ಡಿ.ಕೆ.​ಶಿ​ವ​ಕು​ಮಾರ್‌ ಡಿಸಿಎಂ: ರಾಮನಗರ ಜಿಲ್ಲೆಯಲ್ಲಿ ಮೂಡಿದ ಅಭಿ​ವೃದ್ಧಿ ನಿರೀಕ್ಷೆಗಳು

ರಾಜ್ಯದ ಉಪಮುಖ್ಯಮಂತ್ರಿಯಾಗಿ ಕನ​ಕ​ಪುರ ಕ್ಷೇತ್ರ ಶಾಸಕ ಡಿ.ಕೆ.​ಶಿ​ವ​ಕು​ಮಾರ್‌ ಶನಿ​ವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆಯೂ ನಿರೀಕ್ಷೆಗಳು ಮೂಡಿವೆ. 

DK Shivakumar DCM Expectations of development in Ramanagara district gvd

ಎಂ.ಅಫ್ರೋಜ್‌ ಖಾನ್‌

ರಾಮನಗರ (ಮೇ.21): ರಾಜ್ಯದ ಉಪಮುಖ್ಯಮಂತ್ರಿಯಾಗಿ ಕನ​ಕ​ಪುರ ಕ್ಷೇತ್ರ ಶಾಸಕ ಡಿ.ಕೆ.​ಶಿ​ವ​ಕು​ಮಾರ್‌ ಶನಿ​ವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆಯೂ ನಿರೀಕ್ಷೆಗಳು ಮೂಡಿವೆ. ಬೆಂಗ​ಳೂರು ಗ್ರಾಮಾಂತರ ಜಿಲ್ಲೆ​ಯಿಂದ ಪ್ರತ್ಯೇ​ಕ​ಗೊಂಡು ಅಸ್ತಿ​ತ್ವಕ್ಕೆ ಬಂದ ರಾಮ​ನ​ಗರವು ಜಿಲ್ಲೆಯಾಗಿ 16 ವರ್ಷ ಪೂರ್ಣ​ಗೊಂಡಿದೆ. ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳು ಕೈಗೆ ಸಿಗುವ ಕಾರಣ ಜನರು ರಾಜಧಾನಿಗೆ ಅಲೆದಾಡು​ವುದು ತಪ್ಪಿ​ತೇ ವಿನಃ ಜಿಲ್ಲೆಯು ನಿರೀ​ಕ್ಷಿತ ಪ್ರಮಾ​ಣ​ದಲ್ಲಿ ಅಭಿ​ವೃದ್ಧಿ ಕಂಡಿಲ್ಲ ಎಂಬ ಕೊರಗು ಪ್ರತಿ​ಯೊ​ಬ್ಬ​ರಿಗೂ ಕಾಡು​ತ್ತಿ​ದೆ. 

ಜಿಲ್ಲಾ ಹಾಗೂ ತಾಲೂಕು ಕೇಂದ್ರ ಸ್ಥಾನಗಳಲ್ಲಿ ಅಗತ್ಯ ಸರ್ಕಾರಿ ಕಟ್ಟ​ಡ​ಗಳು ತಲೆ ಎತಿಲ್ಲ. ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇ​ಶ​ಗಳು ಇಂದಿಗೂ ಮೂಲ​ಸೌ​ಲ​ಭ್ಯ​ಗ​ಳಿಂದ ವಂಚಿ​ತ​ವಾ​ಗಿವೆ. ನೀರಾ​ವರಿ ಯೋಜ​ನೆ​ಗಳು ಪೂರ್ಣ​ಗೊಂಡಿ​ಲ್ಲ. ಬಿಡದಿ ಮತ್ತು ಹಾರೋ​ಹ​ಳ್ಳಿ ಹೊರತು ಮತ್ತೊಂದು ಕೈಗಾ​ರಿಕಾ ಪ್ರದೇಶ ಸ್ಥಾಪನೆ ಆಗಿ​ಲ್ಲ. ಜಿಲ್ಲೆಯ ಪ್ರವಾಸಿ ಸ್ಥಳಗಳ ಅಭಿವೃದ್ಧಿ, ನಾಲ್ಕೂ ತಾಲೂಕುಗಳಿಗೆ ಅನ್ವಯವಾಗುವಂತೆ ವೈಜ್ಞಾನಿಕ ಕಸವಿಲೇವಾರಿ ವ್ಯವಸ್ಥೆ, ಸತ್ತೇ​ಗಾಲ ನೀರಾ​ವರಿ ಯೋಜನೆ ಪೂರ್ಣ​ಗೊ​ಳಿ​ಸುವ ಮೂಲಕ ಕೃಷಿಗಾಗಿ ಶಾಶ್ವತ ನೀರಾವರಿ, ಶುದ್ಧ ಕುಡಿಯುವ ನೀರು ಪೂರೈ​ಸುವು​ದು. 

