ಡಿಕೆಶಿ- ಸಿದ್ದರಾಮಯ್ಯ ಮನದಾಳದ ಮಾತು: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ದಿಗ್ಗಜರು!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನದಾಳದ ಸಂಭಾಷಣೆ ಭಾಗ 2ನ್ನು ಕಾಂಗ್ರೆಸ್‌ ಇಂದು ಬಿಡುಗಡೆ ಮಾಡಿದೆ.

DK Shivakumar and Siddaramaiah conversation part 2 Unveiled Explosive Information sat

ಬೆಂಗಳೂರು (ಮೇ 08): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನದಾಳದ ಸಂಭಾಷಣೆ ಭಾಗ 2ನ್ನು ಕಾಂಗ್ರೆಸ್‌ ಇಂದು ಬಿಡುಗಡೆ ಮಾಡಿದೆ. ಆದರೆ, ಈ ಸಂಭಾಷಣೆಯಲ್ಲಿ ರಾಜ್ಯ ರಾಜಕಾರಣದ ಸ್ಪೋಟಕ ಮಾಹಿತಿ ಚರ್ಚೆ ಮಾಡಿದ್ದಾರೆ. ಜೊತೆಗೆ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಬಗ್ಗೆಯೇ ಜಪ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಸ್ಪೋಟಕ ಮಾಹಿತಿ: 
ಸುಮಾರು 100 ವೀರಶೈವ ಲಿಂಗಾಯತ ಸ್ವಾಮೀಜಿಗಳು ಕರೆ ಮಾಡಿದ್ದರು. ನಾವು ಈ ಬಾರಿ ಕಾಂಗ್ರೆಸ್ ಪಾರ್ಟಿಗೆ ಸಹಾಯ ಮಾಡುತ್ತೇವೆ ಎಂದಿದ್ದಾರೆ. ಹಿಂದೆ ಯಡಿಯೂರಪ್ಪ ಅವರಿಗೆ ಅನ್ಯಾಯ ಆಯ್ತು ಹೋಯ್ತು. ಈಗ ಅವರ ಮೇಲೆ ನಂಬಿಕೆ ಹೋಗಿದೆ ಇವರಿಗೆ ವೋಟ್ ಕೇಳಲು ಮರ್ಯಾದೆ ಇಲ್ಲ. ನಾವಂತೂ ಕಾಂಗ್ರೆಸ್ ಗೆ ಆಶೀರ್ವಾದ ಮಾಡುತ್ತೇವೆ ಅಂತ ಹೇಳಿದ್ದಾರೆ. ನಿಮ್ಮ (ಸಿದ್ದರಾಮಯ್ಯ) ಜೊತೆಗೂ ಕೂಡ ಮಾತನಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್‌ ಹೇಳಿದರು.

