕಾರ ಪ್ರತಿ ಕುಟುಂಬಕ್ಕೆ 10 ಸಾವಿರ ನೀಡುವುದಾಗಿ ತಿಳಿಸಿದೆ. ಈ ಮೊತ್ತ ಒಂದು ತಿಂಗಳ ಊಟಕ್ಕೆ ಸರಿ ಹೋಗಬಹುದು. ಅವರ ಪುನರ್ವಸತಿ, ಜೀವನ ಸರಿಪಡಿಸಿಕೊಳ್ಳಲು ಸರ್ಕಾರ ಸಂತ್ರಸ್ತರ ಬೆನ್ನಿಗೆ ನಿಲ್ಲಬೇಕು. ಜನರ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುವ ಆತಂಕ ಕಾಡುತ್ತಿದೆ. 

ಸಿಎಂ ಬೊಮ್ಮಾಯಿಯವರನ್ನ ಯೋಗಿ ಎಂದು ಬಣ್ಣಿಸಿದ ಯೋಗಿ ಆದಿತ್ಯನಾಥ್

ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿ​ದ​ರು. ಜಿಲ್ಲಾ ಮಂತ್ರಿಗಳು ಬಹಳ ದೊಡ್ಡವರು. ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ರಾಮನಗರ ಜಿಲ್ಲೆಯನ್ನು ಸ್ವಚ್ಛಗೊಳಿಸುವುದಾಗಿ ಹೇಳಿದ್ದರು. ಈಗ ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಸ್ವಯಂಸೇವಕರನ್ನು ಕರೆದುಕೊಂಡು ಬಂದು ನೆರೆಯಿಂದ ಸಂತ್ರಸ್ತರ ಮನೆಗಳನ್ನು ಸ್ವಚ್ಛಗೊಳಿಸಿ ಕೊಡಬೇಕೆಂದು ಕೈಮುಗಿಯುತ್ತೇನೆ. ಸಚಿವರು ಈ ಭಾಗದ ಜನರಿಗೆ ಪರಿಹಾರ ಕೊಡಿಸಿ ಅವರ ಆರೋಗ್ಯ ರಕ್ಷಿಸಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ವೇಳೆ ಸಂಸದ ಡಿ.ಕೆ.ಸುರೇಶ್‌, ಮುಖಂಡರಾದ ಎಂ.ಡಿ.ವಿಜಯದೇವ್‌, ಕೃಷ್ಣಪ್ಪ ಮತ್ತಿ​ತ​ರರು ಹಾಜರಿದ್ದರು.

ಹಾನಿಪೀಡಿತ ಪ್ರದೇಶಗಳಿಗೆ ಡಿಕೆಶಿ ಭೇಟಿ: ಮಳೆ​ಯಿಂದ ಚನ್ನ​ಪಟ್ಟಣ ಹಾಗೂ ರಾಮ​ನ​ಗರ ತಾಲೂ​ಕಿ​ನಲ್ಲಿ ಹಾನಿ​ಗೊ​ಳ​ಗಾ​ಗಿದ್ದ ಪ್ರದೇ​ಶ​ಗ​ಳಿಗೆ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮಂಗ​ಳ​ವಾರ ಭೇಟಿ ನೀಡಿ ಸಂತ್ರ​ಸ್ತರ ಅಳಲು ಆಲಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ರೀತಿಯ ಮಳೆಯನ್ನು ಎಂದೂ ಕಂಡಿರಲಿಲ್ಲ. ನಾನು ಚಿಕ್ಕವನಿದ್ದಾಗ ರಾಮಕೃಷ್ಣ ಹೆಗಡೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಈ ಪರಿಸ್ಥಿತಿಯನು ಕಂಡಿದ್ದೆನೆ ಹೊರತು ಮತ್ತೆಂದು ಇಂಥ ಪರಿಸ್ಥಿತಿ ಕಂಡಿರಲಿಲ್ಲ. ಆದ್ದರಿಂದ ಸರ್ಕಾರ ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕರ್ನಾಟಕಕ್ಕೆ ಇಂದು ಯೋಗಿ ಆದಿತ್ಯನಾಥ್, ಹಾಸನ ರೂಟ್‌ನಲ್ಲಿ ಬರೋರಿಗೆ ಪೊಲೀಸರ ಮಾರ್ಗಸೂಚಿ

ಭಾರತ ಐಕ್ಯತಾ ಯಾತ್ರೆ ಗುಂಡ್ಲುಪೇಟೆಯಿಂದ ಆರಂಭವಾಗಿ ರಾಯಚೂರಿನವರೆಗೂ ರಾಜ್ಯಾದ್ಯಂತ ಸಾಗಲಿದೆ. ರಾಜ್ಯದ ಎಲ್ಲಾ ಕ್ಷೇತ್ರದ ಜನರು ಕೂಡ ಒಂದೊಂದು ದಿನ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದೇನೆ. ನಾನು ಕೂಡ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ.
-ಡಿ.ಕೆ.​ಶಿ​ವ​ಕು​ಮಾರ್‌, ಅಧ್ಯ​ಕ್ಷರು, ಕೆಪಿ​ಸಿ​ಸಿ

Follow Us:
Download App:
  • android
  • ios