ದುಬಾರಿಯಾಯ್ತು ಚಿಕ್ಕಬಳ್ಳಾಪುರದ ಸ್ಕಂದಗಿರಿ ಬೆಟ್ಟ ಪ್ರವೇಶ: ಚಾರಣಿಗರ ಆಕ್ರೋಶ

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ ಆಗಬೇಕಾಗಿದೆ. ರೇಷ್ಮೆ, ಹೈನು​ಗಾ​ರಿಕೆ ಹಾಗೂ ಮಾವು ಪ್ರಮುಖ ಕಸು​ಬು​ಗ​ಳಾ​ಗಿದ್ದು, ಇದನ್ನು ಅವ​ಲಂಬಿ​ಸಿ​ರುವ ರೈತರ ಪ್ರಗ​ತಿ​ಗಾಗಿ ಪೂರ​ಕ​ ಯೋಜನೆ ರೂಪಿ​ಸ​ಬೇ​ಕಿದೆ. ರಾಮನಗರ ಮತ್ತು ಚನ್ನಪಟ್ಟಣವನ್ನು ಅವಳಿ ನಗರಗಳಂತೆ ಅಭಿವೃದ್ಧಿ ಪಡಿಸುವುದು. ಬಿಡ​ದಿ​ವ​ರೆಗೆ ಮೆಟ್ರೋ ವಿಸ್ತ​ರಣೆ, ಸುಸ​ಜ್ಜಿತ ಕ್ರೀಡಾಂಗಣ ನಿರ್ಮಾ​ಣ, ರೇಷ್ಮೆಯಲ್ಲಿ ಉಪ ಉತ್ಪನ್ನಗಳು ತಯಾರಿಸುವ ಕಾರ್ಖಾನೆ ಸ್ಥಾಪನೆ, ಬೃಹತ್‌ ಕೈಗಾರಿಕಾ ವಲಯ ಸ್ಥಾಪಿಸಿ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಅವ​ಶ್ಯ​ಕತೆ ಇದೆ.

ಈಗ ಡಿ.ಕೆ.​ಶಿ​ವ​ಕು​ಮಾರ್‌ ಉಪ ಮುಖ್ಯಮಂತ್ರಿಯಾದ ಬಳಿಕ ರಾಮನಗರ ಜಿಲ್ಲೆಗೆ ಅವ​ಶ್ಯ​ಕ​ತೆ​ಯಿ​ರುವ ಯೋಜ​ನೆ​ಗ​ಳನ್ನು ಸಾಕಾ​ರ​ಗೊ​ಳಿಸಿ ಏನೇನು ಕೊಡುಗೆ ನೀಡಲಿದ್ದಾರೆ ಎಂಬ ಬಗ್ಗೆ ಜನರಲ್ಲಿ ಕುತೂಹಲದ ಚರ್ಚೆಗಳು ನಡೆಯುತ್ತಿದ್ದು, ನಿರೀಕ್ಷೆಗಳು ಬೆಟ್ಟದಂತೆ ಬೆಳೆದು ನಿಂತಿವೆ. ಡಿ.ಕೆ.​ಶಿ​ವ​ಕು​ಮಾರ್‌ ಅವ​ರೊಂದಿಗೆ ಚುನಾ​ವ​ಣೆಯಲ್ಲಿ ಆಯ್ಕೆ​ಯಾದ ಚನ್ನ​ಪ​ಟ್ಟಣ ಕ್ಷೇತ್ರ ಶಾಸಕ ಎಚ್‌.ಡಿ.​ಕು​ಮಾ​ರ​ಸ್ವಾಮಿ, ಮಾಗಡಿ ಕ್ಷೇತ್ರ ಶಾಸಕ ಎಚ್‌.ಸಿ.​ಬಾ​ಲಕೃಷ್ಣ ಹಾಗೂ ರಾಮ​ನ​ಗರ ಕ್ಷೇತ್ರ ಶಾಸಕ ಇಕ್ಬಾಲ್‌ ಹುಸೇನ್‌ ಕೈಜೋ​ಡಿ​ಸಿ​ದಾಗ ಮಾತ್ರ ನಿರೀ​ಕ್ಷೆ​ಗ​ಳೆ​ಲ್ಲವು ಸಾಕಾ​ರ​ಗೊ​ಳ್ಳಲು ಸಾಧ್ಯ.