ಸಿದ್ದು-ಡಿಕೆಶಿ ಚರ್ಚೆ ವಿಡಿಯೋ ವೈರಲ್‌: ಕಷ್ಟಸುಖ ಆಲಿಸುತ್ತ ಉಭಯ ನಾಯಕರ ಹರಟೆ

  • ಸಂಭಾಷಣೆ ಭಾಗ-2ರಲ್ಲಿ ಏನೇನಿದೆ ಎಂಬಿದರ ವಿವರ ಇಲ್ಲಿದೆ ನೋಡಿ..
  • ಸಿದ್ದರಾಮಯ್ಯ- ನಾವು ಬಂದ ಮೇಲೆ ಇಲ್ಲದಿರ ಕ್ಯಾಂಟೀನ್ ಮತ್ತೆ ಪ್ರಾರಂಭ ಮಾಡಬೇಕು.
  • ಡಿ.ಕೆ.ಶಿವಕುಮಾರ್- ನಿನ್ನೆ ಎಲ್ಲ ಬಿಜೆಪಿಯವರು ಇಂದಿರಾ ಕ್ಯಾಂಟೀನಲ್ಲೇ ಊಟ ಮಾಡಿದ್ದಾರೆ. 
  • ಸಿದ್ದು- ಬಿಜೆಪಿಯವರು ಅಟಲ್ ಕ್ಯಾಂಟೀನ್ ಮಾಡ್ತೀವಿ ಅಂತ ಹೇಳಿದ್ದಾರೆ. 
  • ಡಿಕೆಶಿ- ಅವರೆಲ್ಲಿ ಬರ್ತಾರೆ ಸಾರ್. ನಿನ್ನೆ ಕೂಡ ಒಂದು ಸರ್ವೇ ಬಂದಿದೆ 62 ರ ಮೇಲೆ ಅವರು ದಾಟಲ್ಲ. ಜೆಡಿಎಸ್ 20-23 ಬರಬಹುದು. ಮೂರು ಪಕ್ಷೇತರರು ಗೆಲ್ಲಬಹುದು ಈ ಬಾರಿ ಅಂತ ಇದೆ.
  • ಸಿದ್ದು- ಇಂಡಿಪೆಂಡೆಂಟ್ ಐದು ತನಕ ಬರುವ ಸಾಧ್ಯತೆ ಇದೆ. ಬಿಜೆಪಿ ಅವರು ಎಲ್ಲರಿಗೂ ಹೆದರಿಸುತ್ತಿದ್ದಾರೆ. ನನ್ನ ಬಿಸಿನೆಸ್ ಪಾರ್ಟ್ನರ್ ಕೂಡ ಫೋನ್ ಎತ್ತುತ್ತಿಲ್ಲ ಅಷ್ಟು ಹೆದರಿಸಿದ್ದಾರೆ. ಡೆವಲಪರ್‌ಗಳಿಗೆಲ್ಲ ಬೆದರಿಸಿದ್ದಾರೆ. 
  • ಡಿಕೆಶಿ- ನಮ್ಮ ಗ್ಯಾರಂಟಿ ಕಾರ್ಡು ನಮ್ಮ ಮಾತು ನಮ್ಮ ಬದ್ಧತೆ ಇದೆ ಸಾಕು ಜನರಿಗೆ. ನಮ್ಮ ಮೇಲೆ ನಂಬಿಕೆ ಇದೆ. ಹಿಂದಿನ ಪ್ರಣಾಳಿಕೆಯ ಘೋಷಣೆಗಳನ್ನ ಈಡೇರಿಸಿದ್ದೇವೆ.
  • ಸಿದ್ದು- ನಮ್ಮ ಗ್ಯಾರಂಟಿ ಕಾರ್ಡ್ ಗಳಿಗೆ ಸಹಿ ಮಾಡಿದ್ದೇವೆ ಇದು ಸಾಕು. ಮಹದಾಯಿ ಮೇಕೆದಾಟು ವಿಚಾರದಲ್ಲಿ ಏನು ಮಾತಾಡಲಿಲ್ಲ. 
  • ಡಿಕೆಶಿ - ಪ್ರಧಾನಿಗಳು ಕೂಡ ಮಾನವೀಯ ದೃಷ್ಟಿಯಿಂದಲೂ ಮಾತನಾಡಲಿಲ್ಲ. ನರೇಂದ್ರ ಮೋದಿ ಯಾವತ್ತೂ ಮೀಡಿಯಾದವರನ್ನು ಭೇಟಿ ಮಾಡಲ್ಲ. 
  • ಸಿದ್ದು- ಪ್ರಶ್ನೆ ಕೇಳಕ್ಕೆ ಅವಕಾಶ ಇಲ್ಲ ಅವರು ಏನು ಹೇಳ್ತಾರೋ ಅದನ್ನೇ ರಿಪೋರ್ಟ್ ಮಾಡಬೇಕು. ಮಾಡದೆ ಹೋದ್ರೆ ಹೆದರಿಸುತ್ತಾರೆ. ಸಂತೋಷ್ ಹಿಂದುತ್ವ ಸಾಕು, ಲಿಂಗಾಯತರು ಬೇಡ ಅಂತ ಹೇಳಿದ್ದಾರೆ. 
  • ಡಿಕೆಶಿ - ಬೊಮ್ಮಾಯಿ ಅವರಿಗೆ ಪ್ರಾಮುಖ್ಯತೆ ಇಲ್ಲ. ಬೊಮ್ಮಾಯಿನ ಡಸ್ಟ್ ಬಿನ್ ಹಾಕಿದ್ದಾರೆ.
  • ಸಿದ್ದು- ಈಗಾಗಲೇ ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್ ಲಿಂಗಾಯತ ನಾಯಕರನ್ನ ಕಡೆಗಣಿಸಿದ್ದೇ ಬಿ.ಎಲ್. ಸಂತೋಷ್. ಜಗದೀಶ್ ಶೆಟ್ಟರ್ ಕಣ್ಣೀರು ಹಾಕಿದ್ದಾರೆ. ಲಕ್ಷ್ಮಣ ಸವದಿ 5 ವರ್ಷ ವಿಧಾನ ಪರಿಷತ್‌ ಸದಸ್ಯ ಇದ್ದವರು ಕಾಂಗ್ರೆಸ್ ಪಾರ್ಟಿಗೆ ಬರುತ್ತಾನೆ ಅಂದರೆ ಏನರ್ಥ. 
  • ಡಿಕೆಶಿ- ಶಿವಮೊಗ್ಗದಿಂದ ಆಯನೂರು ಮಂಜುನಾಥ್ ಟಿಕೆಟ್ ಕೇಳಿದ್ದರು, ಆದರೆ ನಾವು ಕೊಡಲಿಲ್ಲ. 

ಲಿಂಗಾಯತ ಸಮಾಜ ಸಮುದ್ರ ಇದ್ದಂತೆ: ಕಾಂಗ್ರೆಸ್‌ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಮತದಾನಕ್ಕೆ ಇನ್ನೆರಡೇ ದಿನ ಬಾಕಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಭರ್ಜರಿ ಬಹಿರಂಗ ಪ್ರಚಾರವನ್ನು ಮಾಡುತ್ತಿವೆ. ಇನ್ನು ನಾಳೆ ಮನೆ ಮನೆ ಪ್ರಚಾರವನ್ನು ಮಾತ್ರ ಮಾಡಲು ಅವಕಾಶವಿದೆ. ಮೇ 10ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಮೂರು ಪಕ್ಷಗಳಿಂದ ರಾಜ್ಯದಲ್ಲಿ ಸ್ವತಂತ್ರ ಅಧಿಕಾರ ಹಿಡಿಯಬೇಕು ಎಂದು ಕಾದು ಕುಳಿತಿವೆ.ಇನ್ನು ಒಂದು ವಾರದಲ್ಲಿ ಯಾವ ಪಕ್ಷ ಸರ್ಕಾರ ರಚನೆ ಮಾಡಲಿದೆ ಎಂಬ ಸಂಪೂರ್ಣ ಮಾಹಿತಿ ತಿಳಿಯಲಿದೆ.

Latest Videos
Follow Us:
Download App:
  • android
  • ios