ರಾಮನಗರ ಕ್ಷೇತ್ರ
* ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್‌ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರ​ಕಿದೆ. ಈ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ.

* ನಗರ ಮತ್ತು ಹಳ್ಳಿಗಳಲ್ಲಿ ಪ್ರತಿ ಮನೆಗೆ ಕುಡಿ​ಯುವ ನೀರು ಕಲ್ಪಿ​ಸುವ ಯೋಜನೆ ಪ್ರಗ​ತಿ​ಯ​ಲ್ಲಿದ್ದು, ತ್ವರಿ​ತ​ಗ​ತಿ​ಯಲ್ಲಿ ​ಮು​ಗಿ​ಸ​ಬೇಕು. ಆನಂತರ ರಸ್ತೆ, ಒಳ​ಚ​ರಂಡಿ ಹಾಗೂ ಯುಜಿಡಿ ಕಾಮ​ಗಾರಿ ಪೂರ್ಣ​ಗೊ​ಳಿ​ಸ​ಬೇ​ಕಿ​ದೆ.

* ರಾಮನಗರ ನೂತನ ಜಿಲ್ಲಾಸ್ಪತ್ರೆಗೆ ಅಗತ್ಯ ವೈದ್ಯ​ಕೀಯ ಸಿಬ್ಬಂದಿ ಒದ​ಗಿ​ಸು​ವುದು, ಹಳೇಯ ಜಿಲ್ಲಾ​ಸ್ಪ​ತ್ರೆ​ಯನ್ನು ತಾಯಿ ಮಗು​ವಿನ ಆಸ್ಪ​ತ್ರೆ​ಯ​ನ್ನಾಗಿ ಮಾರ್ಪ​ಡಿ​ಸು​ವುದು.

* ರಾಮನಗರದಲ್ಲಿ ಸ್ಲಂ ಕ್ಲಿಯರೆನ್ಸ್‌ ಬೋರ್ಡಿನಿಂದ ದಶಕದ ಹಿಂದೆ ಮನೆ ನಿರ್ಮಿಸಿಕೊಡುವ ವಾಗ್ದಾನವನ್ನು ಪೂರೈಸುವುದು. ಬಡ​ವ​ರಿಗೆ ಸೂರು ಮತ್ತು ನಿವೇ​ಶನ ಒದ​ಗಿ​ಸು​ವು​ದು.

* ಆರ್ಥಿ​ಕ​ತೆಯ ದೃಷಿ​ಯಿಂದ ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಯನ್ನು ಸುಸಜ್ಜಿತ ಮಾರುಕಟ್ಟೆ(ಕೆ.ಆರ್‌.ಮಾರ್ಕಟ್‌ ರೀತಿಯಲ್ಲಿ) ನಿರ್ಮಾಣ ಮಾಡಿ ಉಳಿ​ಸಿ​ಕೊ​ಳ್ಳು​ವು​ದು.

* ರಾಮನಗರದಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗಾಗಿ ಸುಸ​ಜ್ಜಿತ ಬಸ್‌ ನಿಲ್ದಾಣ ಸ್ಥಾಪನೆ. ಅರ್ಕಾ​ವತಿ ನದಿ ಶುದ್ಧೀ​ಕ​ರಣ, ಸುಸ​ಜ್ಜಿ​ತ​ವಾದ ಕ್ರೀಡಾಂಗಣ, ಪಾರ್ಕ್ ನಿರ್ಮಾಣ.

ಕನಕಪುರ ಕ್ಷೇತ್ರ
* ಕಾವೇರಿ ನದಿಗೆ ಮೆಕೆದಾಟು ಬಳಿ ಅಡ್ಡ​ಲಾಗಿ ಜಲಾಶಯ ನಿರ್ಮಾಣ ಮಾಡುವುದು. ಏತ ನೀರಾವರಿಯ ಮೂಲಕ ತಾಲೂಕಿನಲ್ಲಿ ಕೆರೆಗಳನ್ನು ತುಂಬಿಸುವುದು ಮತ್ತು ಪ್ರಗತಿಯಲ್ಲಿರುವ ಏತ ನೀರಾವರಿಗಳನ್ನು ಪೂರ್ಣಗೊಳಿಸುವುದು.

* ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸಾಕಷ್ಟುಅಭಿವೃದ್ಧಿ ಕಾಣುತ್ತಿದ್ದು ಸಾರಿಗೆ ಒತ್ತಡ ಕಡಿಮೆ ಮಾಡಲು ಆರ್ಚ್‌ ಆಫ್‌ ಲೀವಿಂಗ್‌ ಆಶ್ರಮದಿಂದ 20 ಕಿ.ಮಿ ಮೆಟ್ರೊ ರೈಲು ವಿಸ್ತರಿಸುವುದು.

* ಕನ​ಕ​ಪುರ ತಾಲೂ​ಕಿ​ಗೆ ಇಲ್ಲಿವರೆಗೆ ರೈಲ್ವೆ ಸಂಪರ್ಕ ಸಾಧ್ಯ​ವಾ​ಗಿಲ್ಲ. ಬೆಂಗ​ಳೂ​ರಿ​ನಿಂದ ಕನ​ಕ​ಪುರ - ಚಾಮ​ರಾ​ಜ​ನ​ಗರ ಮಾರ್ಗ​ವಾಗಿ ತಮಿ​ಳು​ನಾ​ಡಿನ ಕೊಯ​ಮ​ತ್ತೂ​ರಿಗೆ ರೈಲ್ವೆ ಸಂಪರ್ಕ ಕಲ್ಪಿ​ಸು​ವು​ದು.

* ಪ್ರವಾಸೋಮದ್ಯಮಕ್ಕೆ ತಾಲೂಕಿನಲ್ಲಿ ಸಾಕಷ್ಟುಅವಕಾಶವಿದ್ದು ಸಂಗಮ -ಮೇಕೆದಾಟು ಅಭಿವೃದ್ದಿ, ಚುಂಚಿ​ಫಾಲ್ಸ್‌ , ಮಾವ​ತ್ತೂರು ಕೆರೆ ಅಭಿ​ವೃದ್ಧಿ, ಟ್ರಕ್ಕಿಂಗ್‌ ಗೆ ಹೆಸರಾದ ಬೆಳಿಕಲ… ಬೆಟ್ಟ, ಅಚ್ಚಲು ಬೆಟ್ಟ, ಕಬ್ಬಾಳ್‌ ಬೆಟ್ಟಕ್ಕೆ ಸಂಪರ್ಕ ಕಲ್ಪಿ​ಸುವ ರಸ್ತೆ ಅಭಿವೃದ್ಧಿ ಸೇರಿ​ದಂತೆ ಮೂಲ ಸೌಲಭ್ಯ ಕಲ್ಪಿ​ಸು​ವು​ದು.

* ರೇಷ್ಮೆಗೆ ಹೆಸರಾಗಿರುವ ಕನಕಪುರ ತಾಲೂಕಿನಲ್ಲಿ ರೇಷ್ಮೆ ಟೆಕ್ನೊ ಪಾರ್ಕ್ ನಿರ್ಮಾಣ ಮಾಡಿ ರೇಷ್ಮೆಗೆ ಉತ್ತೇಜನ ನೀಡುವುದು.

* ಕನ​ಕ​ಪು​ರ​ದಲ್ಲಿ ಸೂಪರ್‌ ಸ್ಪೆಷಾ​ಲಿಟಿ ಆಸ್ಪತ್ರೆ ಇಲ್ಲ. ಸರ್ಕಾರಿ ಮೆಡಿ​ಕಲ್‌ ಕಾಲೇಜು ಸ್ಥಾಪನೆ ಮಾಡು​ವುದು. ತಾಯಿ ಮತ್ತು ಮಕ್ಕಳ ಆಸ್ಪ​ತ್ರೆಗೆ ಅಗತ್ಯ ವೈದ್ಯ​ಕೀಯ ಸಿಬ್ಬಂದಿ ಹಾಗೂ ವೈದ್ಯ​ಕೀಯ ಸಕ​ಲ​ರಣೆ ಒದ​ಗಿ​ಸು​ವು​ದು.

ಮಾಗಡಿ ಕ್ಷೇತ್ರ
* ಮಹಿಳೆಯರಿಗೆ ಅನೂಕೂಲವಾಗುವಂತೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ… ಸ್ಥಾಪನೆ ಹಾಗೂ ಬಿಡದಿ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಹೆಚ್ಚು ಅವಕಾಶ ನೀಡುವುದು.

* ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ.

* ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರ ಗ್ರಾಮ ಅಭಿವೃದ್ಧಿಗೆ ಅನುದಾನ ಬಂದಿದೆ. ಆದರೆ, ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗಿಲ್ಲ. ಕೆಂಪಾಪುರವನ್ನು ಅಭಿವೃದ್ಧಿ ಪಡಿಸುವುದು.

* ಲಿಂಗೈಕ್ಯ ಶ್ರೀ ಶಿವ​ಕು​ಮಾ​ರ​ಸ್ವಾ​ಮಿ​ಗಳ ಹುಟ್ಟೂರು ವೀರಾ​ಪುರ ಹಾಗೂ ಭೈರ​ವೈಕ್ಯ ಶ್ರೀ ಬಾಲ​ಗಂಗಾ​ಧ​ರ​ನಾಥ ಸ್ವಾಮೀ​ಜಿ​ಗಳ ಹುಟ್ಟೂ​ರಾದ ಬಾನಂದೂರು ಗ್ರಾಮ​ಗಳ ಅಭಿ​ವೃ​ದ್ಧಿಗೆ ಅನು​ದಾನ ಬಿಡು​ಗ​ಡೆ​ಯಾಗಿ ಕಾಮ​ಗಾ​ರಿಗೆ ಚಾಲ​ನೆಯೂ ದೊರ​ಕಿದೆ. ಆದರೂ ಕಾಮ​ಗಾರಿ ತೆವ​ಳುತ್ತ ಸಾಗಿ​ದೆ.

* ಬಿಡದಿ ಪಟ್ಟ​ಣ​ದ​ವ​ರೆಗೆ ಮೆಟ್ರೋ ವಿಸ್ತ​ರಣೆ ಮಾಡು​ವುದು. ಬೆಂಗ​ಳೂರು - ಮಾಗಡಿ ನಾಲ್ಕು ಪಥದ ರಸ್ತೆ ಕಾಮ​ಗಾರಿ ಸ್ಥಗಿ​ತ​ಗೊಂಡಿದ್ದು, ಚಾಲನೆ ದೊರ​ಕ​ಬೇ​ಕಿದೆ.

* ಮಾಗಡಿ ಪಟ್ಟಣದಲ್ಲಿ ಎಂಜಿನಿಯರಿಂಗ್‌ ಹಾಗೂ ಕಾನೂನು ಕಾಲೇಜು ಸ್ಥಾಪನೆ ಮಾಡುವುದು.

* ಮಂಚ​ನ​ಬೆಲೆ ಜಲಾ​ಶಯದಿಂದ ಮಾಗಡಿ ಪಟ್ಟ​ಣಕ್ಕೆ ಪೂರೈ​ಸು​ತ್ತಿ​ರುವ ಕುಡಿ​ಯುವ ನೀರನ್ನು ಶುದ್ಧೀ​ಕರಿಸಿ ಪೂರೈ​ಸು​ವುದು. ವೈ.ಜಿ.​ಗುಡ್ಡ ಜಲಾ​ಶ​ಯ​ದಿಂದ ಕುಡಿ​ಯುವ ನೀರು ಪೂರೈ​ಸು​ವುದು. ಬೈರ​ಮಂಗಲ ಭಾಗದ ಹಳ್ಳಿ​ಗ​ಳಿಗೆ ಕಾವೇರಿ ಕುಡಿ​ಯುವ ನೀರು ಒದ​ಗಿ​ಸು​ವುದು.

ಜೆಡಿಎಸ್‌ ಪಕ್ಷ ನಮಗೆ ತಾಯಿ, ದೇವೇಗೌಡರು ತಂದೆ ಇದ್ದಂತೆ: ಸಿ.ಎಸ್‌.ಪುಟ್ಟರಾಜು

ಚನ್ನಪಟ್ಟಣ ಕ್ಷೇತ್ರ
* ವಂದಾ​ರ​ಗುಪ್ಪೆ ಬಳಿ ರೇಷ್ಮೆ​ಗೂಡಿನ ಹೈಟೆಕ್‌ ಮಾರು​ಕಟ್ಟೆಹಾಗೂ ಬೈರಾ​ಪ​ಟ್ಟ​ಣ​ದಲ್ಲಿ ಮಾವು ಸಂಸ್ಕ​ರಣಾ ಘಟಕವನ್ನು ತ್ವರಿ​ಗ​ತಿ​ಯಲ್ಲಿ ನಿರ್ಮಾಣ ಮಾಡು​ವು​ದು.

* ಚನ್ನಪಟ್ಟಣದಲ್ಲಿ ಬಾಕಿ ಉಳಿದಿರುವ ಖಾಸಗಿ ಬಸ್‌ ನಿಲ್ದಾಣ ಪೂರ್ಣ ಗೊಳಿಸುವುದು. ಕಣ್ವ ಜಲಾ​ಶ​ಯ​ದಲ್ಲಿ ಚಿಲ್ಡ್ರನ್‌ ಪಾರ್ಕ್ ಸ್ಥಾಪಿ​ಸು​ವು​ದು.

* ಚನ್ನಪಟ್ಟಣ ನಗರ ವ್ಯಾಪ್ತಿಯ ಯುಜಿಡಿ ಕಾಮಗಾರಿ ಕಳೆದ 15 ವರ್ಷಗಳಿಂದ ಸ್ಥಗಿತ ಗೊಂಡಿದ್ದು, ನಗರವನ್ನು ಯುಜಿಡಿ ವ್ಯವಸ್ಥೆಗೆ ಒಳಪಡಿಸುವುದು. ರಸ್ತೆ​ಗ​ಳನ್ನು ಅಭಿ​ವೃದ್ಧಿ ಪಡಿ​ಸು​ವು​ದು.

* ಚನ್ನಪಟ್ಟಣ ತಾಲೂಕಿನ ಪ್ರಧಾನ ಕಸುಬಾದ ಹೈನುಗಾರಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪಶು ಆಹಾರ ಘಟಕ, ಪಶುಗಳಿಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆ ಸ್ಥಾಪನೆ.

* 2004ರಿಂದ ಸ್ಥಗಿತ ಗೊಂಡಿರುವ ಕೆಎಸ್‌ಐಸಿಯ ಸ್ಪನ್‌ ಸಿಲ್‌್ಕ ಮಿಲ್‌ ಪುನರ್‌ ಆರಂಭಿಸುವುದು. ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಟರ್ಮಿನಲ್‌ ಮಾರುಕಟ್ಟೆಸ್ಥಾಪನೆ.

* ಸಂಕಷ್ಟದಲ್ಲಿರುವ ಚನ್ನಪಟ್ಟಣದ ಸಾಂಪ್ರದಾಯಿಕ ಬೊಂಬೆ ಉದ್ಯಮಕ್ಕೆ ನೆರವು ನೀಡುವುದು. ಗಾರ್ಮೆಂಟ್ಸ್‌ ಸ್ಥಾಪಿಸಿ ಸಾವಿರಾರು ಮಹಿಳೆಯರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವುದು.

Latest Videos
Follow Us:
Download App:
  • android
  • ios